Kannada News: ಅಚ್ಚರಿಯ ರೀತಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಗಟ್ಟಿಮೇಳ ಅದಿತಿ ಮತ್ತು ಪ್ರೀತು

48

Kannada News: ಕನ್ನಡ ಕಿರುತೆರೆಯಲ್ಲಿ ಇದೀಗ ಹೊಸದೊಂದು ಜೋಡಿ ಎಂಗೇಜ್ ಆಗಿದೆ. ಇವರಿಬ್ಬರ ಬಗ್ಗೆ ಇದುವರೆಗೂ ಒಂದೇ ಒಂದು ಗಾಸಿಪ್ ಕೂಡ ಕೇಳಿಬಂದಿರಲಿಲ್ಲ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವುದು ಕಿರುತೆರೆ ವೀಕ್ಷಕರಿಗೆ ಶಾಕ್ ನೀಡಿದೆ. ಆ ಜೋಡಿ ಮತ್ಯಾರು ಅಲ್ಲ, ಗಟ್ಟಿಮೇಳ (Gattimela) ಧಾರವಾಹಿ ಖ್ಯಾತಿಯ ಅದಿತಿ ಮತ್ತು ಪಾರು (Paru) ಧಾರವಾಹಿ ಖ್ಯಾತಿಯ ಪ್ರೀತು. ಮೊನ್ನೆಯಷ್ಟೇ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಸಮಾರಂಭದ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.

ಗಟ್ಟಿಮೇಳ ಧಾರವಾಹಿಯಲ್ಲಿ ನಾಯಕಿ ಅಮೂಲ್ಯ ತಂಗಿಯ ಪಾತ್ರದಲ್ಲಿ ನಟಿಸುತ್ತಿರುವ ಪ್ರಿಯಾ ಜೆ ಆಚರ್ (Priya J Achar), ಮೊದಲ ಧಾರವಾಹಿ ಮೂಲಕವೇ ದೊಡ್ಡ ಅಭಿಮಾನಿ ಬಳಗ ಗಳಿಸಿದ್ದಾರೆ. ಹಲವಾರು ಹುಡುಗರ ಕ್ರಶ್ ಆಗಿದ್ದಾರೆ ಪ್ರಿಯಾ ಜೆ ಆಚರ್. ಇತ್ತೀಚೆಗೆ ಕಾಲೇಜ್ ಎಕ್ಸಾಂ ಮುಗಿಸಿ, ಮಾರ್ಕ್ಸ್ ಕಾರ್ಡ್ ಫೋಟೋ ಶೇರ್ ಮಾಡಿಕೊಂಡಿದ್ದರು. ಇತ್ತ ಪಾರು ಧಾರವಾಹಿಯಲ್ಲಿ ಪ್ರೀತು ಪಾತ್ರದ ಮೂಲಕ ಗುರುತಿಸಿಕೊಂಡಿರುವವರು ನಟ ಸಿದ್ದು ಮೂಲಿಮನಿ (Siddu Moolimani). ಇವರು ಕೂಡ ಧಾರವಾಹಿ ಮೂಲಕ ಒಳ್ಳೆಯ ಹೆಸರು ಮತ್ತು ಅಭಿಮಾನಿ ಬಳಗ ಗಳಿಸಿಕೊಂಡಿದ್ದಾರೆ. ಇದನ್ನು ಓದಿ.. Cricket News: ಟಿ 20 ನಲ್ಲಿ ವಿಶ್ವದ ನಂಬರ್ ಕಿರೀಟ ತೊಟ್ಟರು ಕೂಡ ಸೂರ್ಯ ಕುಮಾರ್ ಯಾದವ್ ಮುಂದಿನ ಗುರಿ ಏನಂತೆ ಗೊತ್ತೇ?? ಯಾವ ತಂಡದಲ್ಲಿ ಸ್ಥಾನ ಪಡೆಯಬೇಕಂತೆ ಗೊತ್ತೇ??

ಧಾರವಾಹಿ ಸಮಯದಲ್ಲೇ ಈ ಜೋಡಿಯ ನಡುವೆ ಪ್ರೀತಿ ಶುರುವಾಗಿ, ಇಬ್ಬರು ಕೆಲ ಸಮಯ ಪ್ರೀತಿ ಮಾಡಿ ಮದುವೆಯಾಗುವ ನಿರ್ಧಾರ ಮಾಡಿದ್ದು, ಎರಡು ಕುಟುಂಬದವರನ್ನು ಒಪ್ಪಿಸಿ, ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಇವರಿಬ್ಬರ ಮದುವೆ ಕೂಡ ನಡೆಯಲಿದ್ದು, ಬಹಳ ವಿಶೇಷಭಾಗಿ ಇರಲಿದೆಯಂತೆ ಇವರ ಮದುವೆ. ಇವರ ನಿಶ್ಚಿತಾರ್ಥಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆಯ ಹಲವು ತಾರೆಯರು ಬಂದು ವಿಶ್ ಮಾಡಿದ್ದಾರೆ. ಇದನ್ನು ಓದಿ..ಗ್ರಾಹಕರಿಗೆ ಮತ್ತೊಂದು ಶಾಕ್ ಕೊಟ್ಟ ಏರ್ಟೆಲ್: ರಿಚಾರ್ಜ್ ಪ್ಲಾನ್ ನಲ್ಲಿ ಮಹತ್ವದ ಬದಲಾವಣೆ. ಏನಾಗಿದೆ ಗೊತ್ತೇ??