ಗ್ರಾಹಕರಿಗೆ ಮತ್ತೊಂದು ಶಾಕ್ ಕೊಟ್ಟ ಏರ್ಟೆಲ್: ರಿಚಾರ್ಜ್ ಪ್ಲಾನ್ ನಲ್ಲಿ ಮಹತ್ವದ ಬದಲಾವಣೆ. ಏನಾಗಿದೆ ಗೊತ್ತೇ??
ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ನೆಟ್ವರ್ಕ್ ಕಂಪನಿ ಏರ್ಟೆಲ್ ಇದೀಗ ತನ್ನ ರಿಚಾರ್ಜ್ ಯೋಜನೆಯ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ತನ್ನ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದೆ. ಪ್ರತಿ ಬಳಕೆದಾರರಿಂದಲೂ ಸರಾಸರಿ ಆದಾಯವನ್ನು ಹೆಚ್ಚಿಸುವ ಒಂದೇ ಉದ್ದೇಶಕ್ಕಾಗಿ ಮಿನಿಮಮ್ ಪ್ಲಾನಿಂಗ್ ಆಫರನ್ನು ಕೂಡ ಇದೀಗ ನಿಷ್ಕ್ರಿಯಗೊಳಿಸಿ, ಇದಕ್ಕಿಂತಲೂ ಹೆಚ್ಚಿನ ಮೊತ್ತದ ರಿಚಾರ್ಜ್ ಪ್ಲಾನಿಂಗ್ ಅನ್ನು ಪರಿಚಯಿಸಿದೆ. ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ರಿಚಾರ್ಜ್ ಮತ್ತು ಡಾಟಾ ಪ್ಲಾನ್ ಮೊತ್ತವನ್ನು ಏರ್ಟೆಲ್ ಹೆಚ್ಚಿಸುತ್ತಲೇ ಬಂದಿದೆ. ಇದೀಗ ಬಳಕೆದಾರರಿಗೆ ಏರ್ಟೆಲ್ ಮತ್ತೊಂದು ಶಾಕ್ ನೀಡಿದೆ. ಏರ್ಟೆಲ್ ತನ್ನ ಮಿನಿಮಮ್ ರಿಚಾರ್ಜ್ ಪ್ಲಾನನ್ನು ಇದೀಗ ಬರೋಬರಿ 155 ರೂಗೆ ಹೆಚ್ಚಿಸಿದೆ. ಅಂದರೆ ಬಳಕೆದಾರ ತನ್ನ ಸಂಖ್ಯೆಯನ್ನು ಸಕ್ರಿಯವಾಗಿ ಇರಿಸಿಕೊಳ್ಳಲು ಕನಿಷ್ಠ 155 ರೂಗಳ ರಿಚಾರ್ಜ್ ಮಾಡಿಸಿಕೊಳ್ಳಲೇಬೇಕು. ಇಂತಹದೊಂದು ಪರಿಸ್ಥಿತಿಯನ್ನು ಇದೀಗ ಏರ್ಟೆಲ್ ಸೃಷ್ಟಿಸಿದೆ.
ಭಾರತದಾದ್ಯಂತ ಇದುವರೆಗೆ ಏರ್ಟೆಲ್ ಚಂದಾದಾರರು ತಮ್ಮ ಸಿಮ್ ಅನ್ನು ಸಕ್ರಿಯವಾಗಿ ಆಕ್ಟಿವ್ ಆಗಿ ಇರಿಸಿಕೊಳ್ಳಲು ಕನಿಷ್ಠ 99ರುಗಳ ರಿಚಾರ್ಜ್ ಪ್ಲಾನ್ ಪ್ರಿಪೇಡ್ ಮಾಡಿಸಿಕೊಳ್ಳಬೇಕಿತ್ತು. ಆದರೆ ಹರಿಯಾಣ ಮತ್ತು ಒಡಿಸ್ಸಾ ರಾಜ್ಯದಲ್ಲಿ ಇದೀಗ ಏರ್ಟೆಲ್ ಕನಿಷ್ಠ ರಿಚಾರ್ಜ್ ಪ್ಲಾನ್ ಶೇಕಡ 57 ರಷ್ಟು ಹೆಚ್ಚಿಸಲಾಗಿದೆ ಎಂದು ವರದಿಯಾಗಿದೆ. 99 ರೂಗಳು ಇದ್ದ ಕನಿಷ್ಠ ಪ್ಲಾನನ್ನು ಇದೀಗ 155 ರೂ ಗಳಿಗೆ ಹೆಚ್ಚಿಸಲಾಗಿದೆ. ಇದರ ಕುರಿತು ಮಾಹಿತಿಯನ್ನು ಏರ್ಟೆಲ್ ಅಧಿಕೃತ ವೆಬ್ಸೈಟ್ನಲ್ಲಿ ಹಂಚಿಕೊಂಡಿದೆ. ಪ್ರಾಯೋಗಿಕವಾಗಿ ಈ ಯೋಜನೆಯ ಜಾರಿಯನ್ನು ಇದೀಗ ಹರಿಯಾಣ ಮತ್ತು ಒಡಿಶಾ ರಾಜ್ಯಗಳಲ್ಲಿ ಮಾಡಲಾಗಿದೆ ಎಂದು ಅದು ಹೇಳಿಕೊಂಡಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಯೋಜನೆ ಇಡೀ ದೇಶಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಹರಿಯಾಣ ಮತ್ತು ಒಡಿಶಾ ರಾಜ್ಯಗಳಲ್ಲಿ 155 ರೂಗಳ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅಲ್ಲಿ ದೊರೆತ ಫಲಿತಾಂಶದ ಆಧಾರದ ಮೇಲೆ ರಿಚಾರ್ಜ್ ಪ್ಲಾನ್ ಅನ್ನು ದೇಶಾದ್ಯಂತ ಕಾರ್ಯಗತಗೊಳಿಸಲಾಗುವುದು. ಜೊತೆಗೆ 155 ರೂ ಗಿಂತ ಕಡಿಮೆಯ ಎಲ್ಲಾ ರಿಚಾರ್ಜ್ ಪ್ಲಾನನ್ನು ಏರ್ಟೆಲ್ ರದ್ದುಗೊಳಿಸುವ ಸಾಧ್ಯತೆ ಇದೆ. ಈ ಮೊದಲು 99ರುಗಳ ಕನಿಷ್ಠ ಬೆಲೆಯ ರಿಚಾರ್ಜ್ ಮಾಡಿಸಿದರೆ 28 ದಿನಗಳ ಅವಧಿಗೆ ಟಾಕ್ ಟೈಮ್ ಮತ್ತು ಸೀಮಿತ 100 ಎಂಬಿ ಡಾಟಾ ಹಾಗೂ ನೂರು ಎಂಎಂಎಸ್ ಸೇವೆ ನೀಡಲಾಗುತ್ತಿತ್ತು. ಆದರೆ ಇದಕ್ಕೆ ವಿರುದ್ಧವಾಗಿ 155 ರೂಗಳ ರಿಚಾರ್ಜ್ ಪ್ಲಾನ್ ನಲ್ಲಿ ಪೂರ್ತಿ 28 ದಿನಗಳು ಅನ್ಲಿಮಿಟೆಡ್ ಕರೆ, 300 ಎಂಎಂಎಸ್ ಮತ್ತು ಒಂದು ಜಿಬಿ ಡೇಟಾ ಸೇವೆ ಒದಗಿಸಲಾಗುತ್ತದೆ. ಇಂತಹದೊಂದು ಕ್ರಾಂತಿಕಾರಕ ಬದಲಾವಣೆಗೆ ಏರ್ಟೆಲ್ ಮುಂದಾಗಿದೆ.