Kannada News: ಕೊನೆ ಕ್ಷಣದಲ್ಲಿ ಕರೆದರೂ ಕೂಡ ಅದಿತಿ ಪ್ರಭುದೇವ ಮದುವೆಗೆ ಹೋದ ದರ್ಶನ್, ವಿಜಯಲಕ್ಷ್ಮಿ ಕೊಟ್ಟ ಉಡುಗೊರೆ ಏನು ಗೊತ್ತೇ??
Kannada News: ನಟಿ ಅದಿತಿ ಪ್ರಭುದೇವ (Aditi Prabhudeva) ಅವರ ಮದುವೆ ಅದ್ದೂರಿಯಾಗಿ ನೆನ್ನೆ ನಡೆದಿದೆ. ಚಿತ್ರರಂಗದ ಹಿನ್ನೆಲೆ ಇರದ ವ್ಯಕ್ತಿ ಒಬ್ಬರನ್ನು ನಟಿ ಅದಿತಿ ಪ್ರಭುದೇವ ವರಿಸಿದ್ದಾರೆ. ಇದು ಪಕ್ಕ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಕುಟುಂಬದವರೆಲ್ಲ ಒಪ್ಪಿ ವಿವಾಹ ಕಾರ್ಯಕ್ರಮ ನಡೆಸಲಾಗಿದೆ. ಮೊದಲಿಗೆ ಕುಟುಂಬದವರ ನಡುವೆ ಮಾತುಕತೆಯಾಗಿ ಈ ವಿವಾಹ ನಿಶ್ಚಯಗೊಂಡಿತು. ಇದು ಅರೆಂಜ್ಡ್ ಮ್ಯಾರೇಜ್ ಆಗಿದ್ದು ಅದಿತಿಯವರು ಮನೆಯವರು ತೋರಿಸಿದ ಹುಡುಗನನ್ನು ಇಷ್ಟಪಟ್ಟು ಮದುವೆಯಾಗಿದ್ದಾರೆ. ಇವರ ಮದುವೆಗೆ ಚಿತ್ರರಂಗದ ಗಣ್ಯಾತಿಗಣ್ಯರು ಆಗಮಿಸಿದ್ದರು. ಈ ನಡುವೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಮತ್ತು ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi), ಮದುವೆಗೆ ಬಂದು ಶುಭ ಹಾರೈಸಿದ್ದರು. ಈ ವೇಳೆ ಅವರು ನೀಡಿದ ದುಬಾರಿ ಗಿಫ್ಟ್ ಕುರಿತು ಚರ್ಚೆಯಾಗುತ್ತಿದೆ.
ನೆನ್ನೆ ಅದ್ದೂರಿಯಾಗಿ ನಟಿ ಅದಿತಿ ಪ್ರಭುದೇವ ಅವರ ವಿವಾಹ ಸಮಾರಂಭ ನೆರವೇರಿದೆ. ಮನೆಯವರು ತೋರಿಸಿದ ಹುಡುಗನ ಜೊತೆಗೆ ಅವರು ಸಪ್ತಪದಿ ತುಳಿದಿದ್ದಾರೆ. ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು ತಮ್ಮ ಮದುವೆಯ ಕುರಿತು ಮೊದಲ ಬಾರಿ ಹಂಚಿಕೊಂಡಿದ್ದರು. ಆನಂತರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹುಡುಗನ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಿದ್ದರು. ಜೊತೆಗೆ ಸಾಕಷ್ಟು ಸಂದರ್ಶನದಲ್ಲಿ ಅವರು ಮನೆಯವರು ತೋರಿಸಿದ ಹುಡುಗನನ್ನು ಒಪ್ಪಿಕೊಂಡು ಅವರನ್ನೇ ಸರಿಯಾದ ವ್ಯಕ್ತಿ, ರೈಟ್ ಪರ್ಸನ್ ಎಂದು ಭಾವಿಸಿ ಪ್ರೀತಿಸುತ್ತಿದ್ದೇನೆ ಎಂದು ಸಾಕಷ್ಟು ಸಲ ಹೇಳಿಕೊಂಡಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಮೋಡಿ ಮಾಡುತ್ತಿತ್ತು. ಇದೀಗ ಅದಿತಿ ಪ್ರಭುದೇವ ಅವರ ಮದುವೆ ನೆರವೇರಿದೆ. ಇದನ್ನು ಓದಿ.. Kannada Astrology: ನೀವು ಮನೆಯಲ್ಲಿ ಲವಂಗದ ಜೊತೆ ಈ ಚಿಕ್ಕ ಕೆಲಸ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಬೇಗ ಬೇಗ ಮಾಡಿ ಬಿಡುತ್ತೀರಾ. ಏನಾಗುತ್ತದೆ ಗೊತ್ತೇ?

ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯಾತಿ ಗಣ್ಯರು ಆಗಮಿಸಿದ್ದರು. ಅದಿತಿಯವರು ಮೊದಲಿಗೆ ಕಿರುತೆರೆಯಿಂದ ಆಗಮಿಸಿದವರು. ಹಾಗಾಗಿ ಸೀರಿಯಲ್ ನ ಸಾಕಷ್ಟು ನಟ ನಟಿಯರು ಕೂಡ ಅವರಿಗೆ ಸ್ನೇಹಿತರು. ಇದರಂತೆ ನಟಿ ರಂಜನಿ ರಾಘವನ್ (Ranjani Raghavan) ಸೇರಿದಂತೆ ಸಾಕಷ್ಟು ಕಿರುತರೆ ಕಲಾವಿದರು ಈ ಮದುವೆಗೆ ಆಗಮಿಸಿದ್ದರು. ಯಶ್ (Yash), ರಾಧಿಕಾ ಪಂಡಿತ್ (Radhika Pandit) ಸೇರಿದಂತೆ ಕನ್ನಡ ಚಿತ್ರರಂಗದ ದೊಡ್ಡ ದಂಡೆ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಇನ್ನು ಅದಿತಿಯವರ ಮದುವೆಗೆ ಬಂದಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರು ದಂಪತಿಗೆ ಶುಭ ಹಾರೈಸಿದ್ದಾರೆ. ದೊಡ್ಡದೊಂದು ಹೂಬೊಕ್ಕೆ ಕೊಟ್ಟು ಅವರ ಮದುವೆಗೆ, ಅವರ ವೈವಾಹಿಕ ಜೀವನಕ್ಕೆ ಹರಸಿದ್ದಾರೆ. ಅಲ್ಲದೆ ಈ ವೇಳೆ ದಂಪತಿಗಳಿಗೆ ಒಂದು ದುಬಾರಿ ಬೆಲೆ ಬಾಳುವ ಗಿಫ್ಟ್ ಒಂದನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ.. Kannada News: ಮದುವೆಯಾಗುತ್ತಾರೆ ಎನ್ನಲಾಗುತ್ತಿರುವ ಹರಿಪ್ರಿಯಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??