Kannada News: ಉಪೇಂದ್ರ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಉಪ್ಪಿ ಪ್ರೇಮ ಪ್ರೀತಿ ಮಾಡುತ್ತಿದ್ದಾರಾ?? ಮೊದಲ ಬಾರಿಗೆ ಪ್ರೇಮ ಹೇಳಿದ್ದೇನು ಗೊತ್ತೆ??
ನಟಿ ಪ್ರೇಮ (Prema) ಒಂದು ಕಾಲದ ಟಾಪ್ ಸ್ಟಾರ್ ನಟಿಯಾಗಿದ್ದವರು. ಇಂದಿಗೂ ಕೂಡ ಅದೇ ಸೌಂದರ್ಯ, ಚಾರ್ಮ್ ಇಟ್ಟುಕೊಂಡಿದ್ದಾರೆ. ಸೂಪರ್ಹಿಟ್ ಚಲನಚಿತ್ರಗಳಲ್ಲಿ ಅವರು ಪ್ರಮುಖ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಆಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರ ಎರಡನೇ ಚಿತ್ರ ಓಂ (Om). ಶಿವರಾಜ್ ಕುಮಾರ್ (Shiva Rajkumar) ಜೊತೆಗೆ ನಟಿಸಿದ್ದ ಆ ಚಿತ್ರ ಅವರಿಗೆ ದೊಡ್ಡ ಹೆಸರು, ಸಕ್ಸಸ್ ತಂದು ಕೊಟ್ಟಿತ್ತು. ಆನಂತರ ಅವರು ಹಿಂದೆ ತಿರುಗಿ ನೋಡಿದ್ದೆ ಇಲ್ಲ. ಜನಪ್ರಿಯ ಚಿತ್ರಗಳನ್ನು ಕನ್ನಡಕ್ಕೆ ನೀಡಿದರು. ತೆಲುಗು ಮತ್ತು ತಮಿಳು ಭಾಷೆಗಳಲ್ಲಿಯೂ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಅವರು ಸಂದರ್ಶನ ಒಂದರಲ್ಲಿ ಉಪೇಂದ್ರ (Upendra) ಮತ್ತು ಅವರ ನಡುವೆ ಇದ್ದ ಸಂಬಂಧದ ಕುರಿತ ಊಹಾಪೋಗಳ ಬಗ್ಗೆ ಮಾತನಾಡಿದ್ದಾರೆ.
ನಟಿ ಪ್ರೇಮ ಅವರು ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ನಟಿ. ಸಾಕಷ್ಟು ಜನಪ್ರಿಯ ಚಿತ್ರಗಳಲ್ಲಿ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಅವರು ಇತ್ತೀಚಿಗೆ ತೆಲುಗಿನ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಿರೂಪಕಿ “ನಿಮ್ಮ ಹಾಗೂ ಉಪೇಂದ್ರ ಅವರ ನಡುವೆ ಸಂಥಿಂಗ್ ಏನೋ ಇದೆ ಎನ್ನುವ ಊಹಾಪೋಹಗಳು ಆಗಿನಿಂದಲೂ ಅರಿದಾಡುತ್ತಿವೆ. ಉಪೇಂದ್ರ ಚಿತ್ರದ ನಿರ್ಮಾಣ ಸಮಯದಲ್ಲೂ ಈ ಮಾತುಗಳು ಹೆಚ್ಚಾಗಿ ಕೇಳಿಬಂದಿದ್ದವು. ಇದು ಸತ್ಯವೇ?” ಎಂದು ಕೇಳಿದ್ದಾರೆ. ಅದಕ್ಕೆ ನಟಿ ಪ್ರೇಮ ಎಲ್ಲವನ್ನು ಬಹಿರಂಗವಾಗಿ ಹೇಳಿ ಈ ಊಹಾಪೋಹಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ.. Kannada News: ಚಿರು ಸರ್ಜಾ ತೋರ್ಸಿ ಯಾರೆಂದು ಕೇಳಿದಾಗ ಮೇಘನಾ ರಾಜ್ ಮಗನ ಉತ್ತರ ಅದೆಷ್ಟು ಕ್ಯೂಟ್ ಇತ್ತು ಗೊತ್ತೇ??

ಉಪೇಂದ್ರ ಅವರು ನಿರ್ದೇಶಿಸಿ ನಟಿಸುತ್ತಿದ್ದ ಚಿತ್ರ ಉಪೇಂದ್ರ (Upendra Movie). ಈ ಚಿತ್ರದಲ್ಲಿ ಮೂವರು ನಾಯಕಿಯರು. ಅವರಲ್ಲಿ ಪ್ರೇಮ ಕೂಡ ಒಬ್ಬರು. ಆ ಸಮಯದಲ್ಲಿ ಉಪೇಂದ್ರ ಮತ್ತು ಪ್ರೇಮಾ ಅವರ ನಡುವೆ ಏನೋ ಸಂಬಂಧ ಇತ್ತು ಎನ್ನುವ ವದಂತಿ ಹಬ್ಬಿಸಲಾಗಿತ್ತು. ಇದರ ಬಗ್ಗೆ ನಿರೂಪಕಿ ಪ್ರಶ್ನೆ ಕೇಳಿದಾಗ ಪ್ರೇಮಾ ಅವರು “ಆ ರೀತಿ ಏನೂ ಇಲ್ಲ. ಸುಮ್ಮನೆ ನಮ್ಮಿಬ್ಬರ ನಡುವೆ ಇಲ್ಲ ಸಲ್ಲದ ಸಂಬಂಧ ಸೃಷ್ಟಿಸಿ, ತಮಾಷೆ ನೋಡಲು ಇಷ್ಟೆಲ್ಲ ಮಾಡಿದರು. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ನನಗೆ ಉಪೇಂದ್ರ ಅವರ ಮೇಲೆ ಬಹಳ ಗೌರವವಿದೆ. ಒಂದು ಮಹಿಳೆಯ ಬಗ್ಗೆ ಇಷ್ಟು ಕೀಳಾಗಿ ಯೋಚಿಸುವುದು, ಮಾತನಾಡುವುದು ಒಳ್ಳೆಯದಲ್ಲ. ಆ ಸಮಯದಲ್ಲಿ ನನಗೆ ಬಹಳ ನೋವಾಗಿತ್ತು. ಆದರೆ ಇದು ಯಾವುದು ಸತ್ಯವಲ್ಲ ಎಂದು ನನಗೆ ಗೊತ್ತಿತ್ತು. ಹಾಗಾಗಿ ನಾನು ನನ್ನ ಕೆಲಸದ ಕಡೆಗೆ ಗಮನಕೊಟ್ಟೆ” ಎಂದು ಅವರು ಹೇಳಿದ್ದಾರೆ. ಇದನ್ನು ಓದಿ.. Kannada News: ಬನಾರಸ್ ರೀತಿ ನಾಲ್ಕು ಸಿನಿಮಾಗಳು ಬಂದರೆ ದೇಶದಲ್ಲಿ ಹಿಂದೂ ಮುಸ್ಲಿಂ ಹೇಗಿರುತ್ತಾರಂತೆ ಗೊತ್ತೇ?? ನಿರ್ದೇಶಕ ಹೇಳಿದ್ದೇನು ಗೊತ್ತೇ??