Kantara Rishab Shetty: ಬೇರೆ ಏನು ಅಲ್ಲ, ಕಾಂತಾರ ಸಿನಿಮಾ ಗೆಲ್ಲಲು ಅದೊಂದೇ ಕಾರಣ ಎಂದ ರಿಷಬ್ ಶೆಟ್ಟಿ, ನೀಡಿದ ಅಚ್ಚರಿ ಕಾರಣ ಏನು ಗೊತ್ತೇ??
Kantara Rishab Shetty: ಕಾಂತಾರ ಯಶಸ್ಸಿನಿಂದ ರಿಷಬ್ ಶೆಟ್ಟಿ ಅವರು ಇಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾ ಬಿಡುಗಡೆಯಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಸೆಪ್ಟೆಂಬರ್ 30ರಂದು ಬಿಡುಗಡೆಯಾದ ಕಾಂತಾರ, ಇಂದಿಗೂ ಥಿಯೇಟರ್ ಗಳಲ್ಲಿ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಇಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗಿ ಎಲ್ಲಾ ಪ್ರದೇಶಗಳಲ್ಲೂ ಹೆಸರು ಮಾಡಿದೆ. ಕಾಂತಾರ ಯಶಸ್ಸಿನಿಂದ ರಿಷಬ್ ಅವರು ಭಾರತದ ಎಲ್ಲಾ ಊರುಗಳಲ್ಲಿ ಹೋಗಿ ಕಾರ್ಯಕ್ರಮಗಳಲ್ಲಿ ಪ್ರೊಮೋಷನ್ ಗಳಲ್ಲಿ ಭಾಗವಹಿಸಿದ್ದಾರೆ. ಇದೀಗ ರಿಷಬ್ ಅವರು ತಮ್ಮ ಸಿನಿಮಾ ಸಕ್ಸಸ್ ಗೆ ಕಾರಣ ಏನು ಎಂದು ವಿಶ್ಲೇಷಿಸಿದ್ದಾರೆ.
ರಿಷಬ್ ಅವರು ಟೈಮ್ಸ್ ನೌ ಸಮಿಟ್ 2022ರಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ ಖ್ಯಾತ ಹಿರಿಯನಟ ಅನುಪಮ್ ಖೇರ್ ಮತ್ತು ರೈಟರ್ ಚೇತನ್ ಭಗತ್ ಸಹ ಇದ್ದರು, ಆಗ ಕಾಂತಾರ ಸಿನಿಮಾ ಸಕ್ಸಸ್ ಬಗ್ಗೆ, ದಕ್ಷಿಣದ ಸಿನಿಮಾಗಳು ಒಳ್ಳೆಯ ಹೆಸರು ಮಾಡುತ್ತಿರುವ ಬಗ್ಗೆ ಚರ್ಚೆಯಾದಾಗ ರಿಷಬ್ ಶೆಟ್ಟಿ ಅವರು ಹೇಳಿದ್ದು ಹೀಗೆ, “ಲಾಕ್ ಡೌನ್ ಸಮಯದಿಂದ ಓಟಿಟಿಯಲ್ಲಿ ಸಿನಿಮಾ ನೋಡುತ್ತಿರುವ ಜನರು ಹೆಚ್ಚಾಗಿ ಪ್ರಾದೇಶಿಕ ಕಥೆ ಇರುವ ಕಥೆಗಳನ್ನು ನೋಡಲು ಇಷ್ಟಪಡುತ್ತಿದ್ದಾರೆ. ನಮ್ಮ ಕಮರ್ಶಿಯಲ್ ಸಿನಿಮಾಗಳಲ್ಲಿ ಪಾಶ್ಚಿಮಾತ್ಯದ ಶೈಲಿ ಕಂಡುಬರುತ್ತಿರುವುದು ಹೆಚ್ಚು, ಪ್ರಾದೇಶಿಕ ಕತೆಗಳು ನಮ್ಮ ಹಳ್ಳಿಯಲ್ಲಿ ಸಿಗುತ್ತದೆ, ಓಟಿಟಿಯಲ್ಲಿ ಸಿಗುವುದಿಲ್ಲ.
ಕಾಂತಾರ ಸಿನಿಮಾದಲ್ಲಿ ನಾನು ಹೇಳಿರುವುದು ನಮ್ಮ ಹಳ್ಳಿಯ ಕಥೆಯನ್ನು. ಇದನ್ನು ಓದಿ..Kannada News: ತನ್ನ ಸಿನಿಮಾಗಾಗಿ ಬಾಲಿವುಡ್ ಖ್ಯಾತ ನಟಿಯನ್ನು ತರಲು ಮುಂದಾದ ದ್ರುವ ಸರ್ಜಾ. ಬರುತ್ತಿರುವ ಚೆಲುವೆ ಯಾರು ಗೊತ್ತೇ?

ಪ್ರಾದೇಶಿಕ ಕಥೆ ಹೆಚ್ಚು ಜನರನ್ನು ತಲುಪುತ್ತದೆ ಎಂದು ನಾನು ನಂಬುತ್ತೇನೆ. ನಾವು ಸಿನಿಮಾ ಮಾಡಿರುವುದು ದೈವಾರಾಧನೆ ಬಗ್ಗೆ. ಜೊತೆಗೆ ನಮ್ಮ ಭಾರತ ಕೃಷಿಯನ್ನು ಅವಲಂಬಿಸಿರುವ ದೇಶ, ಇಲ್ಲಿ ಜನರ ವೃತ್ತಿಯ ಜೊತೆಗೆ ಒಂದು ಶಕ್ತಿಯನ್ನು ನಂಬಿರುತ್ತಾರೆ. ಅದು ನಮ್ಮ ಭಾವನೆ, ಆ ವಿಷಯಗಳೇ ಜನರಿಗೆ ಕನೆಕ್ಟ್ ಆಗಿರಬಹುದು. ಭಾರತ ಚಿತ್ರರಂಗಕ್ಕೆ ಬಾಲಿವುಡ್ ನ ಕೊಡುಗೆ ಬಹಳ ದೊಡ್ಡದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ನಾವು ಏನು ಹೇಳಬೇಕು..” ಎಂದು ಹೇಳಿದ್ದಾರೆ ರಿಷಬ್ ಶೆಟ್ಟಿ. ಈ ಮೂಲಕ ರಿಷಬ್ ಅವರು ಬಾಲಿವುಡ್ ಅನ್ನು ಬಿಟ್ಟುಕೊಡದೆ ಮಾಗನಾಡಿದ್ದಾರೆ. ಇದನ್ನು ಓದಿ.. Cricket News: ಮತ್ತೆ ವಾಪಸ್ಸು ತಂಡ ಸೇರಿಕೊಂಡು ದೂಳು ಎಬ್ಬಿಸಲು ರೋಹಿತ್ ಶರ್ಮ ಮಾಡುತ್ತಿರುವುದೇನು ಗೊತ್ತೇ??