Cricket News: ಟಿ 20 ನಲ್ಲಿ ವಿಶ್ವದ ನಂಬರ್ ಕಿರೀಟ ತೊಟ್ಟರು ಕೂಡ ಸೂರ್ಯ ಕುಮಾರ್ ಯಾದವ್ ಮುಂದಿನ ಗುರಿ ಏನಂತೆ ಗೊತ್ತೇ?? ಯಾವ ತಂಡದಲ್ಲಿ ಸ್ಥಾನ ಪಡೆಯಬೇಕಂತೆ ಗೊತ್ತೇ??

33

Cricket News: ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ನಡೆಯುತ್ತಿರುವ ಸೀಮಿತ ಓವರ್‌ಗಳ ಟಿ ಟ್ವೆಂಟಿ ಸರಣಿ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ರೋಚಕ ಪ್ರದರ್ಶನ ತೋರುತ್ತಿದ್ದಾರೆ. ಮೊದಲ ಪಂದ್ಯ ಮಳೆಯ ಕಾರಣದಿಂದ ರದ್ದಾದ ನಂತರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ತೋರಿದ ಅಮೋಘ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಬೆರಗಾಗಿದ್ದರು. ಎರಡನೇ ಟಿ ಟ್ವೆಂಟಿ ಸರಣಿ ಪಂದ್ಯದಲ್ಲಿ ಅವರು ಅಮೋಘ ಶತಕ ಸಿಡಿಸಿದರು. ಅಲ್ಲದೆ ಟಿ ಟ್ವೆಂಟಿ ವಿಶ್ವಕಪ್ನಲ್ಲೂ (T20 World Cup) ಅವರು ಅಪ್ರತಿಮ ಸಾಧನೆ ತೋರಿದ್ದಾರೆ. ನಂಬರ್ ಒನ್ ಬ್ಯಾಟರ್ ಆಗಿರುವ ಅವರು ಕಳೆದ ಭಾನುವಾರ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಈ ವೇಳೆ ಅವರು ತಮ್ಮ ಮತ್ತೊಂದು ಕನಸಿನ ಕುರಿತು ಹಂಚಿಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ ಟಿ ಟ್ವೆಂಟಿ ಸರಣಿ ಪಂದ್ಯದ ಎರಡನೇ ಪಂದ್ಯದಲ್ಲಿ ತೋರಿದ ಭರ್ಜರಿ ಪ್ರದರ್ಶನಕ್ಕೆ ಕ್ರಿಕೆಟ್ ಪ್ರೇಮಿಗಳು ಬೆಕ್ಕಸ ಬೆರಗಾದರು. ಅಮೋಘ ಶತಕದ ದಾಖಲೆ ಮಾಡಿ ಮತ್ತೊಂದು ಇತಿಹಾಸ ನಿರ್ಮಿಸಿದರು. ಸೂರ್ಯಕುಮಾರ್ ಯಾದವ್ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಅಗ್ರ ಶ್ರೇಷ್ಠ ನಂಬರ್ ಒನ್ ಬ್ಯಾಟರ್ ಸ್ಥಾನ ಪಡೆದಿದ್ದಾರೆ. ಇಂಥದ್ದೊಂದು ದಾಖಲೆಯನ್ನು ಪಾದಾರ್ಪಣೆ ಮಾಡಿದ ಒಂದೇ ವರ್ಷದಲ್ಲಿ ಅವರು ಸಾಧಿಸಿರುವುದು ನಿಜಕ್ಕೂ ಅಸಾಧಾರಣ, ಅಸಾಮಾನ್ಯ ಸಂಗತಿ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಸರಣಿ ಪಂದ್ಯದ ಗೆಲುವಿನ ನಂತರ ಸೂರ್ಯಕುಮಾರ್ ಯಾದವ್ ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಆ ಸಮಯ ಈಗ ಬರಲಿದೆ ಎನ್ನುವ ಅರ್ಥದಲ್ಲಿ ಮಾತನಾಡಿರುವ ಅವರು, ತಮ್ಮ ಒಂದು ಮಹತ್ವಕಾಂಕ್ಷಿಯ ಕನಸಿನ ಕುರಿತಾಗಿ ಹಂಚಿಕೊಂಡಿದ್ದಾರೆ. ಇದನ್ನು ಓದಿ.. Kannada News: ಕಾಂತಾರ, ಕೆಜಿಎಫ್ ಯಶಸ್ಸು ನೋಡಿ ತಾಳಲಾರದೆ ಬೇರೆ ಭಾಷೆ ಚಿತ್ರಗಳಿಗೆ ಬ್ರೇಕ್ ಹಾಕಲು ಹೊಸ ಹಾದಿ ಹಿಡಿದ ತೆಲುಗು ಚಿತ್ರರಂಗಕ್ಕೆ ಶಾಕ್ ಕೊಟ್ಟ ಅಲ್ಲೂ ಅರ್ಜುನ್ ತಂದೆ. ಹೇಳಿದ್ದೇನು ಗೊತ್ತೇ??

ಮಾಧ್ಯಮದವರ ಜೊತೆಗೆ ಮಾತನಾಡಿರುವ ಸೂರ್ಯಕುಮಾರ್ ಯಾದವ್ ಅವರು ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸುತ್ತಾ ತಮ್ಮ ಮುಂದಿನ ಗುರಿಯ ಕುರಿತು ಹೇಳಿದ್ದಾರೆ. “ಭಾರತವನ್ನು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸುವ ಬಯಕೆ ನನಗೆ ಅಪಾರವಾಗಿ ಇದೆ. ಶೀಘ್ರದಲ್ಲೇ ರೆಡ್ ಬಾಲ್ ಕ್ರಿಕೆಟ್ಗೆ ಆಯ್ಕೆಯಾಗುವ ನಿರೀಕ್ಷೆ ಇದೆ. ನಾವು ಭಾರತದಲ್ಲಿ ಕೆಂಪು ಚಂಡಿನೊಂದಿಗೆ ಕ್ರಿಕೆಟ್ ಆರಂಭಿಸುತ್ತೇವೆ. ಅದೇ ಮಾದರಿಯ ಆಟವನ್ನು ನಾನು ಬಹಳ ಆನಂದದಿಂದ ಆಡುತ್ತಿದ್ದೆ, ಆಡಿದ್ದೇನೆ. ನನಗೆ ರೆಡ್ ಬಾಲ್ ಮಾದರಿಯ ಆಟವನ್ನು ಆಡಿದ ಅನುಭವವಿದೆ. ಶೀಘ್ರದಲ್ಲೇ ರೆಡ್ ಕ್ಯಾಪ್ (Red Cap) ಪಡೆಯಲಿದ್ದೇನೆ” ಎಂದು ಭರವಸೆ ವ್ಯಕ್ತಪಡಿಸಿದರು.

ಟಿ ಟ್ವೆಂಟಿ ಸರಣಿಯ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ತೋರಿದ ಅಮೋಘ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರ್ಯಕುಮಾರ್ ಒಬ್ಬ ಅದ್ಭುತ ಆಟಗಾರ ಎಂದು ಅವರು ಹೋಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೂರ್ಯ ಕುಮಾರ್ ನಾನು ಇದನ್ನು ಮೆಚ್ಚುಗೆ ಮತ್ತು ಜವಾಬ್ದಾರಿ ಆಗಿ ತೆಗೆದುಕೊಳ್ಳುತ್ತೇನೆ. ನನಗೆ ವಿರಾಟ್ ಕೊಹ್ಲಿ (Virat Kohli) ಅವರ ಜೊತೆಗೆ ಆಡಲು ಬಹಳ ಇಷ್ಟವಾಗುತ್ತದೆ. ನಾವಿಬ್ಬರು ಒಟ್ಟಿಗೆ ಆಡುವಾಗ ಆಟವನ್ನು ಆನಂದಿಸುತ್ತಾ ಆಡುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಮಾಧ್ಯಮದವರ ಜೊತೆಗೆ ಹೇಳಿದ್ದಾರೆ. ಇದನ್ನು ಓದಿ..Kannada News: ಗಟ್ಟಿಮೇಳ ಅದಿತಿ | ಪಾರು ಸೀರಿಯಲ್ ಪ್ರೀತು ನಿಶ್ಚಿತಾರ್ಥದ ಡಾನ್ಸ್ ವಿಡಿಯೋ ನೋಡಿದ್ದೀರಾ?? ನಾವು ತೋರಿಸುತ್ತೇವೆ ನೋಡಿ.