Cricket News: ಐಪಿಎಲ್ ಹರಾಜಿಗೂ ಮುನ್ನವೇ ವಿದೇಶಿ ಆಟಗಾರನನ್ನು ಹೊರಹಾಗಿದ ಆರ್ಸಿಬಿ: ಆತ ಹೋದದ್ದು ಎಲ್ಲಿಗೆ ಗೊತ್ತೇ?? ಯಾವ ತಂಡ ಸೇರಿಕೊಂಡ ಗೊತ್ತೇ??
Cricket News: ಮುಂದಿನ ಸೀಸನ್ನ ಐಪಿಎಲ್ (IPL) ಟೂರ್ನಿಗೆ ತಂಡದ ಆಟಗಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ. ಇನ್ನೇನು ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ಅದಕ್ಕಾಗಿ ತಮ್ಮ ಆಟಗಾರರನ್ನು ಉಳಿಸಿಕೊಳ್ಳುವುದು ಅಥವಾ ತಂಡದಿಂದ ಅವರನ್ನು ಹೊರಗೆ ಹಾಕುವ ಪ್ರಕ್ರಿಯೆಯು ಬರದಿಂದ ಸಾಗಿದೆ. ಈ ವೇಳೆ ಆರ್ಸಿಬಿ (RCB) ತಂಡದಿಂದ ಒಬ್ಬ ಆಟಗಾರನನ್ನು ತಂಡದಿಂದ ಹೊರಗೆ ಹಾಕಲಾಗಿತ್ತು, ಒಬ್ಬ ವಿದೇಶಿ ಆಟಗಾರನಿಗೆ ಗೇಟ್ ಪಾಸ್ ನೀಡಲಾಗಿದೆ. ಆ ಮೂಲಕ ಕಳೆದ ಸೀಸನ್ ನಲ್ಲಿ ಆರ್‌ಸಿಬಿ ತಂಡದ ಭಾಗವಾಗಿದ್ದ ಈ ವಿದೇಶಿ ಆಟಗಾರ ಇದೀಗ ತಂಡದಿಂದ ಔಟ್ ಆಗಿದ್ದಾರೆ.
ಮುಂದಿನ ಸೀಜನ್ ಗಾಗಿ ನಡೆಸಲಾಗುವ ಹರಾಜು ಪ್ರಕ್ರಿಯೆಗೂ ಮೊದಲೇ ಎಲ್ಲ ತಂಡದವರು ಕೂಡ ತಮ್ಮ ತಂಡದ ಆಟಗಾರರಲ್ಲಿ ಯಾರನ್ನು ಉಳಿಸಿಕೊಂಡಿದ್ದೇವೆ ಮತ್ತು ಯಾರನ್ನು ತಂಡದಿಂದ ಹೊರಗೆ ರಿಲೀಸ್ ಮಾಡಿದ್ದೇವೆ ಎನ್ನುವುದನ್ನು ನವೆಂಬರ್ 15ರ ಒಳಗೆ ತಿಳಿಸಬೇಕು. ಹೀಗಾಗಿ ಆರ್‌ಸಿಬಿ ತಂಡವು ಒಬ್ಬ ವಿದೇಶಿ ಆಟಗಾರನನ್ನು ತಂಡದಿಂದ ರಿಲೀಸ್ ಮಾಡಿದ್ದು ಇದೀಗ ಅವರು ಮತ್ತೊಂದು ತಂಡಕ್ಕೆ ಸೇರಿಕೊಂಡಿದ್ದಾರೆ. ಜೇಸನ್ ಬೆಹ್ರೆಂಡೋರ್ಫ್‌ರನ್ನ (Jason Behrendorff) 2022 ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 75 ಲಕ್ಷ ಮೂಲ ಬೆಲೆಗೆ ಆರ್‌ಸಿಬಿ ತಂಡ ಕೊಂಡುಕೊಂಡಿತ್ತು. ಇದಕ್ಕೂ ಮೊದಲು 2021ರ ಸರಣಿಯಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ಪರವಾಗಿ ಆಡಿದರು. ಇದನ್ನು ಓದಿ.. Cricket News: ವಿಶ್ವಕಪ್ ಸೋಲಿಗೆ ನೇರ ಕಾರಣವಾದ ದ್ರಾವಿಡ್ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ: ತೆಗೆದುಕೊಂಡ ಗಟ್ಟಿ ನಿರ್ಧಾರವೇನು ಗೊತ್ತೆ??

ಆಸ್ಟ್ರೇಲಿಯಾ ಮೂಲದವರಾದ ಇವರು ಎಡಗೈ ವೇಗಿ ಆಗಿದ್ದು ಇದುವರೆಗೆ 9 ಅಂತರಾಷ್ಟ್ರೀಯ t20 ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದು 7 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈಗ ಆರ್‌ಸಿಬಿ ಮತ್ತು ಮುಂಬೈ (MI)ನಡುವೆ ನಡೆದ ವ್ಯಾಪಾರದಲ್ಲಿ ಈ ಆಟಗಾರನನ್ನು ಮುಂಬೈ ಇಂಡಿಯನ್ಸ್ ತಂಡವು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಮೊದಲು 2018ರಲ್ಲಿ ಅವರು ಮುಂಬೈ ಇಂಡಿಯನ್ಸ್ ಪರವಾಗಿಯೇ 5 ಪಂದ್ಯಗಳನ್ನು ಆಡಿದರು. ಇದೀಗ ಮತ್ತೆ ಅದೇ ತಂಡಕ್ಕೆ ಅವರು ಸೇರಿಕೊಂಡಿದ್ದಾರೆ. ಐಪಿಎಲ್ 2023ರ ಸೀಸನ್ ನಲ್ಲಿ ಅವರು ಬ್ಲೂ ಜೆರ್ಸಿ ತೊಡಲಿದ್ದಾರೆ. ಇದನ್ನು ಓದಿ.. Cricket News: ಕೊಹ್ಲಿ ತೆಗೆದುಹಾಕಿ, ರೋಹಿತ್ ಅನ್ನು ಅಟ್ಟಕ್ಕೆ ಏರಿಸಿ, ಏಷ್ಯಾ ಕಪ್ ವಿಶ್ವಕಪ್ ಸೋತ ದ್ರಾವಿಡ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??