Cricket News: ತವರು ನೆಲದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಶತಕ ಗಳಿಸಿದ ಸೂರ್ಯ ರವರೆ ಶಾಕ್ ಆಗುವಂತೆ ಹೇಳಿಕೆ ಕೊಟ್ಟ ರೊಸ್ ಟೇಲರ್. ಹೇಳಿದ್ದೇನು ಗೊತ್ತೇ?

22

Cricket News: ಟಿ20 ವಿಶ್ವಕಪ್ (T20 World Cup) ಮುಗಿದ ನಂತರ ಭಾರತ ತಂಡವು ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದೆ, ಭಾರತ ವರ್ಸಸ್ ನ್ಯೂಜಿಲೆಂಡ್ ಸರಣಿ ಟಿ20 ಪಂದ್ಯಗಳು ಈಗ ಭರ್ಜರಿಯಾಗಿ ನಡೆಯುತ್ತಿದೆ. ನಿನ್ನೆ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ (India vs New Zealand) ವಿರುದ್ಧ 65 ರನ್ ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿಗೆ ಮುಖ್ಯ ಕಾರಣ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಸೂರ್ಯಕುಮಾರ್ ಯಾದವ್ ಅವರು ತಮ್ಮ ಕೆರಿಯರ್ ನ ಮತ್ತೊಂದು ಬೆಸ್ಟ್ ಇನ್ನಿಂಗ್ಸ್ ಅನ್ನು ನಿನ್ನೆ ನೀಡಿದ್ದಾರೆ..

ಕೇವಲ 51 ಎಸೆತಗಳಲ್ಲಿ 111 ರನ್ಸ್ ಸಿಡಿಸಿ, 7 ಭರ್ಜರಿ ಸಿಕ್ಸರ್ ಗಳನ್ನು ಭಾರಿಸಿದ್ದಾರೆ. ಭಾರತ ತಂಡಕ್ಕೆ ಮೇಜರ್ ರನ್ಸ್ ತಂದುಕೊಟ್ಟ ಸೂರ್ಯಕುಮಾರ್ ಯಾದವ್ ಅವರು ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಭಾರತ ತಂಡದ ಬೌಲಿಂಗ್ ದಾಳಿ ಕೂಡ ಚೆನ್ನಾಗಿದ್ದ ಕಾರಣ, ನ್ಯೂಜಿಲೆಂಡ್ ತಂಡವನ್ನು ಭಾರತ ತಂಡ ಬಹಳ ಸುಲಭವಾಗಿ ಸೋಲಿಸಿತು. ಇವರ ಆಟದ ಪ್ರದರ್ಶನಕ್ಕೆ ಭಾರತ ತಂಡದವರು ಮಾತ್ರವಲ್ಲದೆ, ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರರ ರೋಸ್ ಟೇಲರ್ ಅವರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದನ್ನು ಓದಿ.. Rashmika Mandanna: ರಶ್ಮಿಕಾ ಮಂದಣ್ಣ ಬಹಳ ಒಳ್ಳೆಯವರು, ಮುಗ್ದ ಹುಡುಗಿ. ಆಕೆಯ ಪರಿಸ್ಥಿತಿ ನೋಡಿ ಅಂಗೇ ಅಯ್ಯೋ ಅನಿಸಿತು.

“ಇದೊಂದು ನಂಬಲು ಅಸಾದ್ಭ್ಯವಾದ ಇನ್ನಿಂಗ್ಸ್ ಆಗಿತ್ತು. ಸೂರ್ಯಕುಮಾರ್ ಯಾದವ್ ಅವರು ಶುರು ಮಾಡಿದ ರೀತಿ, ಅವರು ಸಿಕ್ಸರ್ ಭಾರಿಸಿದ ರೀತಿ ಎಲ್ಲವೂ ಅದ್ಭುತವಾಗಿತ್ತು. ನ್ಯೂಜಿಲೆಂಡ್ ನಲ್ಲಿ ಬ್ರೆಂಡನ್ ಮೆಕಲಮ್ (Brendon McCullum), ಮಾರ್ಟಿನ್ ಗಪ್ಟಿಲ್ (Martin Guptill) ಅವರು, ಕಾಲಿನ್ ಮುನ್ರೋ (Colin Munro) ಅವರ ಉತ್ತಸ್ಮ ಇನ್ನಿಂಗ್ಸ್ ನೋಡಿದ್ದೀನಿ, ನ್ಯೂಜಿಲೆಂಡ್ ನ ಟಿ20 ಇನ್ನಿಂಗ್ಸ್ ಇತಿಹಾಸದಲ್ಲಿ ಇದು ದಿ ಬೆಸ್ಟ್ ಟಿ20 ಶತಕ ಎಂದು ನನಗೆ ಅನ್ನಿಸುತ್ತದೆ. ಬ್ಯಾಟಿಂಗ್ ನಲ್ಲಿ ಸೂರ್ಯಕುಮಾರ್ ಯಾದವ್ ಅವರು ರಿಸ್ಕ್ ತೆಗೆದುಕೊಳ್ಳುತ್ತಾರೆ. ಸ್ಪಿನ್ನರ್ ಗಳಿದ್ದರು ಆರಾಮವಾಗಿ ಬ್ಯಾಟ್ ಬೀಸುತ್ತಾರೆ. ಲ್ಯೂಕಿ ಫರ್ಗುಸನ್ ಅವರ ಬ್ಯಾಟಿಂಗ್ ದಾಳಿಯಲ್ಲಿ ಅವರು ಲಕ್ಕಿ ಆಗಿದ್ದರು ಎಂದು ಅನ್ನಿಸುತ್ತದೆ..ಅದನ್ನೆಲ್ಲ ಹೊರತುಪಡಿಸಿ ಉತ್ತಮವಾದ ಶಾಟ್ ಗಳನ್ನು ಆಡಿದ್ದಾರೆ..” ಎಂದಿದ್ದಾರೆ ರೋಸ್ ಟೇಲರ್. ಇದನ್ನು ಓದಿ..RCB: ಸುಖ ಸುಮ್ಮನೆ ಆರ್ಸಿಬಿ ಯನ್ನು ಟ್ರೊಲ್ ಮಾಡಿದ ಸೌತ್ ಆಫ್ರಿಕಾ ಮಾಜಿ ಆಟಗಾರ ಹರ್ಷಲ್ ಗಿಬ್ಸ್: ನಾಲಿಗೆ ಹರಿಬಿಟ್ಟು ಹೇಳಿದ್ದೇನು ಗೊತ್ತೇ??