Kannada News: ಎಲ್ಲಿ ನೋಡಿದರೂ ಮತ್ತೊಮ್ಮೆ ಮಿಂಚುತ್ತಿರುವ ರಿಷಬ್ ಹಾಗೂ ಸಪ್ತಮಿ: ಈ ಹೊಸ ಫೋಟೋಶೂಟ್ ಮಾಡಿಸಲು ಕಾರಣ ಏನು ಗೊತ್ತೇ??

30

Kannada News: ಕಳೆದ ಕೆಲ ದಿನಗಳಿಂದ ಎಲ್ಲಿ ನೋಡಿದರೂ ಕಾಂತಾರ (Kantara) ಚಿತ್ರದ್ದೇ ಮಾತು. ಕನ್ನಡ ನೆಲದ ಕಲೆಯನ್ನು ದೊಡ್ಡ ಪರದೆಯಲ್ಲಿ ಇಡೀ ಭಾರತವೇ ಮೆಚ್ಚಿಕೊಂಡಿದೆ. ಕನ್ನಡದಿಂದ ಶುರುವಾಗಿ ಇದೀಗ ಚಿತ್ರವು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ತೆರೆಕಂಡು ಲೂಟಿ ಮಾಡುತ್ತಿದೆ. ಬಹುಶಃ ಚಿತ್ರ ತಂಡಕ್ಕಾಗಲಿ, ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರಿಗಾಗಲಿ ಕಾಂತಾರ ಇಷ್ಟು ದೊಡ್ಡ ಮಟ್ಟದ ಜನಪ್ರಿಯತೆ, ಕಲೆಕ್ಷನ್ ತಂದುಕೊಡುತ್ತದೆ ಎಂಬ ಊಹೆಯೂ ಇರುವುದಿಲ್ಲ. ಅಷ್ಟರಮಟ್ಟಿಗೆ ಚಿತ್ರ ಬಾಕ್ಸಾಫೀಸ್ ಲೂಟಿ ಮಾಡುತ್ತಿದೆ.ದೊಡ್ಡ ದೊಡ್ಡ ಸ್ಟಾರ್ ನಟರು ನಿರ್ದೇಶಕರುಗಳು ಈ ಚಿತ್ರ ನೋಡಿ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಇದೀಗ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ (Saptami Gowda) ಅವರ ಕೆಲವು ಫೋಟೋಗಳು ವೈರಲ್ ಆಗುತ್ತಿದೆ. ಈ ಫೋಟೋಗಳು ಯಾವಾಗ ತೆಗೆಸಿದ್ದು, ಇದು ಇತ್ತೀಚಿನ ಫೋಟೋಶೂಟ ಅಥವಾ ಹೊಸತೊಂದು ಚಿತ್ರ ನಿರ್ಮಿಸುತ್ತಿದ್ದಾರ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.

ಕಾಂತಾರ ಚಿತ್ರದ ಶಿವ ಮತ್ತು ಲೀಲಾ ಎರಡು ಪಾತ್ರಗಳು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಅದರಲ್ಲೂ ಲೀಲಾ ಪಾತ್ರ ಎಲ್ಲರಿಗೂ ಇಷ್ಟವಾಗಿದೆ. ಚಿತ್ರದ ಲೀಲಾ ಪಾತ್ರಧಾರಿಯ ನಟನೆ, ಅವರ ಸೌಂದರ್ಯಕ್ಕೆ ಜನ ಮಾರುಹೋಗುತ್ತಿದ್ದಾರೆ. ಕಾಂತಾರ ಚಿತ್ರದ ಲೀಲ ಇದೀಗ ಅಭಿಮಾನಿಗಳ ಫೇವರೆಟ್ ಎನಿಸಿಕೊಂಡಿದ್ದಾರೆ. ಅವರ ಸಹಜ ಸೌಂದರ್ಯಕ್ಕೆ ಜನರು ಮಾರು ಹೋಗಿದ್ದಾರೆ. ಫಾರೆಸ್ಟ್ ಗಾರ್ಡಾಗಿ ನಟಿಸಿರುವ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದ ಹಾಗೆ ಇವರ ನಿಜವಾದ ಹೆಸರು ಸಪ್ತಮಿ ಗೌಡ. ತಂದೆ ಕರ್ನಾಟಕ ಕಂಡ ಜನಪ್ರಿಯ ದಕ್ಷ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ ಆಗಿದ್ದ ಎಸ್ ಕೆ ಉಮೇಶ್ (K Umesh). ಹೌದು, ದಕ್ಷ ಪೊಲೀಸ್ ಅಧಿಕಾರಿಯಾದ ಉಮೇಶ್ ಅವರ ಮಗಳು ಸಪ್ತಮಿ ಗೌಡ. ಇದನ್ನು ಓದಿ.. Cricket News: ಫೈನಲ್ ನಲ್ಲಿ ಮುಗ್ಗರಿಸಿದ ಪಾಕಿಸ್ತಾನ ಕುರಿತಂತೆ, ಶೋಯೆಬ್ ಅಕ್ತರ್ ಗೆ ಸರಿಯಾಗಿಯೇ ಉತ್ತರಿಸಿದ ಭಾರತೀಯ ಮೊಹಮ್ಮದ್ ಶಮಿ. ಹೇಳಿದ್ದೇನು ಗೊತ್ತೇ??

ಕಾಂತಾರ ಚಿತ್ರಕ್ಕೆ ನಾಯಕಿಯ ಪಾತ್ರಕ್ಕಾಗಿ ಆಡಿಶನ್ ನಡೆಸಲಾಗಿತ್ತು. ಅದರಲ್ಲಿ ಸಪ್ತಮಿಯವರು ಕೂಡ ಪಾಲ್ಗೊಂಡು ಆಯ್ಕೆಯಾಗಿದ್ದರು. ವಿದೇಶದಲ್ಲಿ ಎಂಎಸ್ ಮಾಡುವ ಕನಸು ಕಂಡ ಸಪ್ತಮಿ ಆಕಸ್ಮಿಕವಾಗಿ ನಟನೆಯ ಕಡೆಗೆ ವಾಲಿದರು. ಸಪ್ತಮಿ ಚಿತ್ರದಲ್ಲಿ ಡಾಲಿ ಧನಂಜಯ ಅವರ ಹೆಂಡತಿಯ ಪಾತ್ರದಲ್ಲಿ ನಟಿಸಿದರು. ಪುಟ್ಟ ಪಾತ್ರವಾದರು ತೆರೆ ಮೇಲೆ ಕಾಣಿಸಿಕೊಂಡ ಅಷ್ಟು ಸಮಯ ಅದ್ಭುತ ನಟನ್ರ ಮೂಲಕ ಜನರಿಗೆ ಇಷ್ಟವಾದರು. ಮುಂದೆ ಅವರಿಗೆ ಕಾಂತಾರ ಚಿತ್ರದಿಂದ ಅವಕಾಶ ಕೇಳಿ ಬಂತು. ಈ ಚಿತ್ರ ಅವರಿಗೆ ದೊಡ್ಡ ಮಟ್ಟದ ಹೆಸರು ನೀಡಿದೆ. ಫಾರೆಸ್ಟ್ ಗಾರ್ಡ್ ಪಾತ್ರದಲ್ಲಿ ಅವರದ್ದು ಸಹಜ ಅಭಿನಯ. ಅವರ ನಟನೆಗೆ ಮನಸೋಲದವರೆ ಇಲ್ಲ. ಇದೀಗ ವೈರಲ್ ಆಗುತ್ತಿರುವ ಫೋಟೋಗಳು ಆಡಿಶನ್ ನಂತರ ಲುಕ್ ಟೆಸ್ಟ್ ಆಗಿ ತೆಗೆಸಿದ ಫೋಟೋಗಳು ಎಂದು ತಿಳಿದುಬಂದಿದೆ. ಶಿವ ಮತ್ತು ಲೀಲಾ ಪಾತ್ರಕ್ಕೆ ರಿಷಭ ಮತ್ತು ಸಪ್ತಮಿ ಯವರು ಹೊಂದಿಕೆಯಾಗುತ್ತಾರ ಎಂದು ಲುಕ್ ಟೆಸ್ಟ್ ಮಾಡಲಾಗಿತ್ತು. ಇದೀಗ ಆ ಫೋಟೋಗಳು ವೈರಲ್ ಆಗಿವೆ. ಇದನ್ನು ಓದಿ.. Sudharani: ಕಿರುತೆರೆಗೆ ವಾಪಸ್ಸು ಆಗಿರುವ ಸುಧಾರಾಣಿ ರವರು, ಶ್ರೀರಸ್ತು ಶುಭಮಸ್ತು ನಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??