Kannada News: ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದಿರುವ ಜಡೇಜಾ ಪತ್ನಿ ರಿವಾಬ ರವರ ಆಸ್ತಿ ಮೌಲ್ಯ ಕೇಳಿದರೆ ಶಾಕ್ ಆಗಿ ತಲೆ ತಿರುಗುತ್ತದೆ. ಎಷ್ಟು ಕೋಟಿ ಗೊತ್ತೆ??
Kannada News: ಇತ್ತೀಚಿಗಷ್ಟೇ ಗುಜರಾತ್ (Gujarat) ವಿಧಾನಸಭಾ ಚುನಾವಣೆಯ (Vidhanasabha Elections) ದಿನಾಂಕ ಅಂತಿಮವಾಗಿ ನಿಗದಿಕೊಂಡಿದೆ. ಚುನಾವಣೆಯ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಬಿಜೆಪಿಯು ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪೈಕಿ ಕೆಲವು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಸಾಕಷ್ಟು ಅಭ್ಯರ್ಥಿಗಳ ಹೆಸರೇ ನಿರೀಕ್ಷೆ ಹುಟ್ಟಿಸಿದೆ. ಮತ್ತು ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ. ಬಿಜೆಪಿ (BJP) ಪಕ್ಷವು ಬಿಡುಗಡೆಗೊಳಿಸಿರುವ ಮೊದಲ ಪಟ್ಟಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿಯು ಇದ್ದಾರೆ. ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬ ಜಡೇಜಾ (Rivaba Jadeja) ಅವರ ಒಟ್ಟು ಆಸ್ತಿಯ ಮೌಲ್ಯ ಕೇಳಿದ್ರೆ ನೀವು ಶಾಕ್ ಆಗ್ತೀರಾ.
ಬಿಜೆಪಿ ಪಕ್ಷವು ಬಿಡುಗಡೆಗೊಳಿಸಿರುವ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ರಿವಾಬ ಜಡೇಜಾ ಟಿಕೆಟ್ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ಚುನಾವಣೆ ಪೂರ್ವ ತಯಾರಿಯಲ್ಲಿ ಅವರು ನಿರತರಾಗಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಬೇಕಾದ ಎಲ್ಲ ಕಾರ್ಯ ತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. 2019ರಲ್ಲಿ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದ ರಿವಾಬ ಜಡೇಜ ಅವರು ಪಕ್ಷದಲ್ಲಿ ಸಕ್ರಿಯವಾಗಿ ಅಂದಿನಿಂದಲೂ ತೊಡಗಿಸಿಕೊಂಡಿದ್ದಾರೆ. ಅವರು ಇದೀಗ ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್ ನಗರ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದೀಗ ಅವರು ಸಲ್ಲಿಸಿರುವ ಆಸ್ತಿ ಪಟ್ಟಿ ದೊಡ್ಡ ಸಂಚಲನ ಸೃಷ್ಟಿಸಿದೆ. ಕೋಟಿಗಟ್ಟಲೆ ಇರುವ ಅವರ ಆಸ್ತಿಯ ಲೆಕ್ಕವನ್ನು ಅವರು ಇದೀಗ ನೀಡಿದ್ದಾರೆ. ಇದನ್ನು ಓದಿ.. Kannada Astrology: ಒಣ ತುಳಸಿ ಎಲೆಗಳಿಂದ ನೀವು ಈ ರೀತಿ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಆ ಕೆಲಸ ಮಾಡುತ್ತೀರಿ. ನಿಮ್ಮ ಹಣೆಬರಹವೇ ಬದಲಾಗುತ್ತದೆ.

ರವೀಂದ್ರ ಜಡೇಜಾ ಅವರ ಒಟ್ಟು ಆಸ್ತಿಯ ಮೌಲ್ಯ 70.48 ಕೋಟಿ ರೂಪಾಯಿ. ರವೀಂದ್ರ ಜಡೇಜಾ ಆಸ್ತಿಯನ್ನು ಸೇರಿಸಿ ರಿವಾಬ ಜಡೇಜಾ ಅವರ ಆಸ್ತಿ ಬರೋಬ್ಬರಿ 97.25 ಕೋಟಿ ರೂಪಾಯಿ. ರಿವಾಬ ಅವರು 64.3 ಕೋಟಿ ರೂ ಮೌಲ್ಯದ ಚರಸ್ತಿ ಹೊಂದಿದ್ದಾರೆ. ರಿವಾಬ ಜಡೇಜಾ 57.60 ಲಕ್ಷ ಮೌಲ್ಯದ ಆಸ್ತಿ ಮತ್ತು ಪತಿಯ ಆಸ್ತಿ ಸೇರಿದಂತೆ 37.43 ಕೋಟಿ ಆಸ್ತಿ ಹೊಂದಿದ್ದಾರೆ. ರಿವಾಬ ಅವರು ಯಾವುದೇ ಸ್ಥಿರ ಆಸ್ತಿ ಹೊಂದಿಲ್ಲ. ಆದರೆ ಅವರ ಪತಿ ರವೀಂದ್ರ ಜಡೇಜಾ 33.05 ಕೋಟಿ ರೂ ಮೌಲ್ಯದ ಸ್ಥಿರಸ್ತಿ ಹೊಂದಿದ್ದಾರೆ. ಇದರಲ್ಲಿ ಗುಜರಾತ್ ಮತ್ತು ಜಾಮ್ ನಗರದಲ್ಲಿರುವ ಅಂಗಡಿ ಮುಂಗಟುಗಳು, ಶಾಪ್ ಮತ್ತು ರೆಸ್ಟೋರೆಂಟ್ಗಳು ಸಹ ಸೇರಿವೆ ಎಂದು ದಾಖಲಿಸಿದ್ದಾರೆ. ಅವರು ರಾಜಕೋಟ್, ಅಹಮದಾಬಾದ್, ಜಾಮ್ ನಗರದಲ್ಲಿ ಆರು ಮನೆಗಳನ್ನು ಹೊಂದಿದ್ದಾರೆ ಎಂದು ಆಸ್ತಿ ಪಟ್ಟಿಯಲ್ಲಿ ನಮೂದಿಸಲಾಗಿದೆ. ಇದನ್ನು ಓದಿ.. Sapthami Gowda: ಬೇರೆ ಭಾಷೆ ಸಿನೆಮ ಮಾಡುತ್ತೀರಾ ಎಂದಾದ ಕಾಂತಾರ ಸಪ್ತಮಿ ಗೌಡ ಹೇಳಿದ್ದೇನು ಗೊತ್ತೇ?? ಕನ್ಫ್ಯೂಷನ್ ನಲ್ಲಿ ಅಭಿಮಾನಿಗಳು.