Kannada News: ತನ್ನ ಸಿನಿಮಾಗಾಗಿ ಬಾಲಿವುಡ್ ಖ್ಯಾತ ನಟಿಯನ್ನು ತರಲು ಮುಂದಾದ ದ್ರುವ ಸರ್ಜಾ. ಬರುತ್ತಿರುವ ಚೆಲುವೆ ಯಾರು ಗೊತ್ತೇ?
Kannada News: ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ನಟ ಧ್ರುವ ಸರ್ಜಾ (Dhruva Sarja). ಧ್ರುವ ಸರ್ಜಾ ಇದೀಗ ಮಾರ್ಟಿನ್ (Martin) ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಹಾಗೂ ಚಿತ್ರದ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ಇದೇ ವೇಳೆ ನಟ ದ್ರುವ ಸರ್ಜಾ ಅವರ ಮತ್ತೊಂದು ಸಿನಿಮಾದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆಗಳು ನಡೆಯುತ್ತಿವೆ. ನಟ ದ್ರುವ ಸರ್ಜಾ ಅವರ ಮುಂದಿನ ಸಿನಿಮಾದ ಹೆಸರು “ಕೆಡಿ” (KD),ಇನ್ನು ಈ ಸಿನಿಮಾವನ್ನು ಕನ್ನಡದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಪ್ರೇಮ್ (Jogi Prem) ನಿರ್ದೇಶನ ಮಾಡುತ್ತಿದ್ದಾರೆ.
ಸದ್ಯ ಕೆಡಿ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ ಈ ಸಿನಿಮಾದಲ್ಲಿ ಬಹುದೊಡ್ಡ ತಾರಾಬಳಗವೇ ಇದ್ದು, ಮಲಯಾಳಂ ನಟ ಮೋಹನ್ ಲಾಲ್ (Mohanlal), ತಮಿಳು ನಟ ವಿಜಯ್ ಸೇತುಪತಿ (Vijay Sethupathi) ಹಾಗೆ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಜೊತೆಗೆ, ಬಾಲಿವುಡ್ ನ ಕ್ಯಾತ ನಟಿ ಶಿಲ್ಪ ಶೆಟ್ಟಿ (Shilpa Shetty) ಅವರು ಕೂಡ ನಟಿಸಲಿದ್ದಾರೆ ಎನ್ನಲಾಗುತ್ತದೆ. ಇನ್ನು ವರ್ಷಗಳ ನಂತರ ನಟಿ ಶಿಲ್ಪ ಶೆಟ್ಟಿ ಕನ್ನಡಕ್ಕೆ ಮರಳುತ್ತಿದ್ದು, ಈ ವಿಷಯ ಅವರ ಅಭಿಮಾನಿಗಳಿಗೆ ಬಾರಿ ಖುಷಿ ತಂದು ಕೊಟ್ಟಿದೆ. ಇದನ್ನು ಓದಿ.. Kannada Astrology: ಸೃಷ್ಟಿಯಾಗಿದೆ ಮೂರು ರಾಶಿಗಳ ಸಂಯೋಗ: ಶನಿ ದೇವನ ಕೃಪೆ ಪಡೆಯಲು ಈ ಚಿಕ್ಕ ಕೆಲಸ ಮಾಡಿ ಸಾಕು.

ಇನ್ನು ಧ್ರುವ ಸರ್ಜಾ ಅವರ ಕೆಡಿಸಿನಿಮಾಗೆ ಮಾಲಾಶ್ರೀ (Malashree) ಅವರ ಮಗಳು (Radhana Ram) ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಇನ್ನು ಯಾವುದೇ ಸ್ಪಷ್ಟನೆ ದೊರಕಿಲ್ಲ. ಕೇಡಿ ಸಿನಿಮಾ 60ರ ದಶಕದ ರೌಡಿಸಂ ಸಿನಿಮಾ ಆಗಿರಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ತುಂಬಾ ಆಕ್ಷನ್ ಸೀನ್ ಗಳು ಇರಲಿದ್ದು, ಈಗಾಗಲೇ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಬಹುದೊಡ್ಡ ತಾರಾ ಬಳಗ ಇರುವ ಧ್ರುವ ಸರ್ಜಾ ಅವರ ಕೆಡಿ ಸಿನಿಮಾ ಯಾವ ರೀತಿ ಸದ್ದು ಮಾಡಲಿದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Prabhas: ಪ್ರಭಾಸ್ ಗೆ ಸಿಕ್ಕೇ ಬಿಟ್ಟಳು ಅಪ್ರತಿಮ ಸುಂದರಿ: ಈಕೆಯ ನೋಟಕ್ಕೆ ಇಡೀ ಜಗತ್ತೇ ತಲೆಬಾಗಬೇಕು. ಮದುವೆಗೆ ಸಿದ್ದ ಎಂದ ಸುಂದರಿ. ಯಾರು ಗೊತ್ತೇ??