Bengaluru Bulls: ಹೀನಾಯವಾಗಿ ಮತ್ತೊಮ್ಮೆ ಸೋತಮೇಲೆ ವಿಕಾಸ್ ಕಂಡೋಳ ಹೇಳಿದ್ದೇನು ಗೊತ್ತೇ??
Bengaluru Bulls: ನಮ್ಮ ದೇಶದಲ್ಲಿ ಉತ್ತಮವಾದ ಕ್ರೇಜ್ ಹೊಂದಿರುವ ಕ್ರೀಡೆಗಳಲ್ಲಿ ಪ್ರೋಕಬಡ್ಡಿ ಲೀಗ್ (Pro Kabaddi League) ಕೂಡ ಒಂದು. ಅದರಲ್ಲೂ ನಮ್ಮ ಬೆಂಗಳೂರು ಬುಲ್ಸ್ (Bengaluru Bulls) ತಂಡಕ್ಕೆ ಭಾರಿ ದೊಡ್ಡ ಅಭಿಮಾನಿ ಬಳಗ ಮತ್ತು ಬೇಡಿಕೆ ಎರಡು ಕೂಡ ಇದೆ. ಈ ಸೀಸನ್ ನಲ್ಲಿ ಹೊಸ ನಾಯಕ ಜೊತೆಗೆ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಸಹ ಮಾಡಲಾಗಿದ್ದು, ನಮ್ಮ ತಂಡ ಉತ್ತಮವಾದ ಪ್ರದರ್ಶನವನ್ನೇ ನೀಡುತ್ತಿತ್ತು, ಆದರೆ ನಿನ್ನೆ ನಡದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಹೀನಾಯವಾಗಿ ಸೋತಿದೆ.
ಈ ಸೋಲು ಅಭಿಮಾನಿಗಳಿಗೂ ಬೇಸರ ತರಿಸಿದೆ. ಬೆಂಗಾಲ್ ಟೈಗರ್ಸ್ (Bengal Tigers) ತಂಡದ ವಿರುದ್ಧ ಸೋತಿದೆ ಬೆಂಗಳೂರು ಬುಲ್ಸ್. ಮೊದಲ ಪಂದ್ಯದಲ್ಲಿ ಸಹ ಬೆಂಗಾಲ್ ಟೈಗರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ಸೋತಿತ್ತು, ಇದೀಗ ಎರಡನೇ ಪಂದ್ಯದಲ್ಲು ಬೆಂಗಾಲ್ ಟೈಗರ್ಸ್ ವಿರುದ್ಧ ಸೋತಿದೆ. ಈ ಸೋಲಿಗೆ ಕಾರಣ ಏನು? ಬೆಂಗಳೂರು ಬುಲ್ಸ್ ತಂಡ ಸೋತಿದ್ದು ಏಕೆ ಎಂದು, ವಿಕಾಸ್ ಕಂಡೊಳ (Vikas Kandola) ಅವರು ಮ್ಯಾಚ್ ಮುಗಿದ ನಂತರ್ಸ್ ತಿಳಿಸಿದ್ದಾರೆ. ಅವರು ಮಾತನಾಡಿ ಹೇಳಿದ್ದೇನು ಎಂದು ತಿಳಿಸುತ್ತೇವೆ..”ಇಂದಿನ ಪಂದ್ಯ ಸ್ವಲ್ಪ ಕಷ್ಟಕರವಾಗಿತ್ತು. ಮಣಿಂದರ್ ಸಿಂಗ್ ಅವರನ್ನ ಟ್ಯಾಕಲ್ ಮಾಡುವುದು ಕಷ್ಟ ಆಗಿತ್ತು. ಇದನ್ನು ಓದಿ.. Kannada News: ಅಚ್ಚರಿಯ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗಟ್ಟಿಮೇಳ ಅದಿತಿ ಮತ್ತು ಪ್ರೀತು

ಅವರನ್ನ ಹಿಡಿದಿದ್ದರೆ ನಾವು ಗೆಲ್ಲುತ್ತಾ ಇದ್ವಿ. ನಾವು ಎಡವಟ್ಟು ಮಾಡಿದ್ದು ಅಲ್ಲಿ. ರೈಡಿಂಗ್ ಡಿಪಾರ್ಟ್ಮೆಂಟ್ ಕೂಡ ಸರಿಯಾಗಿ ಕೆಲಸ ಮಾಡಲಿಲ್ಲ. ನಾನು ಎಂಪ್ಟಿ ರೈಡ್ ಮಾಡಿದೆ, ಅದರಿಂದ ತಂಡಕ್ಕೆ ಸೋಲು ಬಂದಿದೆ. ನನ್ನನ್ನ ಕ್ಷಮಿಸಿ. ನನಗೆ ಇಂಜುರಿ ಸಮಸ್ಯೆ ಇದೆ, ನಾನು ನೆಕ್ಸ್ಟ್ ಮ್ಯಾಚ್ ಆಡುವುದು ಡೌಟ್, ಒಂದು ಮ್ಯಾಚ್ ರೆಸ್ಟ್ ತಗೊಂಡು ಮತ್ತೆ ಆಡ್ತೀನಿ..” ಎಂದು ಬೇಸರದಲ್ಲಿ ಹೇಳಿದ್ದಾರೆ ವಿಕಾಸ್ ಕಂಡೊಳ. ಒಟ್ಟಿನಲ್ಲಿ ಲೀಡ್ ನಲ್ಲಿ ಇದ್ದದ್ದನ್ನು ಹಾಗೆಯೇ ಉಳಿಸಿಕೊಳ್ಳದೆ ನಮ್ಮ ತಂಡ ಸೋತಿದೆ. ಮಂದಿನ ಪಂದ್ಯದಲ್ಲಿ ಹೇಗೆ ಆಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ದೀಪಿಕಾ ಬದಲು ಅದೇಗೆ ಮಂಗಳ ಗೌರಿ ಕಾವ್ಯಶ್ರೀ ಮನೆಯಲ್ಲಿಯೇ ಉಳಿದುಕೊಂಡಿದ್ದರೆ ಗೊತ್ತೇ?? ಇದಕ್ಕೆಲ್ಲ ಕಾರಣ ಏನು ಗೊತ್ತೆ?