Kannada News: ಕಾಂತಾರ, ಕೆಜಿಎಫ್ ಯಶಸ್ಸು ನೋಡಿ ತಾಳಲಾರದೆ ಬೇರೆ ಭಾಷೆ ಚಿತ್ರಗಳಿಗೆ ಬ್ರೇಕ್ ಹಾಕಲು ಹೊಸ ಹಾದಿ ಹಿಡಿದ ತೆಲುಗು ಚಿತ್ರರಂಗಕ್ಕೆ ಶಾಕ್ ಕೊಟ್ಟ ಅಲ್ಲೂ ಅರ್ಜುನ್ ತಂದೆ. ಹೇಳಿದ್ದೇನು ಗೊತ್ತೇ??

48

Kannada News: ಇತ್ತೀಚಿನ ದಿನಗಳಲ್ಲಿ ಕಾಂತಾರ (Kantara), ಕೆಜಿಎಫ್2 (KGF2) ಆರ್.ಆರ್.ಆರ್ (RRR) ಹೀಗೆ ಪ್ಯಾನ್ ಇಂಡಿಯಾ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ನಾವೆಲ್ಲರೂ ನೋಡಿರುವ ಹಾಗೆ ವಿಶೇಷವಾಗಿ ಕಾಂತಾರ ಸಿನಿಮಾಗೆ ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಓಪನಿಂಗ್ ಸಿಕ್ಕಿತು. ಕಾಂತಾರ ಸಿನಿಮಾವನ್ನು ಇಂದಿಗು ಎಲ್ಲಾ ಭಾಷೆಯ ಜನರು ವೀಕ್ಷಣೆ ಮಾಡುತ್ತಿದ್ದಾರೆ. ತೆಲುಗಿನಲ್ಲೇ 40 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದೆ ಕಾಂತಾರ. ಈ ಹಿಂದೆ ಕೆಜಿಎಫ್2 ಮತ್ತು ಚಾರ್ಲಿ ಸಿನಿಮಾ ಕೂಡ ತೆಲುಗು ರಾಜ್ಯಗಳಲ್ಲಿ ಭಾರಿ ಸದ್ದು ಮಾಡಿತ್ತು.

ಹೀಗೆ ಪ್ಯಾನ್ ಇಂಡಿಯಾ ಸಿನಿಮಾಗಳಿಂದ ತೆಲುಗು ಸಿನಿಮಾಗಳಿಗೆ ಥಿಯೇಟರ್ ಸಿಗದ ಪರಿಸ್ಥಿತಿ ಬಂದಿತು. ಈ ಕಾರಣದಿಂದ ತೆಲುಗು ಚಿತ್ರರಂಗದ ನಿರ್ಮಾಪಕರು ಹೊಸ ನಿರ್ಧಾರ ಕೈಗೊಂಡು, ಸಂಕ್ರಾಂತಿ, ದಸರಾ, ದೀಪಾವಳಿ ಈ ಹಬ್ಬಗಳಿಗೆ ಸಿನಿಮಾಗಳು ಬಿಡುಗಡೆ ಆಗುವಾಗ ಮೊದಲಿಗೆ ತೆಲುಗು ಸಿನಿಮಾಗಳಿಗೆ ಆದ್ಯತೆ ನೀಡಬೇಕು, ನಂತರ ಬೇರೆ ಭಾಷೆಯ ಸಿನಿಮಾಗಳಿಗೆ ಥಿಯೇಟರ್ ನೀಡಬೇಕು ಎಂದು ನಿರ್ಧಾರ ಮಾಡಿದ್ದರು. ತೆಲುಗು ರಾಜ್ಯದಲ್ಲಿ ಅವರ ಭಾಷೆಯ ಸಿನಿಮಾಗಳಿಗೆ ಹೆಚ್ಚು ಸ್ಕ್ರೀನ್ಸ್ ಸಿಗದೆ ಇರುವುದು ಇದಕ್ಕೆ ಕಾರಣವಾಗಿದೆ. ಆದರೆ ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ (Allu Aravind) ಅವರು ಇದಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ಇದನ್ನು ಓದಿ.. Cricket News: ತವರು ನೆಲದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಗಳಿಸಿದ ಸೂರ್ಯ ರವರೆ ಶಾಕ್ ಆಗುವಂತೆ ಹೇಳಿಕೆ ಕೊಟ್ಟ ರೊಸ್ ಟೇಲರ್. ಹೇಳಿದ್ದೇನು ಗೊತ್ತೇ?

ಯಾವುದೇ ಹಬ್ಬದ ಸಮಯದಲ್ಲಿ ಬಿಡುಗಡೆ ಆಗುವ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ತಡೆದು ನಿಲ್ಲಿಸಲು ಆಗುವುದಿಲ್ಲ. ಬಾಹುಬಲಿ ನಂತರ ಇದು ಭಾರತ ಚಿತ್ರರಂಗ ಆಗಿದೆ, ಸಿನಿಮಾ ಚೆನ್ನಾಗಿದ್ದರೆ ಚಿತ್ರೆಪ್ರೇಮಿಗಳು ಬಂದು ಸಿನಿಮಾ ನೋಡುತ್ತಾರೆ, ಯಾವ ಭಾಷೆ ಎಂದು ಅವರು ತಲೆಕೆಡಿಸಿಕೊಳ್ಳುವುದಿಲ್ಲ.. ಹಾಗಾಗಿ ಇದೆಲ್ಲವೂ ವರ್ಕ್ ಆಗುವುದಿಲ್ಲ ಎಂದು ಅಲ್ಲು ಅರವಿಂದ್ ಅವರು ಹೇಳಿರುವ ಮಾತುಗಳು ಈಗ ತೆಲುಗು ನಿರ್ಮಾಪಕರ ಕೋಪಕ್ಕೆ ಕಾರಣವಾಗಿದೆ. ಇದನ್ನು ಓದಿ..Kannada News: ಫಾರ್ಮ್ ಕಳೆದುಕೊಂಡು ವಿಶ್ವಕಪ್ ಭಾರತದ ಸೋಲಿಗೆ ನೇರ ಕಾರಣವಾದ ರಾಹುಲ್ ಜೊತೆಗೆ ಮಗಳ ಮದುವೆ ಕುರಿತು ಸುನಿಲ್ ಶೆಟ್ಟಿ ಹೇಳಿದ್ದೇನು ಗೊತ್ತೇ?