Kannada News: ಫಾರ್ಮ್ ಕಳೆದುಕೊಂಡು ವಿಶ್ವಕಪ್ ಭಾರತದ ಸೋಲಿಗೆ ನೇರ ಕಾರಣವಾದ ರಾಹುಲ್ ಜೊತೆಗೆ ಮಗಳ ಮದುವೆ ಕುರಿತು ಸುನಿಲ್ ಶೆಟ್ಟಿ ಹೇಳಿದ್ದೇನು ಗೊತ್ತೇ?
Kannada News: ಭಾರತ ತಂಡದ ಸ್ಟಾರ್ ಪ್ಲೇಯರ್ ಎನ್ನಿಸಿಕೊಂಡಿರುವ ಕೆ.ಎಲ್.ರಾಹುಲ್ (K L Rahul) ಅವರು ಪ್ರಸ್ತುತ ಫಾರ್ಮ್ ಕಳೆದುಕೊಂಡಿದ್ದಾರೆ. ಟಿ20 ವಿಶ್ವಕಪ್ (T20 World Cup) ನಲ್ಲಿ ವಿಫಲರಾದ ನಂತರ ನ್ಯೂಜಿಲೆಂಡ್ ವಿರುದ್ಧದ ಸರಣಿ ಪಂದ್ಯಗಳಿಂದ ಕೆ.ಎಲ್.ರಾಹುಲ್ ಅವರಿಗೆ ಬ್ರೇಕ್ ನೀಡಲಾಗಿದೆ. ಇದರ ನಡುವೆಯೇ ಅವರ ಮದುವೆ ವಿಚಾರ ಭಾರಿ ಸುದ್ದಿಯಾಗುತ್ತಿದೆ. ಕರ್ನಾಟಕದವರೆ ಆದ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ (Suniel shetty) ಅವರ ಮಗಳು ಅಥಿಯಾ ಶೆಟ್ಟಿ (Athiya Shetty) ಅವರೊಡನೆ ಕೆ.ಎಲ್.ರಾಹುಲ್ ಮದುವೆ ನಡೆಯುತ್ತದೆ ಎನ್ನುವ ಸುದ್ದಿ ಭಾರಿ ಸೌಂಡ್ ಮಾಡಿತ್ತು.
ರಾಹುಲ್ ಮತ್ತು ಅಥಿಯಾ ಕೆಲವು ವರ್ಷಗಳಿಂದ ಡೇಟ್ ಮಾಡುತ್ತಿದ್ದಾರೆ. ಗಾಸಿಪ್ ಗಳು ಕೇಳಿಬರುತ್ತಿದ್ದರೋ, ತಲೆಕೆಡಿಸಿಕೊಳ್ಳದೆ, ಜೊತೆಯಾಗಿ ಎಲ್ಲಾ ಕಡೆ ಸುತ್ತಾಡುತ್ತಾ, ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಾ ಈ ಜೋಡಿ, ಲವ್ ಬರ್ಡ್ಸ್ ಹಾಗಿದ್ದಾರೆ. ಇದೇ ವರ್ಷ ಈ ಜೋಡಿಯ ಮದುವೆ ನಡೆಯುತ್ತದೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು, ಈ ಜೋಡಿಯ ಮದುವೆ ಬಗೆಗಿನ ಪ್ರಶ್ನೆಗೆ ಈಗ ಸ್ವತಃ ಸುನೀಲ್ ಶೆಟ್ಟಿ ಅವರೇ ಉತ್ತರ ಕೊಟ್ಟಿದ್ದಾರೆ. ಧಾರಾವಿ ಬ್ಯಾಂಕ್ ವೆಬ್ ಸೀರೀಸ್ ಲಾಂಚ್ ಗೆ ಸುನೀಲ್ ಶೆಟ್ಟಿ ಅವರು ಬಂದಿದ್ದರು, ಆಗ ಅವರಿಗೆ ಮಗಳ ಮದುವೆ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದನ್ನು ಓದಿ.. RCB: ಸುಖ ಸುಮ್ಮನೆ ಆರ್ಸಿಬಿ ಯನ್ನು ಟ್ರೊಲ್ ಮಾಡಿದ ಸೌತ್ ಆಫ್ರಿಕಾ ಮಾಜಿ ಆಟಗಾರ ಹರ್ಷಲ್ ಗಿಬ್ಸ್: ನಾಲಿಗೆ ಹರಿಬಿಟ್ಟು ಹೇಳಿದ್ದೇನು ಗೊತ್ತೇ??

ಕೆ.ಎಲ್.ರಾಹುಲ್ ಮತ್ತು ಅಥಿಯಾ ಹೀಗೆ ಓಡಾಡಿಕೊಂಡು ಇರುತ್ತಾರಾ ಅಥವಾ ಮದುವೆ ಆಗುತ್ತಾರಾ ಎನ್ನುವ ಪ್ರಶ್ನೆ ಕೇಳಲಾಯಿತು, ಅದಕ್ಕೆ ಉತ್ತರ ಕೊಟ್ಟಿರುವ ಸುನೀಲ್ ಶೆಟ್ಟಿ ಅವರು.. ಬೇಗ ಆಗುತ್ತದೆ ಇಬ್ಬರು ಕೆಲವು ಕಮಿಟ್ಮೆಂಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಅದೆಲ್ಲ ಮುಗಿದ ತಕ್ಷಣ ಮದುವೆ ನಡೆಯುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಈ ಜೋಡಿಯ ಮದುವೆ ಬಗ್ಗೆ ಅಧಿಕೃತವಾದ ಸುದ್ದಿಯೇ ಹೊರಬಂದಿದ್ದು, ಕ್ರಿಕೆಟ್ ಪ್ರೇಮಿಗಳು ಈ ಹೊಸ ಸುದ್ದಿಯಿಂದ ಸಂತೋಷಗೊಂಡಿದ್ದಾರೆ. ಇದನ್ನು ಓದಿ..Cricket News: ತವರು ನೆಲದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಗಳಿಸಿದ ಸೂರ್ಯ ರವರೆ ಶಾಕ್ ಆಗುವಂತೆ ಹೇಳಿಕೆ ಕೊಟ್ಟ ರೊಸ್ ಟೇಲರ್. ಹೇಳಿದ್ದೇನು ಗೊತ್ತೇ?