Kannada News: ಮೊನ್ನೆ ತಾನೇ ಕನ್ನಡ ಬಿಟ್ಟು ಹೋಗಲ್ಲ ಎಂದಿದ್ದ ಸಪ್ತಮಿ: ದಿಡೀರ್ ಎಂದು ಪುಷ್ಪ ನಟನ ಜೊತೆ ಕಾಣಿಸಿಕೊಂಡದ್ದು ಯಾಕೆ ಗೊತ್ತೇ?

53

Kannada News: ಕಾಂತಾರ (Kantara) ಸಿನಿಮಾ ಇಂದ ಫಾರೆಸ್ಟ್ ಗಾರ್ಡ್ ಲೀಲಾ ಎಂದೇ ಖ್ಯಾತಿ ಪಡೆದಿದ್ದಾರೆ ನಟಿ ಸಪ್ತಮಿ ಗೌಡ (Sapthami Gowda). ಕಾಂತಾರ ಸಿನಿಮಾದಲ್ಲಿ ಇವರ ಅಭಿನಯ ಮತ್ತು ಸಹಜ ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿಂಗಾರ ಸಿರಿಯೇ ಹಾಡು ಇವರಿಗಾಗಿಯೇ ಹೇಳಿ ಮಾಡಿಸಿದ ಹಾಗಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಈ ನಟಿಗೆ ಕನ್ನಡದ ಮೇಲೆ ಅಭಿಮಾನ ಹೆಚ್ಚು, ಕನ್ನಡ ಚಿತ್ರರಂಗವನ್ನು ತಾನು ಬಿಟ್ಟು ಹೋಗುವುದಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು ಸಪ್ತಮಿ ಗೌಡ. ಆದರೆ ಈಗ ಮಾಲಿವುಡ್ ನಟ ಫಹದ್ ಫಾಸಿಲ್ (Fahadh Fasil) ಅವರೊಡನೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ..

ಫಹದ್ ಅವರೊಡನೆ ಇರುವ ಫೋಟೋ ಶೇರ್ ಮಾಡಿರುವ ಸಪ್ತಮಿ ಗೌಡ ಅವರು, “ಅವರು ಫಹದ್ ಫಾಸಿಲ್ ಸರ್..ಫಾಫಾ ಅಷ್ಟೇ.. ಸರ್ ಇಂದ ಒಂದು ಸುಂದರವಾದ ವಿಷಯವನ್ನ ಕೇಳಿ ತಿಳಿದುಕೊಂಡೆ.. ಸರ್ ನೀವು ಮೊದಲ ಸಿನಿಮಾ ಆದ್ಮೇಲೆ ಯಾಕೆ ಬ್ರೇಕ್ ತೆಗೆದುಕೊಂಡ್ರಿ.. ಅಂತ ಕೇಳಿದ್ದಕ್ಕೆ.. ಪ್ರೀತಿ, ಎಲ್ಲದರ ಮೇಲೆ ಪ್ರೀತಿ..” ಎಂದು ಉತ್ತರ ಕೊಟ್ಟರು ಎಂದು ಸಪ್ತಮಿ ಗೌಡ ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಲೈಕ್ಸ್ ಮತ್ತು ಕಮೆಂಟ್ಸ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.. ಇದನ್ನು ಓದಿ.. Kannada News: ರಮ್ಯಾ ರವರು ಯಾರನ್ನು ಮದುವೆಯಾಗುತ್ತಾರೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್, ಶಾಕ್ ಕೊಟ್ಟ ರಮ್ಯಾ. ಕಣ್ಣೀರು ಹಾಕಿದ ಫ್ಯಾನ್ಸ್.

ಸಪ್ತಮಿ ಗೌಡ ಅವರು ಈ ಫೋಟೋ ಶೇರ್ ಮಾಡಿದ ನಂತರ ಎಲ್ಲರೂ ಫಹದ್ ಫಾಸಿಲ್ ಅವರೊಡನೆ ಸಪ್ತಮಿ ಗೌಡ ಪುಷ್ಪ2 ಸಿನಿಮಾದಲ್ಲಿ ನಟಿಸುತ್ತಾರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಅಸಲಿ ವಿಚಾರ ಏನು ಎಂದು ಸಪ್ತಮಿ ಗೌಡ ಅವರು ರಿವೀಲ್ ಮಾಡಿಲ್ಲ. ಮಲಯಾಳಂ ನಟ ಆಗಿರುವ ಫಹದ್ ಫಾಸಿಲ್ ಅವರು ಇತ್ತೀಚಿನ ವರ್ಷಗಳಲ್ಲಿ ಬಹಳ ಬೇಡಿಕೆಯಲ್ಲಿರುವ ಅತ್ಯುತ್ತಮ ನಟ ಆಗಿದ್ದಾರೆ. ಪುಷ್ಪ, ವಿಕ್ರಂ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುಷ್ಪ2 ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತಿರುವ ಧೂಮಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ಮನೆಗೂ ಹೋಗುವ ಮುನ್ನ ಕಳ್ಳತನ ಮಾಡಿದ್ದ ರೂಪೇಶ್ ರಾಜಣ್ಣ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತೇ??