Kannada News: ಇಡೀ ರಾಜ್ಯವನ್ನೇ ಹಾಡಿನ ಮೂಲಕ ಶೇಕ್ ಮಾಡಿರುವ ದಿಯಾ ಹೆಗ್ಡೆ, ಮತ್ತೊಮ್ಮೆ ಮಿಂಚಿಂಗ್. ಹೇಗಿದೆ ಗೊತ್ತೇ ವೈರಲ್ ಆದ ವಿಡಿಯೋ??
Kannada News: ಮನೆಯಲ್ಲಿರುವ ವೀಕ್ಷಕರಿಗೆ ಭಾರಿ ಮನರಂಜನೆ ಕೊಡುವುದು ಜೀಕನ್ನಡ (Zee Kannada) ವಾಹಿನಿ ಎಂದರೆ ತಪ್ಪಲ್ಲ. ಈ ಕಾರ್ಯಕ್ರಮದ ಮೂಲಕ ಹಲವು ಪ್ರತಿಭಾನ್ವಿತ ಹಾಡುಗರಿಗೆ ಸಿನಿಮಾಗಳಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಸಂಗೀತದಲ್ಲಿ ಹೊಸ ಕೆರಿಯರ್ ಸಿಕ್ಕಿದೆ. ಈಗ ಈ ಶೋನ 19ನೇ ಸೀಸನ್ ನಡೆಯುತ್ತಿದೆ. ಈಗಷ್ಟೇ ಶುರುವಾಗಿರುವ 19ನೇ ಸೀಸನ್ ನಲ್ಲಿ ಬಹುತೇಕ ಸ್ಪರ್ಧಿಗಳು ಜನರ ಗಮನ ಸೆಳೆಯುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ಪುಟ್ಟ ಮಗು ದಿಯಾ ಹೆಗ್ಡೆ (Diya Hegde) ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಪುಟ್ಟ ಪೋರಿ ತನ್ನದೇ ಆದ ಶೈಲಿಯಲ್ಲಿ ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ವೇದಿಕೆಯ ಮೇಲೆ ಈ ರೀತಿಯ ಹಾಡೊಂದನ್ನು ಅನುಶ್ರೀ (Anushree) ಅವರ ಬಗ್ಗೆ ಹಾಡಿದ್ದು, ಅನುಶ್ರೀ ಅವರೇ ಇದನ್ನು ಕೇಳಿ ಶಾಕ್ ಆಗಿದ್ದಾರೆ. ನಾನು ಮುದುಕಿಯಾದರೇನಂತೆ ನಾ ಇನ್ನೂ ಇರಾಕಿ.. ನನ್ನ ಮಗನ ಮಗನ ಮಗನ ಮದುವೆ ಮಾಡಾಕಿ.. ಎನ್ನುವ ಹಾಡಿನ ಲಿರಿಕ್ಸ್ ಅನ್ನು ಅನುಶ್ರೀ ಅವರ ಬಗ್ಗೆ ಹಾಡಿದ್ದಾರೆ ದಿಯಾ ಹೆಗ್ಡೆ. ಇದನ್ನು ಓದಿ.. Kannada News: ದೀಪಿಕಾ ಬದಲು ಅದೇಗೆ ಮಂಗಳ ಗೌರಿ ಕಾವ್ಯಶ್ರೀ ಮನೆಯಲ್ಲಿಯೇ ಉಳಿದುಕೊಂಡಿದ್ದರೆ ಗೊತ್ತೇ?? ಇದಕ್ಕೆಲ್ಲ ಕಾರಣ ಏನು ಗೊತ್ತೆ?

ಅನುಶ್ರೀ ತನ್ನ ಸೊಸೆಯಾಗಬೇಕು ಎಂದು ಆಸೆ ಎಂದಿದ್ದಾಳೆ ಈ ಪುಟ್ಟ ಮಗು. ಯಾಕೆ ನಾನೇ ಸೊಸೆಯಾಗಬೇಕು ಎಂದು ಅನುಶ್ರೀ ಅವರೇ ಅಚ್ಚರಿಯಿಂದ ಕೇಳಿದ್ದಾರೆ.. ಅದಕ್ಕೆ ಉತ್ತರ ಹೇಳಿದ ದಿಯಾ, “ಅನುಶ್ರೀ ಅಂದದ ನಗೆ ಬೀರುತ್ತಾಳೆ. ಮಾತಲ್ಲೇ ಮೋಡಿ ಮಾಡುತ್ತಾಳೆ. ನಗುವಿನಲ್ಲೇ ಪ್ರೀತಿ ತೋರುತ್ತಾಳೆ. ಅನುಶ್ರೀ ನಮ್ಮ ಮನೆಯ ಸೊಸೆ ಆಗಲಿ..” ಎಂದಿದ್ದಾಳೆ ದಿಯಾ. ನಾನು ನಿನ್ನ ಮನೆಯ ಸೊಸೆ ಆಗಬೇಕು ಅಂತ ಹೇಳಿದೀಯ. ಆದರೆ ಮಗ ಯಾರು ಎಂದು ಅನುಶ್ರೀ ಅವರು ಮರುಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರವಾಗಿ, ನನ್ನ ಮಗ ಬಹಳ ಚೆನ್ನಾಗಿದ್ದಾನೆ, ಒಳ್ಳೊಳ್ಳೆಯ ಮ್ಯೂಸಿಕ್ ಮಾಡಿದ್ದಾನೆ ಎಂದು ಅರ್ಜುನ್ ಜನ್ಯ ಅವರ ಕಡೆಗೆ ಬೆರಳು ತೋರಿಸಿದ್ದಾಳೆ. ಈ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ಓದಿ.. Bengaluru Bulls: ಹೀನಾಯವಾಗಿ ಮತ್ತೊಮ್ಮೆ ಸೋತಮೇಲೆ ವಿಕಾಸ್ ಕಂಡೋಳ ಹೇಳಿದ್ದೇನು ಗೊತ್ತೇ??