Cricket News: ಕೊನೆಗೂ ತನ್ನ ತಪ್ಪನ್ನು ಅರ್ಥ ಮಾಡಿಕೊಂಡ ರೋಹಿತ್ ಶರ್ಮ: ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಹೊಸ ರೋಹಿತ್ ನೋಡಲು ಸಿದ್ದವಾಗಿ.

14

Cricket News: ಟಿ 20 ವಿಶ್ವಕಪ್ (T20 World Cup) ಪಂದ್ಯದಲ್ಲಿ ಭಾರತ (Team India) ಸೆಮಿ ಫೈನಲ್ ವರೆಗೆ ಮಾತ್ರವೇ ಹೋಗಲು ಶಕ್ತವಾಯಿತು. ಸೆಮಿ ಫೈನಲ್ ನಲ್ಲಿ ತನ್ನ ನೀರಸ ಪ್ರದರ್ಶನದಿಂದ ಟೀಮ್ ಇಂಡಿಯಾ ಮುಗ್ಗರಿಸಿತು. ಪಂದ್ಯದ ವೈಫಲ್ಯಕ್ಕೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ನೀಡಿದರು. ಆದರೆ ಸಾಕಷ್ಟು ಜನರು ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರನ್ನು ಟೀಕಿಸಿದರು. ಅವರ ಕ್ಯಾಪ್ಟನ್ಸಿ ಸರಿ ಇರಲಿಲ್ಲ, ತಂಡವನ್ನು ಅವರು ಸರಿಯಾಗಿ ಮುನ್ನಡೆಸಲಿಲ್ಲ. ಅವರು ಕ್ಯಾಪ್ಟನ್ ಆಗಲು ಎಷ್ಟರಮಟ್ಟಿಗೆ ಅರ್ಹರು ಎಂದೆಲ್ಲ ಟೀಕೆಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಬಿಸಿಸಿಐ (BCCI) ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇನ್ನು ಮುಂದೆ ಹೊಸ ರೋಹಿತ್ ನನ್ನು ನೋಡಬಹುದು.

ಅಂದ ಹಾಗೆ ಟೀಮ್ ಇಂಡಿಯಾ ಟಿ 20 ಸೆಮಿ ಫೈನಲ್ ನಲ್ಲಿ ಸೋತ ನಂತರ ತಂಡದ ಕೋಚ್ ಸಿಬ್ಬಂದಿಗಳು, ಮಾಜಿ ಆಟಗಾರರು ಸೇರಿದಂತೆ ಸಾಕಷ್ಟು ಜನರು ರೋಹಿತ್ ಶರ್ಮ ಅವರನ್ನು ಟೀಕಿಸಿದರು. ಅಲ್ಲದೇ ಅವರ ತೂಕ ಸಾಕಷ್ಟು ಹೆಚ್ಚಾಗಿತ್ತು. ಫಿಟ್ನೆಸ್ ಮೆಂಟೇನ್ ಮಾಡಿಲ್ಲ ಎಂದು ಅವರನ್ನು ದೂಷಿಸಲಾಗಿತ್ತು. ಟಿ20 ವಿಶ್ವಕಪ್ ನಿಂದ ನಿರ್ಗಮಿಸಿರುವ ರೋಹಿತ್ ಶರ್ಮ, ವಿರಾಟ್ ಕೊಹ್ಲಿ (Virat Kohli) ಮತ್ತು ಕೆ ಎಲ್ ರಾಹುಲ್ (K L Rahul) ರವರಿಗೆ ವಿಶ್ರಾಂತಿ ನೀಡಲಾಗಿದೆ. ವಿರಾಟ್ ಕೊಹ್ಲಿ ಪತ್ನಿಯ ಜೊತೆಗೆ ಪ್ರವಾಸದಲ್ಲಿದ್ದರೆ, ಕೆ ಎಲ್ ಕೆ ರಾಹುಲ್ ಸಾಮಾಜಿಕ ಮಾಧ್ಯಮಗಳಿಂದಲೂ ದೂರವಾಗಿದ್ದಾರೆ. ಆದರೆ ರೋಹಿತ್ ಶರ್ಮಾ ಬೇರೆಯದೇ ಸಾಹಸಕ್ಕೆ ಕೈ ಹಾಕಿದ್ದಾರೆ. ಇದನ್ನು ಓದಿ..Cricket News: ಭಾರತದ ಭವಿಷ್ಯದ ಆಟಗಾರನನ್ನು ಹೆಸರಿಸಿದ ದಿನೇಶ್ ಕಾರ್ತಿಕ್, ಆತನ ಮೇಲೆ ನಿರೀಕ್ಷೆ ಹೆಚ್ಚಿದೆ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

ರೋಹಿತ್ ಶರ್ಮಾ ತಮ್ಮ ವಿಶ್ರಾಂತಿಯ ಈ ಸಮಯದಲ್ಲಿ ಅವರ ಫಿಟ್ನೆಸ್ ಮೇಲೆ ಗಮನ ಹರಿಸಿದ್ದಾರೆ. ಮೊದಲಿನಂತೆ ತಂಡದಲ್ಲಿ ಉತ್ತಮವಾಗಿ ಆಡಲು ಅವರು ತಮ್ಮ ಫಿಟ್ನೆಸ್ ಕಡೆಗೆ ಗಮನ ನೀಡಿದ್ದಾರೆ. ಮೊದಲಿನಂತೆ ಮತ್ತದೆ ಉರುಪಿನಿಂದ ಅವರು ತಂಡದಲ್ಲಿ ಆಡಲು ಉದ್ದೇಶಿಸಿದ್ದಾರೆ. ಇದೀಗ ವಿಶ್ರಾಂತಿಯಲ್ಲಿರುವ ರೋಹಿತ್ ಶರ್ಮ ಬಾಂಗ್ಲಾದೇಶದ ಪ್ರವಾಸದೊಂದಿಗೆ ಮತ್ತೆ ಆಡಲು ತಂಡಕ್ಕೆ ವಾಪಸ್ ಆಗಲಿದ್ದಾರೆ. ಬಾಂಗ್ಲಾದೇಶದ ಆತಿಥ್ಯದ ಪಂದ್ಯದಲ್ಲಿ ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಒಂದು ಟೆಸ್ಟ್ ಸರಣಿ ಪಂದ್ಯಗಳಲ್ಲಿ ಆಡಲಿದೆ. ಇದನ್ನು ಓದಿ..Kannada News: ಹಲವಾರು ವರ್ಷಗಳಿಂದ ಕನ್ನಡಿಗರ ಹೃದಯಕ್ಕೆ ಕನ್ನ ಹಾಕಿರುವ ನಂಬರ್ 1 ನಟಿ, ನಿಷ್ವಿಕ ರವರ ವಯಸ್ಸು ತಿಳಿದರೆ ನಂಬಲು ಕೂಡ ಆಗಲ್ಲ. ಅದೆಷ್ಟು ಚಿಕ್ಕವರು ಗೊತ್ತೇ??