Prabhas: ಪ್ರಭಾಸ್ ಗೆ ಸಿಕ್ಕೇ ಬಿಟ್ಟಳು ಅಪ್ರತಿಮ ಸುಂದರಿ: ಈಕೆಯ ನೋಟಕ್ಕೆ ಇಡೀ ಜಗತ್ತೇ ತಲೆಬಾಗಬೇಕು. ಮದುವೆಗೆ ಸಿದ್ದ ಎಂದ ಸುಂದರಿ. ಯಾರು ಗೊತ್ತೇ??
Prabhas: ಟಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ಅದು ನಟ ಪ್ರಭಾಸ್. ನಟ ಪ್ರಭಾಸ್ ಅವರು ದಕ್ಷಿಣಭಾರತ ಸಿನಿಮಾ ರಂಗದ ಬಹು ಬೇಡಿಕೆಯ ನಟರ ಪೈಕಿ ಒಬ್ಬರು. ಇನ್ನು ಪ್ರಭಾಸ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ಹಾಗೂ ನಿರ್ದೇಶಕರು ಅವರ ಮನೆಯ ಮುಂದೆ ಸಾಲಿನಲ್ಲಿ ನಿಂತಿದ್ದಾರೆ. ಸದ್ಯ ನಟ ಪ್ರಭಾಸ್ ಅವರ ಆದಿಪುರುಷ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಕೃತಿ ಸನನ್ ನಾಯಕಿಯಾಗಿ ಅಭಿನಯಿಸಿದ್ದಾರೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನಟ ಪ್ರಭಾಸ್ ಅವರ ಮದುವೆಯ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತದೆ. ನಟ ಪ್ರಕಾಶ್ ಅವರಿಗೆ 40 ವರ್ಷ ವಯಸ್ಸಾಗಿದ್ದರು ಸಹ ಇನ್ನು ಅವರು ಮದುವೆಯಾಗಿಲ್ಲ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬಾರಿ ಮೂಡಿದೆ. ಸದ್ಯ ಇದೀಗ ನಟಿ ಕೃತಿ ಸನನ್ ನಟ ಪ್ರಭಾಸ್ ಅವರನ್ನು ಮದುವೆಯಾಗುವ ಕೋರಿಕೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಕೃತಿ ಸನನ್ ಹಾಗೂ ನಟ ಪ್ರಭಾಸ್ ಆದಿಪುರುಷ್ ಸಿನಿಮಾದ ಶೂಟಿಂಗ್ ವೇಳೆ ಒಬ್ಬರಿಗೊಬ್ಬರು ಬಹಳ ಕ್ಲೋಸ್ ಆಗಿದ್ದಾರೆ. ಇನ್ನು ಇತ್ತೀಚಿಗೆ ನಟಿ ಕೃತಿ ಸನನ್ ಅವರಿಗೆ ಟೈಗರ್ ಶ್ರಾಫ್ ಕಾರ್ತಿಕ್ ಆರ್ಯನ್ ಹಾಗೂ ನಟ ಪ್ರಭಾಸ್ ನಡುವೆ ಯಾರ ಜೊತೆ ಪ್ಲರ್ಟ್, ಮದುವೆ ಹಾಗೂ ಡೇಟ್ ಮಾಡುತ್ತೀರಾ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ನಟಿ ಕೃತಿ ಸನನ್ ಟೈಗರ್ ಶ್ರಾಫ್ ಅವರನ್ನು ಡೇಟ್ ಮಾಡುವುದಾಗಿ, ಕಾರ್ತಿಕ್ ಆರ್ಯನ್ ಅವರ ಜೊತೆ ಪ್ಲರ್ಟ್ ಮಾಡುವುದಾಗಿ ಹಾಗೆ ಪ್ರಭಾಸ್ ಅವರ ಜೊತೆಗೆ ಮದುವೆಯಾಗುವ ಆಸೆ ವ್ಯಕ್ತ ಪಡಿಸಿದ್ದಾರೆ. ಸದ್ಯ ಈ ವಿಷಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.