Cricket News: ಇಂಗ್ಲೆಂಡ್ ಫೈನಲ್ ನಲ್ಲಿ ಗೆದ್ದಮೇಲೆ ಹೇಗಿದೆ ಗೊತ್ತೇ ಅತಿ ಹೆಚ್ಚು ರನ್ ಗಳಿಸಿದವರ ಲೆಕ್ಕಾಚಾರ. ಯಾರು ಎಷ್ಟನೇ ಸ್ಥಾನ ಪಡೆದಿದ್ದಾರೆ ಗೊತ್ತೇ??

57

Cricket News: ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ (T20 World Cup) ಪಂದ್ಯ ತೆರೆ ಬಿದ್ದಿದೆ. ಇಂಗ್ಲೆಂಡ್ ಈ ಸೀಸನ್ ನ ಟ್ರೋಫಿಯನ್ನು ಮೂಡಿಗೇರಿಸಿಕೊಂಡು ಚಾಂಪಿಯನ್ ಪಟ್ಟಕ್ಕೆ ಏರಿದೆ. ವಿಶ್ವಕಪ್ ಸಾಕಷ್ಟು ಕಾರಣಗಳಿಗೆ ಕುತೂಹಲ ಮೂಡಿಸಿತ್ತು ಹಿಂದಿನ ಪಂದ್ಯಗಳಿಗಿಂತಲೂ ಈ ಬಾರಿ ಸಾಕಷ್ಟು ಕುತೂಹಲಕಾರಿ ರೋಮಾಂಚನಕಾರಿ ಕ್ಷಣಗಳಿಗೆ ಈ ಸೀಸನ್ ಸಾಕ್ಷಿ ಆಯಿತು. ಘಟಾನುಘಟಿ ಆಟಗಾರರು ರನ್ಗಳ ಮಳೆ ಸುರಿಸಿದರು. ಈ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರರ ಪಟ್ಟಿ ಇಲ್ಲಿದೆ. ಈ ಆಟಗಾರರು ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅತಿ ಹೆಚ್ಚು ರನ್ ಸಿಡಿಸುವ ಮೂಲಕ ಟಾಪ್ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಅತಿ ಹೆಚ್ಚು ರನ್ ಸಿಡಿಸುವ ಮೂಲಕ ಈ ಸೀಸನ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ವಿರಾಟ್ ಕೊಹ್ಲಿ (Virat Kohli) ಹೊರಹೊಮ್ಮಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿ 98.66 ಸರಾಸರಿಯಲ್ಲಿ 296 ರನ್ ಗಳಿಸಿದ್ದ ಕೊಹ್ಲಿ ಖಾತೆಯಲ್ಲಿ ನಾಲ್ಕು ಅರ್ಧಶತಕಗಳು ಸೇರಿವೆ. ಔಟಾಗದೆ 82 ರನ್ ಗಳಿಸಿದ್ದು ಕೊಹ್ಲಿ ಅವರ ಗರಿಷ್ಠ ಸ್ಕೋರ್. ನೆದರ್ಲೆಂಡ್ಸ್‌ನ ಮ್ಯಾಕ್ಸ್ ಒ’ಡೌಡ್ ವಿರಾಟ್ ಕೊಹ್ಲಿಯ ನಂತರ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರರಾಗಿದ್ದಾರೆ. ಎಂಟು ಇನ್ನಿಂಗ್ಸ್‌ಗಳಲ್ಲಿ 34.57 ಸರಾಸರಿಯಲ್ಲಿ 242 ರನ್ ಗಳಿಸಿದ ದಾಖಲೆ ಅವರದ್ದಾಗಿದೆ. ಈ ಟೂರ್ನಿಯಲ್ಲಿ ಅವರು ಎರಡು ಅರ್ಧ ಶತಕಗಳನ್ನು ಬಾರಿಸಿದ್ದು ಅವರ ಗರಿಷ್ಠ ದಾಖಲೆ ಔಟ್ ಆಗದೆ ಎಪ್ಪತ್ತೊಂದು ರನ್ ಆಗಿದೆ. ಇದನ್ನು ಓದಿ.. Kannada News: ಧರೆಗಿಳಿದ ದೇವಲೋಕ ಅಪ್ಸರೆಯಂತೆ ಸಿಂಗಾರ ಸಿರಿಯೆ ಹಾಡಿಗೆ ಡಾನ್ಸ್ ಮಾಡಿದ ರಾಗಿಣಿ: ನೋಡಲು ಎರಡು ಕಣ್ಣು ಸಾಲದು. ಹೇಗಿದೆ ಗೊತ್ತೇ ವಿಡಿಯೋ?

ಇಂಡಿಯಾದ ಅದ್ಭುತ ಆಟಗಾರ ಸೂರ್ಯ ಕುಮಾರ್ ಯಾದವ್ (Suryakumar Yadav) ನಂತರದ ಸ್ಥಾನದಲ್ಲಿದ್ದಾರೆ. ಆರು ಇನ್ನಿಂಗ್ಸ್ ಹಾಡಿರುವ ಅವರು ಅದರಲ್ಲಿ 59.75 ಸರಾಸರಿಯಲ್ಲಿ 239 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿರುವ ಅವರು ಔಟ್ ಆಗದೆ 68 ರನ್ ಗಳಿಸಿರುವುದು ಅವರ ಗರಿಷ್ಠ ದಾಖಲೆಯಾಗಿದೆ. ಸೂರ್ಯ ಕುಮಾರ್ ಯಾದವ್ ನಂತರ ಕುಸಾಲ್ ಮೆಂಡಿಸ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 8 ಪಂದ್ಯಗಳಲ್ಲಿ ಆಡಿರುವ ಅವರು 223 ರನ್ಗಳನ್ನು ಹೊಂದಿದ್ದಾರೆ. ಜೊತೆಗೆ ಈ ಬಾರಿ ಅವರು ಎರಡು ಅರ್ಥಶತಕಗಳನ್ನು ಸೀಡಿಸಿದ್ದಾರೆ. ಜಿಂಬಾಬ್ವೆಯ ಸಿಕಂದರ್ ರಜಾ (Sikander Raja) ಅವರು 5ನೇ ಸ್ಥಾನ ಹೊಂದಿದ್ದಾರೆ. ಪಂದ್ಯಗಳನ್ನು ಆಡಿರುವ ಅವರು ಒಟ್ಟು 219 ರನ್ಗಳನ್ನು ಕಲೆ ಹಾಕಿದ್ದರು. ಈ ಐವರು ಆಟಗಾರರು ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದನ್ನು ಓದಿ.. Cricket News: ಐಪಿಎಲ್ ಹರಾಜಿಗೂ ಮುನ್ನವೇ ವಿದೇಶಿ ಆಟಗಾರನನ್ನು ಹೊರಹಾಗಿದ ಆರ್ಸಿಬಿ: ಆತ ಹೋದದ್ದು ಎಲ್ಲಿಗೆ ಗೊತ್ತೇ?? ಯಾವ ತಂಡ ಸೇರಿಕೊಂಡ ಗೊತ್ತೇ??