Kannada News: ಫೋಟೋಗಳ ಮೂಲಕ ದೇಶವನ್ನೇ ಗೆದ್ದಿರುವ ನಟಿ ಪಾಯಲ್ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಹಿರಿಯ ನಟ ಪೃತ್ವಿ ರಾಜ್. ಹೇಳಿದ್ದೇನು ಗೊತ್ತೇ?

44

Kannada News: ತೆಲುಗು ಚಿತ್ರರಂಗದಲ್ಲಿ ತಮ್ಮ ಅದ್ಬುತ ಕಾಮಿಡಿ ಟೈಮಿಂಗ್ ಇಂದ ಗುರುತಿಸಿಕೊಂಡಿರುವವರು ನಟ ಪೃಥ್ವಿರಾಜ್ (Prithviraj). ಇವರ ಬಗ್ಗೆ ಗೊತ್ತಿಲ್ಲದೆ ಇರುವವರು ಬಹಳ ಕಡಿಮೆ, ಬಹಳಷ್ಟು ತೆಲುಗು ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ಅಭಿನಯಿಸಿ ಒಳ್ಳೆಯ ಹೆಸರು ಪಡೆದಿದ್ದಾರೆ. ಕೆಲ ಸಮಯ ನಟನೆಯಿಂದ ಬ್ರೇಕ್ ಪಡೆದಿದ್ದ ಪೃಥ್ವಿರಾಜ್ ಅವರು ಇದೀಗ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿ, ಮತ್ತೆ ನಟನೆ ಶುರು ಮಾಡಿದ್ದಾರೆ. ಈಗ ಇವರು ನಟಿ ಪಾಯಲ್ ರಜಪೂತ್ (Payal Rajput) ಅವರ ಬಗ್ಗೆ ನೀಡಿರುವ ಹೇಳಿಕೆಗಳು ಭಾರಿ ವೈರಲ್ ಆಗುತ್ತಿದೆ.

ಆರ್.ಎಕ್ಸ್.100 (RX 100) ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಪಾಯಲ್ ರಜಪೂತ್, ತಮ್ಮ ಸೌಂದರ್ಯದ ಮೂಲಕ ಎಲ್ಲರನ್ನು ಗೆದ್ದಿದ್ದಾರೆ. ಇದೀಗ ಇವರ ಬಗ್ಗೆ ನಟ ಪೃಥ್ವಿರಾಜ್ ಮಾತನಾಡಿದ್ದು, “ಪಾಯಲ್, ಮೈ ಲವ್ವರ್” ಎಂದು ಹೇಳಿದ್ದಾರೆ. ಈ ಮಾತು ಈಗ ಭಾರಿ ವೈರಲ್ ಆಗುತ್ತಿದೆ. ಅಖಿಲಾ ಕರಿಶ್ಮ ಮತ್ತು ರಾಮ್ ಜಕ್ಕಲ ಮುಖ್ಯ ಪಾತ್ರದಲ್ಲಿ ನಟಿಸಿ, ಎಸ್.ವಿ ಶಿವಾ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ, ಹಾಗೆಯೇ ಹೇಮಾ ರೆಡ್ಡಿ ಅವರು ನಿರ್ದೇಶನ ಮಾಡಿರುವ ಎಪಿ04ಈ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಈ ಟ್ರೈಲರ್ ಬಗ್ಗೆ ಪೃಥ್ವಿ ರಾಜ್ ಅವರು ಮಾತನಾಡಿ, ಟ್ರೈಲರ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ. ಇದನ್ನು ಓದಿ.. Kantara Rishab Shetty: ಬೇರೆ ಏನು ಅಲ್ಲ, ಕಾಂತಾರ ಸಿನಿಮಾ ಗೆಲ್ಲಲು ಅದೊಂದೇ ಕಾರಣ ಎಂದ ರಿಷಬ್ ಶೆಟ್ಟಿ, ನೀಡಿದ ಅಚ್ಚರಿ ಕಾರಣ ಏನು ಗೊತ್ತೇ??

ಪೃಥ್ವಿರಾಜ್ ಅವರು ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ತಮಾಶೆಯಿಂದ ಮಾತನಾಡಿ ಎಲ್ಲರೂ ನಗುವ ಹಾಗೆ ಮಾಡಿದ್ದಾರೆ.. ಈ ಚಿತ್ರತಂಡ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಇವರು ಹಣ ಗಳಿಸಲು ಬಂದವರಲ್ಲ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎನ್ನುವ ಹಂಬಲದಿಂದ ಬಂದಿದ್ದಾರೆ ಎಂದು ಹೇಳಿದ್ದಾರೆ. ಈ ಸಿನಿಮಾ ಖಂಡಿತ ಹಿಟ್ ಆಗುತ್ತೆ.. ನಾನು, ಜೆಸ್ಸಿ ಮಾಯಾಪೇಟಿಕಾ ಒಂದು ಸಿನಿಮಾದಲ್ಲಿ ನಟಿಸಿದ್ದೆವು.. ಅದರಲ್ಲಿ ನಾನು ಪಾಯಲ್ ರಜಪೂತ್ ಪ್ರೇಮಿಯಾಗಿದ್ದೆ..” ಎಂದು ಹೇಳಿದ್ದಾರೆ. ಇದನ್ನು ಕೇಳಿದ ಎಲ್ಲರೂ ನಕ್ಕಿದ್ದಾರೆ. ಇದನ್ನು ಓದಿ.. Cricket News: ಈಗ ಅಷ್ಟೇ, ಕ್ರಿಕೆಟ್ ನಲ್ಲಿ ಅಂಬೆಗಾಲು ಇಡುತ್ತಿರುವ ಸೂರ್ಯ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ರವಿ ಶಾಸ್ತ್ರೀ. ಹೇಳಿದ್ದೇನು ಗೊತ್ತೆ?