Kannada News: ಮಾಲಾಶ್ರೀ ಮಗಳಿಗೆ ಮತ್ತೊಂದು ಸಿಹಿ ಸುದ್ದಿ: ದರ್ಶನ್ ಜೊತೆ ಸಿನೆಮಾ ಮಾಡುವಾಗ ಬಂತು ಮತ್ತೊಂದು ಆಫರ್. ಏನಾಗಿದೆ ಗೊತ್ತೇ??

20

Kannada News: ಮಾಲಾಶ್ರೀ (Malashree) ಹಾಗೂ ಕೋಟಿ ರಾಮು ಎಂದೇ ಪ್ರಖ್ಯಾತರಾದ ನಿರ್ಮಾಪಕ ರಾಮು ಅವರ ಪುತ್ರಿ ರಾಧನಾ ರಾಮ್ ಇದೀಗ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ರವರ ಜೊತೆಗೆ ಅವರ ಮುಂದಿನ ಚಿತ್ರಕ್ಕೆ ರಾಧನ (Radhana) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದ್ದು ಮೊದಲ ಚಿತ್ರದಲ್ಲಿ ಸ್ಟಾರ್ ನಟನೊಂದಿಗೆ ರಾಧನ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೇ ಅವರಿಗೆ ಮತ್ತೊಂದು ಬಂಪರ್ ಆಫರ್ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ. ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ಅವರು ಸಿನಿಮಾ ಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ ಈ ಚಿತ್ರವನ್ನು ಒಬ್ಬರು ಸೂಪರ್ ಜನಪ್ರಿಯ ಸ್ಟಾರ್ ನಿರ್ದೇಶಕರು ನಿರ್ದೇಶಸುತ್ತಿದ್ದಾರೆ.

ಇತ್ತೀಚಿಗಷ್ಟೇ ಮಾಲಾಶ್ರೀ ಪುತ್ರಿ ರಾಧನ ನಟ ದರ್ಶನ್ ರವರ ಮುಂದಿನ ಚಿತ್ರಕ್ಕೆ ಆಯ್ಕೆಯಾಗಿದ್ದರು. ಚಿತ್ರದ ಮುಹೂರ್ತ ಕಾರ್ಯಕ್ರಮವು ಅದ್ದೂರಿಯಾಗಿ ನೆರವೇರಿತು. ಈಗಾಗಲೇ ಚಿತ್ರದ ಶೂಟಿಂಗ್ ಆರಂಭಗೊಂಡಿದ್ದು ಇನ್ನೂ ರಾಧನಾ ಅವರ ಪಾತ್ರದ ಶೂಟಿಂಗ್ ಶುರುವಾಗಿಲ್ಲ. ಆದರೂ ಮೊದಲ ಚಿತ್ರದಲ್ಲಿ ಅವರು ದೊಡ್ಡ ಸ್ಟಾರ್ ನಟನ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೇ ವೇಳೆ ಮೊದಲ ಚಿತ್ರದಲ್ಲಿ ನಟಿಸಲು ಶುರು ಮಾಡುವ ಮೊದಲೇ ಅವರಿಗೆ ಮತ್ತೊಂದು ದೊಡ್ಡ ಅವಕಾಶ ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ. ಈ ರೀತಿಯ ಒಂದು ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಜೋಗಿ ಪ್ರೇಮ್ (Jogi Prem) ಮತ್ತು ಧ್ರುವ ಸರ್ಜಾ (Dhruva Sarja) ಕಾಂಬಿನೇಷನ್ನು ಕೆಡಿ (KD) ಚಿತ್ರವು ಇನ್ನಷ್ಟೇ ಶುರುವಾಗಬೇಕಿದೆ. ಸರಳವಾಗಿ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಿದ ಚಿತ್ರತಂಡ ಈ ಚಿತ್ರದ ಟೈಟಲ್ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಿತ್ತು. ಇದನ್ನು ಓದಿ.. Kannada News: ಎಲ್ಲರಿಗೂ ಓಪನ್ ಚಾಲೆಂಜ್: ಈ ಬಾಲ್ಯದ ಫೋಟೋ ಯಾರು ಎಂದು ಗುರುತಿಸಲು ಸಾಧ್ಯವೇ?? ಕನ್ನಡದ ಟಾಪ್ ನಟಿ ಯಾರು ಗೊತ್ತೇ??

ಜೊತೆಗೆ ಈ ಚಿತ್ರದಲ್ಲಿ ಬಾಲಿವುಡ್ ನ ಸಂಜಯ್ ದತ್ (Sanjay Dutt) ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಂಜಯ್ ದತ್ ಸೇರಿದ ಹಾಗೆ ದೊಡ್ಡ ದೊಡ್ಡ ಸ್ಟಾರ್ ನಟರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಈ ಚಿತ್ರಕ್ಕೆ ನಾಯಕಿಯಾಗಿ ರಾಧನ ಅವರು ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮಾತುಕತೆ ಮುಗಿದಿದ್ದು ಚಿತ್ರಕ್ಕೆ ಅವರು ನಾಯಕಿಯಾಗಿ ಅಂತಿಮಗೊಂಡಿದ್ದಾರೆ ಎನ್ನುವ ಮಾತುಗಳು ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಧ್ರುವ ಸರ್ಜಾ ಮತ್ತು ರಾಧನ ಅವರ ಲುಕ್ ಟೆಸ್ಟ್ ಕೂಡ ಮುಗಿದಿದ್ದು ಚಿತ್ರೀಕರಣ ಶುರುವವಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ರಾಧನ ತಮ್ಮ ಸಿನಿಮಾ ಕೆರಿಯರ್ ನ ಆರಂಭದಲ್ಲೇ ದೊಡ್ಡ ದೊಡ್ಡ ಸ್ಟಾರ್ ನಟರು ನಿರ್ದೇಶಕರ ಜೊತೆಗೆ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ. ಇದನ್ನು ಓದಿ.. IPL 2023: ಆರ್ಸಿಬಿ ತಂಡಕ್ಕೆ ಮಿನಿ ಹರಾಜಿಗೂ ಮುನ್ನವೇ ಬಿಗ್ ಶಾಕ್?? ಸ್ಟಾರ್ ಆಟಗಾರ ಅನುಮಾನವೇ?? ಆತನಿಲ್ಲದೆ ಮುಂದೇನು??