Kannada Astrology: ಒಣ ತುಳಸಿ ಎಲೆಗಳಿಂದ ನೀವು ಈ ರೀತಿ ಮಾಡಿದರೆ ಏನಾಗುತ್ತದೆ ಎಂದು ತಿಳಿದರೆ, ಇಂದೇ ಆ ಕೆಲಸ ಮಾಡುತ್ತೀರಿ. ನಿಮ್ಮ ಹಣೆಬರಹವೇ ಬದಲಾಗುತ್ತದೆ.
Kannada Astrology: ಪ್ರತಿ ಮನೆಯ ಅಂಗಳದಲ್ಲಿ ತುಳಸಿ (Tulasi) ಗಿಡವನ್ನು ಕಾಣುವುದು ಸರ್ವೇಸಾಮಾನ್ಯ. ತುಳಸಿ ಗಿಡವನ್ನು ದೇವರೆಂದು ಭಾವಿಸುವ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವಿದೆ. ತುಳಸಿ ಗಿಡದಲ್ಲಿ ದೇವಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಐಶ್ವರ್ಯ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ತುಳಸಿ ಗಿಡದಲ್ಲಿ ವಾಸವಿರುತ್ತಾರೆ. ತುಳಸಿ ಗಿಡವನ್ನು ನೆಡುವುದರಿಂದ ಮತ್ತು ಪೂಜಿಸುವುದರಿಂದ ಲಕ್ಷ್ಮಿ ಒಲಿಯುತ್ತಾಳೆ. ಜೊತೆಗೆ ತುಳಸಿ ಎಲೆಗಳಿಂದ ಕೆಲವು ಕೆಲಸಗಳನ್ನು ಮಾಡುವುದರಿಂದಾಗಿ ದೇವಿ ಲಕ್ಷ್ಮಿ ನೆಲೆಸುತ್ತಾಳೆ. ಒಳ್ಳೆಯ ಶುಭಫಲಗಳು ದೊರೆಯುತ್ತವೆ. ಹಾಗಿದ್ದರೆ ತುಳಸಿಯ ಒಣ ಎಲೆಗಳಿಂದ ಮಾಡಬಹುದಾದ ಉತ್ತಮ ಕಾರ್ಯ ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ.
ತುಳಸಿ ಗಿಡವನ್ನು ಲಕ್ಷ್ಮಿ ದೇವಿಗೆ ಹೋಲಿಸಲಾಗಿದೆ. ತುಳಸಿ ಗಿಡವು ಲಕ್ಷ್ಮಿ ಸ್ವರೂಪವಾಗಿದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡಕ್ಕೆ ಪ್ರತಿನಿತ್ಯ ಪೂಜೆ ಮಾಡುವುದರಿಂದ ಲಕ್ಷ್ಮಿಯು ಒಲಿಯುತ್ತಾಳೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿರುವುದರಿಂದ ಶ್ರೀ ವಿಷ್ಣುವಿನ ಕೃಪೆಯೂ ಲಭಿಸುತ್ತದೆ. ತುಳಸಿ ಗಿಡವನ್ನು ಮನೆ ಮುಂದೆ ಹಾಗೂ ಅಂಗಳದಲ್ಲಿ ಹಾಕುವುದರಿಂದ ಮನೆಯಲ್ಲಿ ನಕಾರಾತ್ಮಕತೆ ತೊಲಗಿ ಸಕಾರಾತ್ಮಕತೆ ಪ್ರಾಪ್ತಿಯಾಗುತ್ತದೆ. ಶ್ರೀ ಕೃಷ್ಣನನ್ನು ವಿಷ್ಣುವಿನ ರೂಪ ಮತ್ತು ಅವತಾರ ಎಂದು ಪುರಾಣಗಳು ಹೇಳುತ್ತವೆ. ಬಾಲಕೃಷ್ಣನನ್ನು ತುಳಸಿಯ ಒಣ ಎಲೆಗಳಿಂದ ಪೂಜಿಸುವುದರಿಂದ ಒಳ್ಳೆಯ ಶುಭಫಲಗಳು ದೊರೆಯುತ್ತವೆ. ಬಾಲಕೃಷ್ಣನಿಗೆ ಅಭಿಷೇಕ ಮಾಡುವ ತೀರ್ಥದ ಜೊತೆಗೆ ತುಳಸಿಯ ಒಣ ಎಲೆಗಳನ್ನು ಹಾಕಿ ಅಭಿಷೇಕ ಮಾಡಬೇಕು. ಇದನ್ನು ಓದಿ.. Kannada News: ಉಪೇಂದ್ರ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಉಪ್ಪಿ ಪ್ರೇಮ ಪ್ರೀತಿ ಮಾಡುತ್ತಿದ್ದಾರಾ?? ಮೊದಲ ಬಾರಿಗೆ ಪ್ರೇಮ ಹೇಳಿದ್ದೇನು ಗೊತ್ತೆ??

ಭಗವಾನ್ ವಿಷ್ಣು ಮತ್ತು ಶ್ರೀ ಕೃಷ್ಣರ ಪೂಜೆ ಮಾಡುವಾಗ, ದೇವರ ನೈವೇದ್ಯ ತಯಾರಿಸುವಾಗ ಅದಕ್ಕೆ ತುಳಸಿಯ ಒಣ ಎಲೆಗಳನ್ನು ಬಳಸುವುದು ಒಳ್ಳೆಯದು. ತುಳಸಿಯ ಎಲೆಗಳು ಎಲೆಗಳು 15 ದಿನಗಳಾದರೂ ಕೆಡದೆ ಚೆನ್ನಾಗಿರುತ್ತವೆ. ನೀವು ಸಾಕಷ್ಟು ದಿನಗಳಿಂದ ಹಣಕಾಸಿನ ತೊಂದರೆ ಎದುರಿಸುತ್ತಿದ್ದರೆ, ಆರ್ಥಿಕ ಸಮಸ್ಯೆ ಎದುರಾಗಿದ್ದರೆ ಒಣ ತುಳಸಿ ಎಲೆಗಳನ್ನು ಕೆಂಪು ಬಟ್ಟೆಗೆ ಕಟ್ಟಿ ಮನೆಯ ಕಪಾಟಿನಲ್ಲಿ ಇರಿಸಿ. ಇದರಿಂದಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿ ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ನಿಮ್ಮ ಮನೆಯಲ್ಲಿ ವಾಸ್ತುದೋಷ ಇದೆ ಎನಿಸಿದರೆ ಅಥವಾ ಮನೆಯ ತುಂಬಾ ನಕರಾತ್ಮಕತೆ ತುಂಬಿಕೊಂಡಿದೆ ಎನ್ನುವ ಭಾವನೆ ಇದ್ದರೆ, ಗಂಗಾಜಲಕ್ಕೆ ಒಣ ತುಳಸಿಯ ಎಲೆಗಳನ್ನು ಹಾಕಿ ಇಡೀ ಮನೆಗೆ ಸಿಂಪಡಿಸಿ. ಆಗ ಮನೆ ಸಕರಾತ್ಮಕತೆಯಿಂದ ತುಂಬಲಿದ್ದು, ನೆಮ್ಮದಿ ಶಾಂತಿ ನೆಲೆಸಲಿದೆ. ಇದನ್ನು ಓದಿ.. Sapthami Gowda: ಬೇರೆ ಭಾಷೆ ಸಿನೆಮ ಮಾಡುತ್ತೀರಾ ಎಂದಾದ ಕಾಂತಾರ ಸಪ್ತಮಿ ಗೌಡ ಹೇಳಿದ್ದೇನು ಗೊತ್ತೇ?? ಕನ್ಫ್ಯೂಷನ್ ನಲ್ಲಿ ಅಭಿಮಾನಿಗಳು.