Sudharani: ಕಿರುತೆರೆಗೆ ವಾಪಸ್ಸು ಆಗಿರುವ ಸುಧಾರಾಣಿ ರವರು, ಶ್ರೀರಸ್ತು ಶುಭಮಸ್ತು ನಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

40

Sudharani: ನಟಿ ಸುಧಾರಾಣಿಯವರು ಒಂದು ಕಾಲದ ಜನಪ್ರಿಯ ಟಾಪ್ ನಟಿಯಾಗಿದ್ದವರು. ಈಗಲೂ ಕೂಡ ಅವರ ಪ್ರಸಿದ್ಧಿ ಕಡಿಮೆಯಾಗಿಲ್ಲ. ಇಂದಿಗೂ ಪೋಷಕ ಪಾತ್ರಗಳಲ್ಲಿ ಅತ್ಯಂತ ಪ್ರಮುಖ ಮಹತ್ವದ ಪಾತ್ರಗಳಲ್ಲಿ ಮಾಡುತ್ತಿರುವವರು. ಕನ್ನಡಕ್ಕೆ ಅತ್ಯಂತ ಜನಪ್ರಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 13ನೇ ವಯಸ್ಸಿನಲ್ಲಿಯೇ ಅವರು ಚಿತ್ರರಂಗ ಬಂದರು. ಪಾರ್ವತಮ್ಮ ರಾಜಕುಮಾರ್ ಅವರು ಇವರನ್ನು ಪರಿಚಯಿಸಿದರು. ಶಿವರಾಜ್ ಕುಮಾರ್ ಜೊತೆಗೆ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆನಂದ್ ಚಿತ್ರದಲ್ಲಿ ನಟಿಸಿ ಅವರು ಸೈ ಅನಿಸಿಕೊಂಡಿದ್ದರು. ಇದೀಗ ಅವರು ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಅವರು ನಟಿಸುತ್ತಿದ್ದು ಈ ಧಾರಾವಾಹಿಗೆ ಅವರು ಸಾಕಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.

ಸುಧಾರಾಣಿಯವರು ಇಂದಿಗೂ ಕೂಡ ಬಹು ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾರೆ. ಅಷ್ಟೇ ಜನಪ್ರಿಯತೆ ಮತ್ತು ಸೌಂದರ್ಯ ಅವರಲ್ಲಿ ಇಂದಿಗೂ ಇದೆ ಎಂದು ಹೇಳಬಹುದು. ಅತ್ಯಂತ ಸೂಪರ್ ಚಿತ್ರಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಅಲ್ಲದೆ ಬಹುಭಾಷಾ ನಟಿಯಾಗಿರುವ ಅವರು ತಮಿಳು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇದೀಗ ಅವರು ಕಿರುತೆರೆಗೆ ಮತ್ತೆ ಮರಳಿದ್ದಾರೆ. ರಥಸಪ್ತಮಿ, ಜೊತೆ ಜೊತೆಯಲಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಅವರು ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಅತಿಥಿ ಪಾತ್ರಧಾರಿ ಆಗಿಯೂ ಕಾಣಿಸಿಕೊಂಡಿದ್ದಾರೆ. ಈಗ ಅವರು ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ.

ಅವರು ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಜೀ ಕನ್ನಡದಲ್ಲಿ ಉಮಾಶ್ರೀ, ವಿನಯ ಪ್ರಸಾದ್, ಗಿರಿಜಾ ಲೋಕೇಶ್, ಶ್ರೀನಿವಾಸಮೂರ್ತಿ, ಅನಿರುದ್, ಅಭಿಜಿತ್ ಸೇರಿದಂತೆ ದೊಡ್ಡ ದೊಡ್ಡ ಘಟಾನುಘಟಿ ಚಿತ್ರರಂಗದ ಗಣ್ಯ ನಟರು ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆ ಸಾಲಿನಲ್ಲಿ ಸುಧಾರಾಣಿಯವರು ಸೇರಿಕೊಂಡಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅವರು ಇಡೀ ಮನೆಯ ಜವಾಬ್ದಾರಿಯನ್ನು ಒತ್ತ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸಂಭಾವನೆಯ ಬಗ್ಗೆ ಚರ್ಚೆಯಾಗುತ್ತಿದೆ. ಅವರು ಒಂದು ಸಂಚಿಕೆಗೆ ಬರೋಬ್ಬರಿ 40,000ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಒಂದು ಕಂತು ಅಥವಾ ಎಪಿಸೋಡ್ ಗೆ ಅವರು 40,000 ಸಂಭಾವನೆಯನ್ನು ಪಡೆಯುತ್ತಿದ್ದಾರೆ.