Biggboss Kannada: ಬಿಗ್ ಬಾಸ್ ಮನೆಗೂ ಹೋಗುವ ಮುನ್ನ ಕಳ್ಳತನ ಮಾಡಿದ್ದ ರೂಪೇಶ್ ರಾಜಣ್ಣ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದದ್ದು ಹೇಗೆ ಗೊತ್ತೇ??

32

Biggboss Kannada: ಬಿಗ್ ಬಾಸ್ (Bigg Boss) ಮನೆಯಲ್ಲಿ ಈಗ ವಿಭಿನ್ನವಾಗಿ ಕಾಡಿನ ಟಾಸ್ಕ್ ನೀಡಲಾಗಿದೆ. ಮನೆಯ ಸ್ಪರ್ಧಿಗಳಿಗೆ ಮನೆಯೊಳಗೆ ನೇರ ಪ್ರವೇಶ ಇಲ್ಲ, ಅವರು ಕಾಡಿನ ವಾತಾವರಣದಲ್ಲಿ ಗಾರ್ಡನ್ ಏರಿಯಾದಲ್ಲಿ ವಾಸ ಮಾಡುತ್ತಿದ್ದು, ಮನೆಯ ಸೌಕರ್ಯಗಳನ್ನು ಪಡೆಯಲು ಬಿಗ್ ಬಾಸ್ ಕೊಡುವ ಒಂದೊಂದು ಟಾಸ್ಕ್ ಗಳನ್ನು ಪೂರೈಸಬೇಕು. ಹೀಗಿರುವಾಗ, ಬಿಗ್ ಬಾಸ್ ಮನೆಮಂದಿಗೆಲ್ಲಾ ಒಂದು ಚಟುವಟಿಕೆ ನೀಡಿದ್ದರು. ಎಲ್ಲರೂ ತಮ್ಮ ಜೀವನದಲ್ಲಿ ಮರೆಯಲಾಗದ ಕಹಿ ಘಟನೆಯ ಬಗ್ಗೆ ಮಾತನಾಡಬೇಕಿತ್ತು. ಆಗ ರೂಪೇಶ್ ರಾಜಣ್ಣ (Roopesh Rajanna) ಅವರು ಒಂದು ಘಟನೆ ಹಂಚಿಕೊಂಡಿದ್ದಾರೆ..

ರೂಪೇಶ್ ರಾಜಣ್ಣ ಅವರು ತಮ್ಮ ಜೀವನದಲ್ಲಿ ಆದ ವಿಷಯವನ್ನು ಹೇಳಿದ್ದು ಹೀಗೆ, “ಆಗ ಐಟಿಐ ಮುಗಿದ ನಂತರ ಮುಂದೆ ಏನು ಎಂದು ಗೊತ್ತಿರಲಿಲ್ಲ. ಆಗ ನಾನು ಒಂದು ರೂಮ್ ನಲ್ಲಿ ಅಲ್ಲಿ ಮೆಸ್ ಗೆ ವಾರಕ್ಕೆ ಒಂದು ಸಾರಿ ದುಡ್ಡು ಕೊಡಬೇಕಿತ್ತು, ಒಂದು ದಿನ ದುಡ್ಡು ಕೊಟ್ಟಿಲ್ಲ ಅಂದ್ರೆ ಮರುದಿನದಿಂದ ಊಟ ಇಲ್ಲ ಎಂದು ಹೇಳಿದ್ರು. ಆಗ ನನಗೆ ಎನು ಮಾಡಬೇಕು ಅಂತ ಗೊತ್ತಾಗಲಿಲ್ಲ, ನಮ್ಮ ವಠಾರದಲ್ಲಿ ಸರ್ಕಾರಿ ಕೆಲಸ ಮಾಡುವವರಿದ್ದರು, ನಾನು ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಬಳಿ 100 ರೂಪಾಯಿ ಕದ್ದು ಸಿಕ್ಕಿಹಾಕಿಕೊಂಡೇ. ಕದ್ದಿರುವ ವಿಷಯ ಬೇರೆಯವರಿಗೆ ಗೊತ್ತಾದರೆ ಅಂತ ಭಯ ಇತ್ತು. ಇದನ್ನು ಓದಿ..Kannada News: ದಿಡೀರ್ ಎಂದು ಮನೆ ಬಿಟ್ಟು ಬಾಡಿಗೆ ಫ್ಲಾಟ್ ಗೆ ಹೊರಟ ವಿರಾಟ್ ಹಾಗೂ ಅನುಷ್ಕಾ. ಬಾಡಿಗೆ ಪಡೆದಿರುವುದು ಎಷ್ಟಕ್ಕೆ ಗೊತ್ತೇ??

ಆ ವ್ಯಕ್ತಿ ಈ ವಿಷಯ ಯಾರಿಗೂ ಗೊತ್ತಾಗಬಾರದು ಅಂದರೆ ನನಗೆ ಪತ್ರ ಬರೆದುಕೊಡು ಅಂತ ಕೇಳಿದ್ರು. ನಾನು ಪತ್ರ ಬರೆದು ಕೊಟ್ಟೆ, ಅಂದು ಒಂದು ರೂಮ್ ನಲ್ಲಿ 25 ಜನ ಸೇರಿ ನನಗೆ ಬೆತ್ತದಲ್ಲಿ ಚೆನ್ನಾಗಿ ಹೊಡೆದರು, ನಾನು ದುಡ್ಡು ಕದ್ದಿದ್ದು ಯಾಕೆ ಎಂದು ಕೇಳಲಿಲ್ಲ. 3ನೇ ಫ್ಲೋರ್ ಇಂದ ನನ್ನ ಬಟ್ಟೆ ಮತ್ತು ವಸ್ತುಗಳನ್ನು ಕೆಳಗೆ ಎಸೆದರು. ಆಗ ನಾನು ಬಸ್ ಸ್ಟ್ಯಾಂಡ್ ಗೆ ಹೋದೆ, ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ರಾತ್ರಿ ಪೂರ್ತಿ ಬಸ್ ಸ್ಟ್ಯಾಂಡ್ ನಲ್ಲೇ ಕಳೆದೆ. ಆ ದಿನ ನನಗೆ ಸು ಅಂತ ಬೈದ ಅದೇ ವ್ಯಕ್ತಿಗೆ ಎರಡು ವರ್ಷಗಳ ಹಿಂದೆ ನಾನು ಒಂದು ಸಮಸ್ಯೆಯಿಂದ ಪಾರು ಮಾಡಿದೆ..” ಎಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ ರೂಪೇಶ್ ರಾಜಣ್ಣ. ಇದನ್ನು ಓದಿ.. Kannada News: ರಮ್ಯಾ ರವರು ಯಾರನ್ನು ಮದುವೆಯಾಗುತ್ತಾರೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್, ಶಾಕ್ ಕೊಟ್ಟ ರಮ್ಯಾ. ಕಣ್ಣೀರು ಹಾಕಿದ ಫ್ಯಾನ್ಸ್.