Kannada News: ದರ್ಶನ್ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್: ಕ್ರಾಂತಿ ಸಿನಿಮಾ ಬಗ್ಗೆ ಮೊದಲ ಬಾರಿಗೆ ದರ್ಶನ್ ಹೇಳಿದ್ದೇನು ಗೊತ್ತೇ??

11

Kannada News: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ದೊಡ್ಡ ಮಟ್ಟದ ನಿರೀಕ್ಷೆ ಉಂಟುಮಾಡಿದೆ. ದರ್ಶನ್ ರವರ ಈ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ 26ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಸಾಗುತ್ತಿದೆ. ಚಿತ್ರದ ಬಗ್ಗೆ ಅಷ್ಟೇನೂ ಮಾಹಿತಿಗಳು ಹೊರಗೆ ಬಂದಿಲ್ಲ. ಸಿನಿಮಾದ ಬಗ್ಗೆ ಅಷ್ಟೇನೂ ಮಾಹಿತಿಗಳು ಸಿಗದೇ ಇದ್ದರು ಕೂಡ ಈ ಸಿನಿಮಾದ ಮೇಲಿರುವ ಕ್ರೇಜ್ ಮಾತ್ರ ಕಡಿಮೆ ಏನು ಅಲ್ಲ. ಇದೀಗ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ನಟ ದರ್ಶನ್ ಕ್ರಾಂತಿ ಸಿನಿಮಾದ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೃಷಿ ಸಚಿವ ಬಿ ಸಿ ಪಾಟೀಲ್ ರವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ಕ್ರಾಂತಿ ಸಿನಿಮಾದ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ನಟ ಮತ್ತು ಸಚಿವ ಬಿ ಸಿ ಪಾಟೀಲ್ (B C Patil) ರವರ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಅವರು ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಅವರು ಬಿ ಸಿ ಪಾಟೀಲ್ ರವರು ನಿರ್ಮಿಸಿ ನಟಿಸುತ್ತಿರುವ ಗರಡಿ ಚಿತ್ರದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಬಿಸಿ ಪಾಟೀಲ್ ರವರು ಒಬ್ಬ ಅದ್ಭುತ ನಟ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದೇ ವೇಳೆ ಕ್ರಾಂತಿ ಸಿನಿಮಾದಲ್ಲಿ ನಟಿಸಿರುವ ಹಾಸ್ಯ ನಟ ಧರ್ಮಣ್ಣ ಅವರ ಬಗ್ಗೆಯೂ ಅವರು ಮೆಚ್ಚುಗೆ ಮಾತನಾಡಿದರು. ಇದನ್ನು ಓದಿ.. Kannada News: ಮಾಲಾಶ್ರೀ ಮಗಳಿಗೆ ಮತ್ತೊಂದು ಸಿಹಿ ಸುದ್ದಿ: ದರ್ಶನ್ ಜೊತೆ ಸಿನೆಮಾ ಮಾಡುವಾಗ ಬಂತು ಮತ್ತೊಂದು ಆಫರ್. ಏನಾಗಿದೆ ಗೊತ್ತೇ??

ಕಾರ್ಯಕ್ರಮದಲ್ಲಿ ನಟ ಧರ್ಮಣ್ಣ ಹಿಂದೆ ನಿಂತಿದ್ದರೂ ಅವರನ್ನು ಪ್ರೀತಿಯಿಂದ ಮುಂದೆ ಕರೆದ ಅವರು “ಕ್ರಾಂತಿ ಸಿನಿಮಾದಲ್ಲಿ ಧರ್ಮಣ್ಣ ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ನಾನು ಅವರ ಜೊತೆಗೆ ನಟಿಸಿದ್ದೇನೆ. ನನ್ನದು ಒಂದು ಪುಟ್ಟ ಪಾತ್ರ ಅವರ ಜೊತೆಗಿದೆ’ ಎಂದು ಸರಳತೆ ಮೆರೆದಿದ್ದಾರೆ. ಇನ್ನು ಸಚಿವ ಬಿ ಸಿ ಪಾಟೀಲ್ ರವರು ದರ್ಶನ್ ಅವರ ಬಗ್ಗೆ ಮಾತನಾಡುತ್ತಾ ದರ್ಶನ್ ಒಬ್ಬ ಅದ್ಭುತ ನಟ. ಅವರು ಚಲನಚಿತ್ರಕ್ಕೆ ಪ್ರವೇಶಿಸುವ ಹೊಸ ನಟ ನಟಿಯರಿಗೆ ಎಲ್ಲರಿಗಿಂತ ಹೆಚ್ಚಾಗಿ ಸಹಾಯ ಪ್ರೋತ್ಸಾಹ ನೀಡುತ್ತಾರೆ. ಹೊಸ ನಟರ ಸಿನಿಮಾ ಬಿಡುಗಡೆ, ರಿಲೀಸ್ ಎವೆಂಟ್, ಟ್ರೈಲರ್ ಲಾಂಚ್ ಇತ್ಯಾದಿ ಕಾರ್ಯಕ್ರಮಗಳಿಗೆ ಬಹಳ ಖುಷಿಯಿಂದ ಭಾಗವಹಿಸಿ ಸಿನಿಮಾ ಗೆಲ್ಲಲು ಜೊತೆ ನಿಲ್ಲುತ್ತಾರೆ ಎಂದು ಹೇಳಿದ್ದಾರೆ. ನಟ ದರ್ಶನ್ ಅವರ ಬಹನಿರೀಕ್ಷಿತ ಕ್ರಾಂತಿ ಸಿನಿಮಾ ಮುಂದಿನ ಜನವರಿ 26ರಂದು ಅದ್ದೂರಿಯಾಗಿ ತೆರೆ ಕಾಣಲಿದೆ. ಇದನ್ನು ಓದಿ.. Kannada News: ಎಲ್ಲರಿಗೂ ಓಪನ್ ಚಾಲೆಂಜ್: ಈ ಬಾಲ್ಯದ ಫೋಟೋ ಯಾರು ಎಂದು ಗುರುತಿಸಲು ಸಾಧ್ಯವೇ?? ಕನ್ನಡದ ಟಾಪ್ ನಟಿ ಯಾರು ಗೊತ್ತೇ??