IPL 2023: ಈ ಬಾರಿ ಐಪಿಎಲ್ ಗೆ ಮತ್ತಷ್ಟು ರಂಗು: ಈ ಬಾರಿ ಐಪಿಎಲ್ ಆಡಲಿರುವ ಬೆಂಕಿ ಬ್ಯಾಟ್ಸಮನ್ ಯಾರು ಗೊತ್ತೇ?
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮುಂದಿನ ಸೀಸನ್ ಗಾಗಿ ಹರಾಜು ಪ್ರಕ್ರಿಯೆ ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ. ಇದಕ್ಕೂ ಮೊದಲೇ ಬಿಸಿಸಿಐ ಎಲ್ಲಾ ಪ್ರಾಚೈಸಿಗಳಿಗೂ ತಮ್ಮ ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಅಥವಾ ರಿಲೀಸ್ ಮಾಡುವ ಅವಕಾಶವನ್ನು ನೀಡಲಾಗಿತ್ತು. ಅದರಂತೆ ಪ್ರತಿ ತಂಡವು ಮುಂದಿನ ಲೀಗ್ ಗಾಗಿ ಆಟಗಾರರನ್ನು ಉಳಿಸಿಕೊಳ್ಳುವ ಅಥವಾ ಬಿಡುಗಡೆ ಮಾಡುವ ಸ್ವಾತಂತ್ರ್ಯವನ್ನು ಪಡೆದುಕೊಂಡಿತ್ತು. ಅದರಂತೆ ತಂಡಗಳು ತಮಗೆ ಬೇಕಾದ ಆಟಗಾರರನ್ನು ಮುಂದಿನ ಐಪಿಎಲ್ ಸೀಸನ್ಗೆ ಸಾಕಷ್ಟು ಆಟಗಾರರನ್ನು ಉಳಿಸಿಕೊಂಡಿತ್ತು. ಜೊತೆಗೆ ಕೆಲವು ಆಟಗಾರರನ್ನು ತಂಡದಿಂದ ರಿಲೀಸ್ ಮಾಡಿ ಹರಾಜು ಪ್ರಕ್ರಿಯೆಗೆ ಬಿಡುಗಡೆಗೊಳಿಸಿತ್ತು.
ಅದರಂತೆ ಈಗಾಗಲೇ ಎಲ್ಲಾ ಪ್ರಾಚೈಸಿಗಳೂ ತಮ್ಮ ತಂಡದಲ್ಲಿ ಉಳಿಸಿಕೊಂಡಿರುವ ಮತ್ತು ರಿಲೀಸ್ ಮಾಡಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಿದೆ. ಇದರ ಬೆನ್ನಲ್ಲೇ ಹೊಸ ಆಟಗಾರರು ಸಹ ಹರಾಜು ಪ್ರಕ್ರಿಯೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ತಮ್ಮ ಹೆಸರನ್ನು ಹರಾಜು ಪ್ರಕ್ರಿಯೆಯಲ್ಲಿ ನೋಂದಾಯಿಸಿಕೊಳ್ಳುತ್ತಿರುವವರಲ್ಲಿ ಒಬ್ಬ ಸ್ಪೋಟಕ ಆಲ್ರೌಂಡರ್ ಸೇರಿದಂತೆ ಸಾಕಷ್ಟು ನಿರೀಕ್ಷ ಸೃಷ್ಟಿಸಿರುವ ಹೊಸ ಆಟಗಾರರು ಇದ್ದಾರೆ ಎನ್ನುವುದು ವಿಶೇಷ. ಇದೇ ಡಿಸೆಂಬರ್ 23 ರಂದು ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಅದ್ಭುತವಾಗಿ ಆಡಬಲ್ಲ ಹೊಸ ಹೊಸ ಆಟಗಾರರು ಪಟ್ಟಿಯಲ್ಲಿದ್ದಾರೆ. ಇದನ್ನು ಓದಿ.. Kannada News: ಕೊನೆ ಕ್ಷಣದಲ್ಲಿ ಕರೆದರೂ ಕೂಡ ಅದಿತಿ ಪ್ರಭುದೇವ ಮದುವೆಗೆ ಹೋದ ದರ್ಶನ್, ವಿಜಯಲಕ್ಷ್ಮಿ ಕೊಟ್ಟ ಉಡುಗೊರೆ ಏನು ಗೊತ್ತೇ??

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿಗೆ ಆಸ್ಟ್ರೇಲಿಯಾದ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು “ನಾನು ಸಾಕಷ್ಟು ಉತ್ಸುಕನಾಗಿದ್ದೇನೆ. ಈ ಒಂದು ಐಪಿಎಲ್ ಬಗ್ಗೆ ಬಹಳ ನಿರೀಕ್ಷೆ ಹೊಂದಿದ್ದೇನೆ. ನನ್ನನ್ನು ನಾನು ಸುಧಾರಿಸಿಕೊಳ್ಳಲು ಇದು ಒಳ್ಳೆಯ ಅವಕಾಶವಾಗಬಹುದು ಎಂದು ನಂಬಿದ್ದೇನೆ. ಈ ಹೊಸ ವಾತಾವರಣದಿಂದ ನಾನು ಸಾಕಷ್ಟು ಸುಧಾರಿಸಿಕೊಳ್ಳುವ ಅವಕಾಶ ಸಿಗಲಿದೆ. ವಾತಾವರಣ ಬದಲಾಗುವುದರಿಂದಾಗಿ ಆಟಗಾರರಿಗೆ ತಮ್ಮ ಸಾಮರ್ಥ್ಯ ಏನೆನ್ನುವುದು ಸಾಬೀತುಪಡಿಸಲು ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ..Kannada News: ರಶ್ಮಿಕಾ ರವರನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಶೆಟ್ರು ಗ್ಯಾಂಗ್. ಮತ್ತೊಮ್ಮೆ ಟಾಂಗ್ ಕೊಟ್ಟ ಪ್ರೋಮೊದ್ ಶೆಟ್ಟಿ. ಹೇಳಿದ್ದೇನು ಗೊತ್ತೇ?