IPL 2023: ಹರಾಜಿಗೂ ಮುನ್ನ ಸೂರ್ಯ ಕುಮಾರ್ ಯಾದವ್ ಬಗ್ಗೆ ಮಾತನಾಡಿದ ಆರ್ಸಿಬಿ ಕೋಚ್ ಹೇಳಿದ್ದೇನು ಗೊತ್ತೇ??

24

IPL 2023: ಟಿ ಟ್ವೆಂಟಿ ವಿಶ್ವಕಪ್ (T20 World Cup) 2022ರ ಟ್ರೋಫಿಯನ್ನು ಟೀಮ್ ಇಂಡಿಯಾ ತನ್ನ ಮುಡುಗೇರಿಸಿಕೊಳ್ಳುತ್ತದೆ ಎಂದು ಭಾರತೀಯ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಟೀಂ ಇಂಡಿಯಾ ಸೆಮಿ ಫೈನಲ್ ನಲ್ಲಿ ಮುಗ್ಗರಿಸಿತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಭಾರತ ತಂಡವು (Team India) ಸೋಲನ್ನು ಕಾಣಬೇಕಾಯಿತು. ಈ ಮೂಲಕ ಭಾರತದ ಟ್ರೋಫಿ ಕನಸು ಭಗ್ನವಾಯಿತು. ಭಾರತ ತಂಡ ಈ ಬಾರಿ ಸೋಲನ್ನ ಕಂಡರು ಕೂಡ ಕೆಲವು ಆಟಗಾರರು ಭರ್ಜರಿ ಪ್ರದರ್ಶನ ತೋರಿಸಿದ್ದಾರೆ. ಇದೀಗ ಟೀಮ್ ಇಂಡಿಯಾದ ಮಾಜಿ ಆಲ್-ರೌಂಡರ್ ಒಬ್ಬರು ಸೂರ್ಯಕುಮಾರ್ ಯಾದವ್ ಕುರಿತಾಗಿ ಆಶ್ಚರ್ಯ ಮಾತುಗಳನ್ನು ಹೇಳಿದ್ದಾರೆ.

ಟೀಮ್ ಇಂಡಿಯಾ ಸೆಮಿ ಫೈನಲ್ ನಲ್ಲಿ ಸೋತರು ಸಹ ಕೆಲವು ಆಟಗಾರರು ಭರ್ಜರಿ ಪ್ರದರ್ಶನ ತೋರಿಸಿದ್ದಾರೆ. ಅದರಲ್ಲೂ ಸೂರ್ಯ ಕುಮಾರ್ ಯಾದವ್ ರನ್ ಮಳೆ ಸುರಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಸ್ಥಾನ ಪಡೆದಿದ್ದು ಅವರು ಫಾರ್ಮ್ ನಲ್ಲಿ ಇರುವುದು ಅತ್ಯಂತ ಸಂತಸದ ವಿಷಯ. ಆರು ಪಂದ್ಯಗಳನ್ನು ಆಡಿದವರು 239 ರನ್ಗಳನ್ನು ಕಲೆ ಹಾಕಿದ್ದರೂ. ಮೂರು ಅರ್ಥ ಶಕಗಳು ಸೇರಿದ್ದು ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಇವರು ಒಬ್ಬರಾಗಿದ್ದಾರೆ. ತಮ್ಮ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸೂರ್ಯಕುಮಾರ್ ಯಾದವ್ ಈಗ ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ (Sanjay Bangar) ಅವರು ಸೂರ್ಯಕುಮಾರ್ ಯಾದವ್ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದನ್ನು ಓದಿ.. Cricket News: ಇಂಗ್ಲೆಂಡ್ ಫೈನಲ್ ನಲ್ಲಿ ಗೆದ್ದಮೇಲೆ ಹೇಗಿದೆ ಗೊತ್ತೇ ಅತಿ ಹೆಚ್ಚು ರನ್ ಗಳಿಸಿದವರ ಲೆಕ್ಕಾಚಾರ. ಯಾರು ಎಷ್ಟನೇ ಸ್ಥಾನ ಪಡೆದಿದ್ದಾರೆ ಗೊತ್ತೇ??

ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ ಅವರು “ಎಂತಹ ಪರಿಸ್ಥಿತಿಯಲ್ಲಿಯೂ ಕೂಡ ಉತ್ತಮವಾಗಿ ಆಡಬಲ್ಲ ಆಟಗಾರ ಎಂದರೆ ಅದು ಸೂರ್ಯಕುಮಾರ್ ಯಾದವ್. ಇಂಗ್ಲೆಂಡ್ ಆಸ್ಟ್ರೇಲಿಯಾದಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೂಡ ಸೂರ್ಯ ಕುಮಾರ್ ಎಂದಿಗೂ ತಮ್ಮ ಸಾಮರ್ಥ್ಯ ಕಳೆದುಕೊಳ್ಳುವುದಿಲ್ಲ. ಫಾರ್ಮಲ್ಲಿಯೇ ಉಳಿದು ತಂಡದ ಗೆಲುವಿನ ರೂವಾರಿ ಯಾಗುತ್ತಾರೆ. ಅವರು ಆಲ್ರೌಂಡ್ ಬ್ಯಾಟಿಂಗ್ ಆಡಬಲ್ಲವರಾಗಿದ್ದು ಟೀಮ್ ಇಂಡಿಯಾದ ಕ್ರಿಕೆಟ್ ನಲ್ಲಿ ಅವರು ದಾಖಲೆ ನಿರ್ಮಿಸಬಲ್ಲರು. ಅವರು ಕ್ರಿಕೆಟ್ ನಲ್ಲಿ ಹೊಸ ಕ್ರಾಂತಿಯನ್ನೇ ಮಾಡಬಲ್ಲರು. ಅವರಂಥ ಆಟಗಾರರು ಇರುವವರೆಗೂ ನಮ್ಮ ತಂಡಕ್ಕೆ ಯಾವ ಭಯವೂ ಇಲ್ಲ” ಎಂದು ಅವರು ಹೇಳಿದ್ದಾರೆ. ಈ ಮೂಲಕ ಸೂರ್ಯಕುಮಾರ ಅದ್ಭುತ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದಾರೆ. ಇದನ್ನು ಓದಿ.. Kannada News: ಧರೆಗಿಳಿದ ದೇವಲೋಕ ಅಪ್ಸರೆಯಂತೆ ಸಿಂಗಾರ ಸಿರಿಯೆ ಹಾಡಿಗೆ ಡಾನ್ಸ್ ಮಾಡಿದ ರಾಗಿಣಿ: ನೋಡಲು ಎರಡು ಕಣ್ಣು ಸಾಲದು. ಹೇಗಿದೆ ಗೊತ್ತೇ ವಿಡಿಯೋ?