Kannada News: ಎಲ್ಲರಿಗೂ ಓಪನ್ ಚಾಲೆಂಜ್: ಈ ಬಾಲ್ಯದ ಫೋಟೋ ಯಾರು ಎಂದು ಗುರುತಿಸಲು ಸಾಧ್ಯವೇ?? ಕನ್ನಡದ ಟಾಪ್ ನಟಿ ಯಾರು ಗೊತ್ತೇ??
Kannada News: ನಿನ್ನೆ ನವೆಂಬರ್ 14 ಮಕ್ಕಳ ದಿನಚರಣೆ ಪ್ರಯುಕ್ತ ಸಾಕಷ್ಟು ಜನರು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು ಈ ವಿಶೇಷ ದಿನವನ್ನು ಸ್ಮರಿಸಿದ್ದಾರೆ. ಕೇವಲ ಸಾಮಾನ್ಯ ವ್ಯಕ್ತಿಗಳು ಮಾತ್ರವಲ್ಲದೇ ಸಿನಿಮಾ ತಾರೆಯರು ಕೂಡ ತಮ್ಮ ಬಾಲ್ಯದ ಚಿತ್ರಗಳನ್ನು ಹಂಚಿಕೊಂಡು, ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಸ್ಯಾಂಡಲ್ವುಡ್ ನ ಅನೇಕ ನಟ ನಟಿಯರು ತಮ್ಮ ಚೈಲ್ಡ್ ಹುಡ್ ಫೋಟೋಸ್ ಹಂಚಿಕೊಂದಿದ್ದಾರೆ. ಆ ಮೂಲಕ ಹಳೆಯ ಆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಇದೀಗ ಆ ಸಾಲಿಗೆ ಮತ್ತೊಬ್ಬ ಯುವ ನಟಿ ಸೇರಿದ್ದಾರೆ. ಅವರನ್ನು ಅವರು ಯಾರೆಂದು ನೀವು ತಿಳಿದರೆ ನಿಜಕ್ಕೂ ಆಶ್ಚರ್ಯ ವ್ಯಕ್ತಪಡಿಸುತ್ತೀರಿ.
ಮಕ್ಕಳ ದಿನಾಚರಣೆ ಎಂದು ಸಾಕಷ್ಟು ಜನರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ತಮ್ಮ ಚೈಲ್ಡ್ ಹುಡ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದೀಗ ತಮ್ಮ instagram ಖಾತೆಯಲ್ಲಿ ರಾಬರ್ಟ್ ಚಿತ್ರದ ನಟಿ ಆಶಾ ಭಟ್ (Asha Bhat) ತಮ್ಮ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ. ದರ್ಶನ್ ಅವರ ಜೊತೆಗೆ ರಾಬರ್ಟ್ ಚಿತ್ರದಲ್ಲಿ ಮಿಂಚಿದ್ದ ಈ ನಟಿ ಆನಂತರ ಕನ್ನಡದ ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಇವರು ತೆಲುಗಿನಲ್ಲಿ ಬಿಜಿಯಾಗಿದ್ದು, ಈಗಾಗಲೇ ಅವರ ಎರಡು ಚಿತ್ರಗಳು ತೆಲುಗಿನಲ್ಲಿ ತೆರೆಕಂಡಿವೆ. ಇದನ್ನು ಓದಿ.. Kannada News: ಎಲ್ಲಿ ನೋಡಿದರೂ ಮತ್ತೊಮ್ಮೆ ಮಿಂಚುತ್ತಿರುವ ರಿಷಬ್ ಹಾಗೂ ಸಪ್ತಮಿ: ಈ ಹೊಸ ಫೋಟೋಶೂಟ್ ಮಾಡಿಸಲು ಕಾರಣ ಏನು ಗೊತ್ತೇ??

ಇದೀಗ ಅವರು ತಮ್ಮ ಬಾಲ್ಯದ ಚಿತ್ರವನ್ನು ಹಂಚಿಕೊಂಡು, ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಭರತನಾಟ್ಯದ ಉಡುಪನ್ನು ಧರಿಸಿರುವ ಅವರು ನೃತ್ಯದ ಭಂಗಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಅವರು ಬಹಳ ಸುಂದರವಾಗಿ ಹಾಗೂ ಮುಗ್ದವಾಗಿ ಕಾಣುತ್ತಿದ್ದಾರೆ. ಈ ಚಿತ್ರವು ಸಾಕಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಚಿತ್ರ ಸಾಕಷ್ಟು ಲೈಕ್ಸ್ ಪಡೆದಿದ್ದು, ಸಾವಿರಾರು ಜನರು ಚಿತ್ರವನ್ನು ಇಷ್ಟಪಟ್ಟು ಪ್ರಶಂಸಿಸಿ ಕಮೆಂಟ್ ಹಾಕಿದ್ದಾರೆ. ಭರತನಾಟ್ಯದ ಉಡುಪಿನಲ್ಲಿ ಆಶಾ ಭಟ್ ಚಿತ್ರದಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಇದನ್ನು ಓದಿ.. Sudharani: ಕಿರುತೆರೆಗೆ ವಾಪಸ್ಸು ಆಗಿರುವ ಸುಧಾರಾಣಿ ರವರು, ಶ್ರೀರಸ್ತು ಶುಭಮಸ್ತು ನಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??