Sapthami Gowda: ಬೇರೆ ಭಾಷೆ ಸಿನೆಮ ಮಾಡುತ್ತೀರಾ ಎಂದಾದ ಕಾಂತಾರ ಸಪ್ತಮಿ ಗೌಡ ಹೇಳಿದ್ದೇನು ಗೊತ್ತೇ?? ಕನ್ಫ್ಯೂಷನ್ ನಲ್ಲಿ ಅಭಿಮಾನಿಗಳು.
Sapthami Gowda: ಕಾಂತಾರ (Kantara) ಚಿತ್ರದ ಲೀಲಾ ಖ್ಯಾತಿಯ ಸಪ್ತಮಿ ಗೌಡ ಅವರು ಇತ್ತೀಚಿಗೆ ತಾವು ಬೇರೊಂದು ಭಾಷೆಯ ಚಿತ್ರದಲ್ಲಿ ನಟಿಸುವುದರ ಕುರಿತಾಗಿ ಮಾತನಾಡಿದ್ದಾರೆ. ಪರಭಾಷೆಯಲ್ಲಿ ನಟಿಸುವುದರ ಕುರಿತು ತಮಗಿರುವ ಅಭಿಪ್ರಾಯದ ಕುರಿತು ಅವರು ಹಂಚಿಕೊಂಡಿದ್ದಾರೆ. ಕಾಂತಾರ ಚಿತ್ರ ದಿನದಿಂದ ದಿನಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ತಯಾರಾದ ಕನ್ನಡ ಸೊಗಡಿನ ಈ ಕಥೆ ಇದೀಗ ಬೇರೆ ಬೇರೆ ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಷಭ್ ಶೆಟ್ಟಿ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಚಿತ್ರದ ಲೀಲಾ ಪಾತ್ರಧಾರಿಯ ನಟನೆ, ಅವರ ಸೌಂದರ್ಯಕ್ಕೆ ಜನ ಮಾರುಹೋಗುತ್ತಿದ್ದಾರೆ.
ಕಾಂತಾರ ಚಿತ್ರದ ಲೀಲ ಇದೀಗ ಅಭಿಮಾನಿಗಳ ಫೇವರೆಟ್ ಎನಿಸಿಕೊಂಡಿದ್ದಾರೆ. ಅವರ ಸಹಜ ಸೌಂದರ್ಯಕ್ಕೆ ಜನರು ಮಾರು ಹೋಗಿದ್ದಾರೆ. ಫಾರೆಸ್ಟ್ ಗಾರ್ಡಾಗಿ ನಟಿಸಿರುವ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೇ ನಟಿ ಸಪ್ತಮಿ ಗೌಡ ಅವರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಕಾಂತಾರ ಚಿತ್ರದ ಸಕ್ಸಸ್ ಮೂಡ್ ನಲ್ಲಿರುವ ಅವರು ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆದರು. ಆನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದ್ದಾರೆ. ಬೇರೆ ಭಾಷೆಯ ಚಿತ್ರಗಳಲ್ಲಿಯೂ ನಟಿಸುತ್ತೀರಾ ಎಂದು ಕೇಳಿದ್ದಕ್ಕೆ ಅವರು ಉತ್ತರಿಸಿದ್ದಾರೆ. ಇದನ್ನು ಓದಿ..Kannada News: ಚಿರು ಸರ್ಜಾ ತೋರ್ಸಿ ಯಾರೆಂದು ಕೇಳಿದಾಗ ಮೇಘನಾ ರಾಜ್ ಮಗನ ಉತ್ತರ ಅದೆಷ್ಟು ಕ್ಯೂಟ್ ಇತ್ತು ಗೊತ್ತೇ??

ಸಪ್ತಮಿ ಅವರು “ಕಾಂತಾರ ಇಷ್ಟು ದೊಡ್ಡ ಹೆಸರು ಮಾಡುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಲೀಲಾ ಪಾತ್ರಕ್ಕೆ ನನಗೆ ಅವಕಾಶ ಕೇಳಿ ಬಂದಾಗ ನಾನು ಕಥೆ ಇಷ್ಟವಾಗಿ ಒಪ್ಪಿಕೊಂಡೆ, ಆದರೆ ಇದು ಇಷ್ಟು ದೊಡ್ಡ ಯಶಸ್ಸು ಕಂಡು ನನಗೆ ದೊಡ್ಡ ಹೆಸರು ತಂದುಕೊಡುತ್ತದೆ ಎಂದು ಊಹಿಸಿಯು ಇರಲಿಲ್ಲ. ನಾನು ಯಾವಾಗಲೂ ಕಾಂತಾರ ಚಿತ್ರಕ್ಕೆ ಮತ್ತು ರಿಷಬ್ ಶೆಟ್ಟಿಯವರಿಗೆ ಆಭಾರಿಯಾಗಿರುತ್ತೇನೆ” ಎಂದು ಅವರು ಹೇಳಿದ್ದಾರೆ. ಬೇರೆ ಭಾಷೆಯಲ್ಲಿಯೂ ನಟಿಸುತ್ತೀರಾ ಎಂದು ಕೇಳಿದ್ದಕ್ಕೆ “ಕಲಾವಿದರಿಗೆ ಭಾಷೆಯ ಗಡಿ ಇರಬಾರದು. ನನಗೆ ಕನ್ನಡ ಭಾಷೆಯ ಮೇಲೆ, ಕರ್ನಾಟಕದ ಮೇಲೆ ಅಪಾರ ಅಭಿಮಾನವಿದೆ. ನಾನು ಇಲ್ಲಿಯವಳು. ಇಲ್ಲಿನ ಚಿತ್ರಗಳಲ್ಲಿ ನಟಿಸುವುದು ನನ್ನ ಮೊದಲ ಆಯ್ಕೆ. ಆದರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುವುದಕ್ಕೂ ಆಫರ್ ಕೇಳಿ ಬರುತ್ತಿದೆ. ಕಥೆ ಕೇಳುತ್ತಿದ್ದೇನೆ. ಇಷ್ಟವಾದರೆ ನಟಿಸುತ್ತೇನೆ. ಆದರೆ ಕನ್ನಡದಲ್ಲಿ ಹೆಚ್ಚು ನಟಿಸುತ್ತೇನೆ. ನಾನು ಕನ್ನಡವನ್ನು ಎಂದಿಗೂ ಬಿಡುವುದಿಲ್ಲ. ಇದು ನನ್ನ ಮೂಲ” ಎಂದು ಅವರು ಅಭಿಮಾನದಿಂದ ಹೇಳಿದ್ದಾರೆ. ಇದನ್ನು ಓದಿ.. Kannada News: ಉಪೇಂದ್ರ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಉಪ್ಪಿ ಪ್ರೇಮ ಪ್ರೀತಿ ಮಾಡುತ್ತಿದ್ದಾರಾ?? ಮೊದಲ ಬಾರಿಗೆ ಪ್ರೇಮ ಹೇಳಿದ್ದೇನು ಗೊತ್ತೆ??