ವಿಶ್ವಕಪ್ ಸೋಲಿನ ಬಳಿಕ ಮತ್ತೊಂದು ಎಡವಟ್ಟು ಮಾಡಿದರೆ ದ್ರಾವಿಡ್?? ರವಿಶಾಸ್ತ್ರಿ ತರಾಟೆಗೆ ತೆಗೆದುಕೊಂಡದ್ದು ಯಾಕೆ ಗೊತ್ತೇ?

11

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ತಂಡದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಗುಡುಗಿದ್ದಾರೆ. ರಾಹುಲ್ ದ್ರಾವಿಡ್ ಅವರ ಕಾರ್ಯ ವೈಖರಿಯ ಕುರಿತು ಪ್ರಶ್ನಿಸಿದ್ದು, ಅವರ ಅರ್ಹತೆಯ ಬಗ್ಗೆ ಟೀಕಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚಿಂಗ್ನಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಭಾಗವಹಿಸಿತ್ತು. ಸೆಮಿ ಫೈನಲ್ ವರೆಗೂ ತಲುಪಿದ ತಂಡವು ಸೆಮಿ ಫೈನಲ್ ನಲ್ಲಿ ಮುಗ್ಗರಿಸಿತು. ಈ ಬಾರಿ ಆಟಗಾರರ ಕಳಪೆ ಪ್ರದರ್ಶನ ಮತ್ತು ಪೆಟ್ಟು ಮಾಡಿಕೊಂಡಿದ್ದರಿಂದಾಗಿ ಭಾರತ ತಂಡ ಸೋಲಿನ ರುಚಿ ಕಾಣಬೇಕಾಯಿತು. ಜೊತೆಗೆ ಆಟಗಾರರಿಗೆ ಉತ್ತಮ ತರಬೇತಿ ಇಲ್ಲದಿದ್ದು ಎದ್ದು ಕಾಣುತ್ತಿತ್ತು. ನ್ಯೂಜಿಲೆಂಡ್ನಲ್ಲಿ ನಡೆಯಲಿರುವ ಸರಣಿ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಸೇರಿದಂತೆ ಸಾಕಷ್ಟು ಜನರು ವಿಶ್ರಾಂತಿಯ ನೆಪ ಹೇಳಿ ಗೈರಾಗಿರುವುದಕ್ಕೆ ಅವರು ಕೆಂಡಕಾರಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್ ಸೆಮಿ ಫೈನಲ್ ನ ಬಳಿಕ ಇದೀಗ ಟೀಮ್ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದೆ. ತಂಡವು ಅಲ್ಲಿ ಕೆಲವು ಸರಣಿಗಳ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಆಡಲಿದೆ. ಆದರೆ ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರು ತಂಡದ ಕೋಚ್ ಮಾಡುತ್ತಿಲ್ಲ. ಅವರು ಸೇರಿದ ಹಾಗೆ ತಂಡದ ಇತರ ಕೋಚಿಂಗ್ ಸಿಬ್ಬಂದಿಗಳು ವಿಶ್ರಾಂತಿ ಗಾಗಿ ತಂಡದಿಂದ ಹೊರಗೆ ಉಳಿದಿದ್ದಾರೆ. ಇದರ ಜೊತೆಗೆ ಸಾಕಷ್ಟು ಒಳ್ಳೆಯ ಆಟಗಾರರನ್ನು ಕೂಡ ವಿಶ್ರಾಂತಿಯ ಹೆಸರಿನಿಂದ ವಿರಾಮ ನೀಡಲಾಗಿದೆ. ಇದರ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ತಕರಾರು ತೆಗೆದಿದ್ದಾರೆ. ರಾಹುಲ್ ದ್ರಾವಿಡ್ ಅವರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಸಿದ್ದು, ಇಷ್ಟು ದಿನಗಳ ವಿರಾಮದ ಅವಶ್ಯಕತೆ ಏನಿದೆ ಎಂದು ಅವರು ಟೀಕಿಸಿದ್ದಾರೆ.

ಮಾಧ್ಯಮದವರ ಜೊತೆಗೆ ಇದರ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ ಅವರು “ನನಗೆ ವಿರಾಮದ ಬಗ್ಗೆ ವಿಶ್ವಾಸವಿಲ್ಲ, ನಾನು ಕೋಚ್ ಆಗಿರುವುದು ತಂಡದ ಜೊತೆಗೆ ಇದ್ದು ಅವರಿಗೆ ಮಾರ್ಗದರ್ಶನ ಮಾಡಲು. ಅದನ್ನು ಬಿಟ್ಟು ವಿರಾಮ ತೆಗೆದುಕೊಂಡರೆ ಪಂದ್ಯಗಳಲ್ಲಿ ಗೆಲ್ಲುವುದು ಹೇಗೆ? ಆಟಗಾರರಿಗೆ ಉತ್ತಮ ಮಾರ್ಗದರ್ಶನ ಹೇಗೆ ಸಿಗುತ್ತದೆ. ಒಬ್ಬ ಕೋಚ್ ಯಾವಾಗಲೂ ಆಟಗಾರರ ಜೊತೆಗೆ ಇದ್ದು ತಂಡವನ್ನು ಮುನ್ನಡೆಸಬೇಕು” ಎಂದು ಅವರು ಹೇಳಿದ್ದಾರೆ. ಜೊತೆಗೆ ರಾಹುಲ್ ದ್ರಾವಿಡ್ ಅವರ ಅನಗತ್ಯ ವಿರಾಮದ ಬಗ್ಗೆ ಪ್ರಶ್ನಿಸಿರುವ ಅವರು “ಇಷ್ಟು ದಿನಗಳ ವಿರಾಮ ಅಗತ್ಯವಿದೆಯೆ ಎಂದು ನನಗನಿಸುತ್ತದೆ. ವಿರಾಮದ ನೆಪ ಹೇಳಿ ವಿಶ್ರಾಂತಿಗಾಗಿ ತಂಡದಿಂದ ಹೊರಗೆ ಉಳಿಯುವುದು ಒಬ್ಬ ಕೊಚ್ಚಿಗೆ ಉತ್ತಮವೆನಿಸುವುದಿಲ್ಲ. ನಿಮಗೆ ಎಷ್ಟು ದಿನ ವಿರಾಮ ಬೇಕು. ಐಪಿಎಲ್ ಸಮಯದಲ್ಲಿ ಎರಡು ಮೂರು ತಿಂಗಳು ಸಮಯ ಸಿಗುತ್ತದೆ. ಆ ಅವಧಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ. ಅದಕ್ಕಿಂತ ಹೆಚ್ಚಿನ ವಿಶ್ರಾಂತಿ ಅಗತ್ಯವೇನಿದೆ?” ಎಂದು ಅವರು ಪ್ರಶ್ನಿಸಿದ್ದಾರೆ.