Kannada News: ಬನಾರಸ್ ರೀತಿ ನಾಲ್ಕು ಸಿನಿಮಾಗಳು ಬಂದರೆ ದೇಶದಲ್ಲಿ ಹಿಂದೂ ಮುಸ್ಲಿಂ ಹೇಗಿರುತ್ತಾರಂತೆ ಗೊತ್ತೇ?? ನಿರ್ದೇಶಕ ಹೇಳಿದ್ದೇನು ಗೊತ್ತೇ??

14

Kannada News: ಕೆಲವು ದಿನಗಳ ಹಿಂದೆಯಷ್ಟೇ ತೆರೆಕಂಡಿರುವ ಬನಾರಸ್ (Banaras) ಚಿತ್ರವು ಒಳ್ಳೆಯ ಪ್ರಶಂಸೆ ಹಾಗೂ ಮೆಚ್ಚುಗೆಯನ್ನು ಪಡೆಯುತ್ತಿದೆ. ಚಿತ್ರವನ್ನು ವೀಕ್ಷಿಸಿದ ಎಲ್ಲರೂ ವಿಭಿನ್ನ ಚಿತ್ರಕಥೆ ಹೊಂದಿರುವ ಬನಾರಸ್ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಖಾನ್ (Zaid Khan) ಅವರ ಮೊದಲ ಚಿತ್ರ ಇದಾಗಿದೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಭಾಷೆಗಳಲ್ಲಿಯೂ ತೆರೆಕಂಡಿರುವ ಈ ಚಿತ್ರ ಒಳ್ಳೆಯ ಗಳಿಕೆ ಕಾಣುತ್ತಿದೆ. ಚಿತ್ರವು ಟೈಮ್ ಟ್ರಾವೆಲ್ ಕಥೆಯನ್ನು ಒಳಗೊಂಡಿದೆ. ಚಿತ್ರದ ಕಥೆ, ಸಂಭಾಷಣೆ, ವಿಶೇಷವಾಗಿ ಹಾಡುಗಳು ಯುವ ಮನಸ್ಸುಗಳನ್ನು ಕದಿಯುತ್ತಿವೆ. ಚಿತ್ರದ ಗೀತೆಗಳು ಚಿತ್ರ ಬಿಡುಗಡೆಗು ಮೊದಲು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿದ್ದವು.

ಬೆಲ್ ಬಾಟಮ್ (Bell Bottom) ಖ್ಯಾತಿಯ ಜಯತೀರ್ಥ (Jayateertha) ಅವರು ಈ ಚಿತ್ರದ ನಿರ್ದೇಶಕರು. ಇದೀಗ ಅವರು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಮಾತುಗಳನ್ನು ಹೇಳಿದ್ದಾರೆ. ಈ ಚಿತ್ರದ ಬಿಡುಗಡೆಗೂ ಮೊದಲು ಅದ್ದೂರಿಯಾಗಿ ಪ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಆಗಮಿಸಿ ಇನ್ನಷ್ಟು ಮೆರಗು ತಂದಿದ್ದರು. ನಂತರ ಚಿತ್ರ ಭರ್ಜರಿಯಾಗಿ ತೆರೆ ಕಂಡಿತು. ಒಳ್ಳೆಯ ಪ್ರಶಂಸೆ ಪಡೆಯುತ್ತಿರುವ ಈ ಚಿತ್ರ ದಿನದಿಂದ ದಿನಕ್ಕೆ ಉತ್ತಮ ಗಳಿಕೆಯನ್ನು ಕಾಣುತ್ತಿದೆ. ಮೊದಲ ಚಿತ್ರದಲ್ಲೇ ಜೈದ್ ಖಾನ್ ಚೆನ್ನಾಗಿ ಅಭಿನಯಿಸಿದ್ದಾರೆ. ಇದನ್ನು ಓದಿ.. Kannada News: ದರ್ಶನ್ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗುಡ್ ನ್ಯೂಸ್: ಕ್ರಾಂತಿ ಸಿನಿಮಾ ಬಗ್ಗೆ ಮೊದಲ ಬಾರಿಗೆ ದರ್ಶನ್ ಹೇಳಿದ್ದೇನು ಗೊತ್ತೇ??

ಇನ್ನು ಚಿತ್ರದ ನಿರ್ದೇಶಕ ಜಯತೀರ್ಥ ಅವರು ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆ ಮತ್ತು ಪ್ರತಿಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಸಂದರ್ಶಕರು ಈ ಚಿತ್ರಕ್ಕೆ ಬಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಎಂದರೆ ಯಾವುದು ಎಂದು ಕೇಳಿದ್ದಾರೆ. ಆಗ ಜಯತೀರ್ಥ ಅವರು ನಾವು ಅಭಿಮಾನಿಗಳ ಜೊತೆಗೆ ಚಿತ್ರ ವೀಕ್ಷಿಸಲು ಚಿತ್ರಮಂದಿರ ಒಂದಕ್ಕೆ ಹೋಗಿದ್ದೆವು. ಅಲ್ಲಿಗೆ ಸಾಕಷ್ಟು ಜನ ರೈತರು ಬಂದಿದ್ದರು. ಅವರು ನೀಡಿದ ಪ್ರತಿಕ್ರಿಯೆ ಮತ್ತು ತೋರಿಸಿದ ಪ್ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. “ಇದೇ ರೀತಿಯ ಕಥೆ ಹೊಂದಿರುವ ಚಿತ್ರಗಳು ಮುಂದೆಯೂ ಬಂದರೆ ಹಿಂದು ಮುಸ್ಲಿಂ ಎನ್ನುವ ಯಾವ ಭೇದಭಾವವು ಇರುವುದಿಲ್ಲ. ಎಲ್ಲರೂ ಖುಷಿಯಿಂದ ಒಟ್ಟಿಗೆ ಇರುತ್ತಾರೆ. ಈ ಚಿತ್ರವನ್ನು ಹಿಂದು ಮುಸ್ಲಿಂ ಎಂಬ ವ್ಯತ್ಯಾಸವಿಲ್ಲದೆ ಎಲ್ಲರೂ ನೋಡಿ ಇಷ್ಟಪಡುತ್ತಿದ್ದಾರೆ” ಎಂದು ಚಿತ್ರ ನೋಡಿದ ರೈತರು ಪ್ರೀತಿಯಿಂದ ಹೇಳಿದರು ಎಂದು ಜಯತೀರ್ಥ ಹೇಳಿದ್ದಾರೆ. ಈ ಘಟನೆಯನ್ನು ಅವರು ನೆನಪಿಸಿಕೊಂಡಿದ್ದಾರೆ. ಇದನ್ನು ಓದಿ.. Kannada News: ಮಾಲಾಶ್ರೀ ಮಗಳಿಗೆ ಮತ್ತೊಂದು ಸಿಹಿ ಸುದ್ದಿ: ದರ್ಶನ್ ಜೊತೆ ಸಿನೆಮಾ ಮಾಡುವಾಗ ಬಂತು ಮತ್ತೊಂದು ಆಫರ್. ಏನಾಗಿದೆ ಗೊತ್ತೇ??