Rashmika Mandanna: ರಶ್ಮಿಕಾ ಮಂದಣ್ಣ ಬಹಳ ಒಳ್ಳೆಯವರು, ಮುಗ್ದ ಹುಡುಗಿ. ಆಕೆಯ ಪರಿಸ್ಥಿತಿ ನೋಡಿ ಅಂಗೇ ಅಯ್ಯೋ ಅನಿಸಿತು.

11

Rashmika Mandanna: ರಶ್ಮಿಕ ಮಂದಣ್ಣ ಬಹಳ ಒಳ್ಳೆಯ ಹುಡುಗಿ, ಅವರ ಈ ಪರಿಸ್ಥಿತಿಯನ್ನು ನೋಡಿ ನನಗೆ ಅಯ್ಯೋ ಅನಿಸುತ್ತಿದೆ ಎಂದು ಹೇಳಿ ಡಿಯರ್ ಕಾಮ್ರೆಡ್ (Dear Comrade) ಚಿತ್ರದ ಖ್ಯಾತಿಯ ನಟ ರಾಜ್ ಅರ್ಜುನ್ (Raj Arjun) ಅಚ್ಚರಿಯ ಹೇಳಿಕೆಯೊಂದನ್ನು ರಶ್ಮಿಕ ಮಂದಣ್ಣ ಅವರ ಕುರಿತು ಹೇಳಿದ್ದಾರೆ. ರಶ್ಮಿಕ ಮಂದಣ್ಣ ಕನ್ನಡ ಚಿತ್ರದಿಂದ ಪರಿಚಿತರಾಗಿ ಇದೀಗ ಪರಭಾಷೆಗಳಲ್ಲಿ ಮಿಂಚುತ್ತಿರುವ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದರೆ ಅವರು ಸಾಕಷ್ಟು ವರ್ಷಗಳಿಂದ ಟ್ರೋಲ್, ನಿಂದನೆಗಳನ್ನು, ಅಪಹಾಸ್ಯಗಳನ್ನು ಎದುರಿಸುತ್ತ ಬಂದಿದ್ದಾರೆ. ಇತ್ತೀಚೆಗೆ ಅವರು ಇದೆಲ್ಲದರ ಬಗ್ಗೆ ಮಾತನಾಡಿದ್ದರು. ಇನ್ಸ್ಟಾಗ್ರಾಮ್ ನಲ್ಲಿ ತಾವು ಸಾಕಷ್ಟು ವರ್ಷಗಳಿಂದ ಎದುರಿಸುತ್ತಿರುವ ಈ ರೀತಿಯ ಟ್ರೋಲ್, ನಿಂದನೆಗಳ ಕುರಿತು ಅವರು ಸುಧೀರ್ಘವಾಗಿ ಬರೆದುಕೊಂಡಿದ್ದರು.

ಸಿನಿಮಾ ಕ್ಷೇತ್ರಕ್ಕೆ ಬಂದಾಗಿನಿಂದಲೂ ನನ್ನನ್ನು ಗೇಲಿ ಮಾಡುತ್ತಲೇ ಬರುತ್ತಿದ್ದಾರೆ. ನಾನು ಸುಮ್ಮನಿದ್ದೇನೆ ಎಂದರೆ ಅದರ ಅರ್ಥ ನೀವು ಏನು ಬೇಕಾದರೂ ಹೇಳಬಹುದು ಎಂದಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಸಂದರ್ಶನ ಒಂದರ ಕುರಿತಾಗಿ ಮಾತನಾಡಿರುವ ಅವರು ನನ್ನ ಸಂದರ್ಶನದ ಮಾತುಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದರು. ದ್ವೇಷದಿಂದ ಏನು ಸಿಗುವುದಿಲ್ಲ, ಒಳ್ಳೆಯದನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ. ನಾನು ಇದುವರೆಗೂ ಯಾರನ್ನೂ ದ್ವೇಷಿಸಿಲ್ಲ, ನನ್ನೊಂದಿಗೆ ಕೆಲಸ ಮಾಡುವವರನ್ನು ಬಹಳ ಗೌರವದಿಂದ ಕಂಡಿದ್ದೇನೆ. ಅವರ ಪ್ರತಿಭೆಯನ್ನು ಪ್ರಶಂಶಿಸಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತ ಪರಿಶ್ರಮ ಪಡುತ್ತಿದ್ದೇನೆ ಎಂದಿದ್ದರು. ಇದನ್ನು ಓದಿ.. Kannada News: ಹಲವಾರು ವರ್ಷಗಳಿಂದ ಕನ್ನಡಿಗರ ಹೃದಯಕ್ಕೆ ಕನ್ನ ಹಾಕಿರುವ ನಂಬರ್ 1 ನಟಿ, ನಿಷ್ವಿಕ ರವರ ವಯಸ್ಸು ತಿಳಿದರೆ ನಂಬಲು ಕೂಡ ಆಗಲ್ಲ. ಅದೆಷ್ಟು ಚಿಕ್ಕವರು ಗೊತ್ತೇ??

ಇಷ್ಟೆಲ್ಲ ಇದ್ದರೂ ಕಾರಣವಿಲ್ಲದೆ ನನ್ನ ಬಗ್ಗೆ ನೆಗೆಟಿವ್ ಕಮೆಂಟ್ ಹರಡುತ್ತಲೇ ಇದ್ದಾರೆ. ಇದರಿಂದ ಯಾವ ಲಾಭವೂ ಇಲ್ಲ. ಇದರಿಂದ ಯಾರಿಗೂ ಸಂತೋಷವೂ ಸಿಗುವುದಿಲ್ಲ. ನಾನು ಬಹಳ ನೊಂದುಕೊಂಡಿದ್ದೇನೆ ಎಂದು ಬಹಳ ದೀರ್ಘವಾಗಿ ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದ ಅವರು ತಮ್ಮ ನೋವನ್ನು ಹೊರ ಹಾಕಿದ್ದರು. ಇದರ ಬೆನ್ನಲ್ಲೇ ಡಿಯರ್ ಕಾಮ್ರೆಡ್ ಚಿತ್ರದ ವಿಲನ್ ಪಾತ್ರಧಾರಿ ರಾಜ್ ಅರ್ಜುನ್ ಮಾಧ್ಯಮದವರ ಜೊತೆಗೆ ಮಾತನಾಡುತ್ತಾ ರಶ್ಮಿಕ ಮಂದಣ್ಣ ಅವರ ಕುರಿತು ಹೇಳಿದ್ದಾರೆ. ರಶ್ಮಿಕ ಅವರು ಬಹಳ ಒಳ್ಳೆಯ ವ್ಯಕ್ತಿತ್ವ ಇರುವ ನಟಿ. ಅವರು ಎಲ್ಲರನ್ನೂ ಅತ್ಯಂತ ಪ್ರೀತಿ ಗೌರವದಿಂದ ಕಾಣುತ್ತಾರೆ. ಆದರೆ ಅವರ ಈಗಿನ ಪರಿಸ್ಥಿತಿಯನ್ನು ನೋಡಿದರೆ ಬೇಸರವಾಗುತ್ತದೆ. ಅವರದಲ್ಲದ ತಪ್ಪಿಗೆ ಅವರನ್ನು ಗೇಲಿ ಮಾಡುವುದು ಸರಿಯಲ್ಲ ಎಂದು ಅವರು ಮಾಧ್ಯಮದವರ ಜೊತೆಗೆ ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Cricket News: ಕೊನೆಗೂ ತನ್ನ ತಪ್ಪನ್ನು ಅರ್ಥ ಮಾಡಿಕೊಂಡ ರೋಹಿತ್ ಶರ್ಮ: ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಹೊಸ ರೋಹಿತ್ ನೋಡಲು ಸಿದ್ದವಾಗಿ.