Cricket News: ಫೈನಲ್ ನಲ್ಲಿ ಮುಗ್ಗರಿಸಿದ ಪಾಕಿಸ್ತಾನ ಕುರಿತಂತೆ, ಶೋಯೆಬ್ ಅಕ್ತರ್ ಗೆ ಸರಿಯಾಗಿಯೇ ಉತ್ತರಿಸಿದ ಭಾರತೀಯ ಮೊಹಮ್ಮದ್ ಶಮಿ. ಹೇಳಿದ್ದೇನು ಗೊತ್ತೇ??
Cricket News: ಐಸಿಸಿ (ICC) ಟಿ20 ವಿಶ್ವಕಪ್ (T20 World Cup) 2022ರ ಫಿನಾಲೆಯವರೆಗೂ ಲಗ್ಗೆ ಇಟ್ಟಿದ್ದ ಪಾಕಿಸ್ತಾನ ತಂಡವು ಕೊನೆಯ ಹಂತದಲ್ಲಿ ಮಣ್ಣು ಮುಕ್ಕಿದೆ. ಗೆದ್ದು ಬೀಗುವ ಹಾಗೆ ಕಂಡಿದ್ದ ಪಾಕಿಸ್ತಾನ ಇದೀಗ ಇಂಗ್ಲೆಂಡ್ ವಿರುದ್ಧ ಐದು ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಪಂದ್ಯ ಮುಗಿದ ನಂತರ ಫಿನಾಲೆ ಪಂದ್ಯದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಅತ್ತ ಪಾಕಿಸ್ತಾನ ಇತ್ತ ಭಾರತ ಸೇರಿದಾಗ ಸಾಕಷ್ಟು ನೆಟ್ಟಿಗರು ಈ ಪಂದ್ಯದ ಬಗ್ಗೆ ಪರ ವಿರೋಧದ ಮಾತುಗಳನ್ನು ಆಡುತ್ತಿದ್ದಾರೆ. ಇದೇ ವೇಳೆ ಶೋಯೆಬ್ ಅಖ್ತರ್ (Shoaib Akhtar) ಅವರ ಟ್ವೀಟ್ ಒಂದಕ್ಕೆ ಕರ್ಮ ಹೀಗೆಯೇ ಅದು ಮರಳಿ ಕಳಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನ ಕಂಡ ಸರ್ವಶ್ರೇಷ್ಠ ವೇಗಿಗಳಲ್ಲಿ ಒಬ್ಬರಾದ ಶೋಯೆಬ್ ಅಖ್ತರ್ ಹೃದಯ ಒಡೆದಿರುವ ಇಮೋಜಿ ಬಳಸಿ ಟ್ವೀಟ್ ಮಾಡಿದ್ದಾರೆ. ಈ ಪಂದ್ಯದಿಂದ ಸೋತದ್ದು ಹೃದಯ ಒಡೆದಂತಾಗಿದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದ ಭರವಸೆ ಹುಟ್ಟು ಹಾಕಿದ್ದ ಪಂದ್ಯದಲ್ಲಿ ಸೋತಿದ್ದು ಅವರಿಗೆ ಸಾಕಷ್ಟು ನೋವು ಉಂಟಾಗಿದೆ. ಹೀಗಾಗಿ ಅವರು ಹಾರ್ಟ್ ಬ್ರೇಕ್ ಇಮೋಜಿ ಬಳಸಿ ಟ್ವೀಟ್ ಮಾಡಿದ್ದಾರೆ. ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸಿ ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರ ಟ್ವೀಟ್ ಪರವಾಗಿ ಮಾತನಾಡಿದರೆ ಕೆಲವರು ಅವರನ್ನು ಟೀಕೆ ಮಾಡಿರುವುದು ಕಂಡು ಬಂದಿದೆ. ಇದನ್ನು ಓದಿ.. Sudharani: ಕಿರುತೆರೆಗೆ ವಾಪಸ್ಸು ಆಗಿರುವ ಸುಧಾರಾಣಿ ರವರು, ಶ್ರೀರಸ್ತು ಶುಭಮಸ್ತು ನಲ್ಲಿ ನಟಿಸಲು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammad Shami) ಶೋಯೆಬ್ ಅಖ್ತರ್ ಅವರ ಹೃದಯ ಒಡೆದಿರುವ ಇಮೋಜಿ ಗೆ ಪ್ರತಿಕ್ರಿಯಿಸಿದ್ದು ಕ್ಷಮಿಸಿ ಸಹೋದರ ಇದಕ್ಕೆ ಇದಕ್ಕೆ ಕರ್ಮಾ ಎನ್ನುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಅವರನ್ನು ಅಣಕಿಸಿದ್ದು ಅವರ ಹಳೆಯ ಪಂದ್ಯಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ. ಶಮಿಯವರ ಪ್ರತಿಕ್ರಿಯೆಗೆ ಸಾಕಷ್ಟು ಪರ ವಿರೋಧಗಳು ಕೇಳಿಬಂದಿದೆ. ಕೆಲವರು ನೀವು ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸಿದ್ದೀರಿ ಕರ್ಮ ಯಾರನ್ನು ಬಿಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ನೀವು ಭಾರತೀಯರು ಸದಾ ಮುಸ್ಲಿಂ ಜನರನ್ನು ದ್ವೇಷಿಸುತ್ತಲೇ ಬಂದಿದ್ದೀರಿ. ನೀವು ಭಾರತೀಯ ಮುಸ್ಲಿಂ ಜನರಿಗೆ ಮೋಸ ಅನ್ಯಾಯ ಬಿಟ್ಟು ಇನ್ನೇನು ಕೊಟ್ಟಿದ್ದೀರಿ ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಶಮಿ ಕರ್ಮ ಯಾರನ್ನು ಬಿಡುವುದಿಲ್ಲ ಎಂಬರ್ಥದ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಓದಿ.. IPL 2023: ಹರಾಜಿಗೂ ಮುನ್ನ ಸೂರ್ಯ ಕುಮಾರ್ ಯಾದವ್ ಬಗ್ಗೆ ಮಾತನಾಡಿದ ಆರ್ಸಿಬಿ ಕೋಚ್ ಹೇಳಿದ್ದೇನು ಗೊತ್ತೇ??
Sorry brother
It’s call karma 💔💔💔 https://t.co/DpaIliRYkd
— Mohammad Shami (@MdShami11) November 13, 2022