ಶುರುವಾಯಿತು ಮಾರ್ಗಶಿರ ಮಾಸ: ಈ ಸಮಯದಲ್ಲಿ ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ್ಮಿ ದೇವಿ ಮನೆ ಹುಡುಕಿಕೊಂಡು ಬಂದು ಹಣ ನೀಡುವರು. ಏನು ಮಾಡಬೇಕು ಗೊತ್ತೇ??

17

ಧಾರ್ಮಿಕ ನಂಬಿಕೆಗಳ ಪ್ರಕಾರ ಪ್ರತಿ ತಿಂಗಳಿಗೂ ಅದರದ್ದೇ ಆದ ಮಹತ್ವವಿದೆ. ಒಂದೊಂದು ತಿಂಗಳಲ್ಲಿ ಒಂದೊಂದು ದೇವರನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಇದೀಗ ನವೆಂಬರ್ ತಿಂಗಳು ಬಂದಿದ್ದು ಈ ತಿಂಗಳಿನಲ್ಲಿ ವಿಶೇಷವಾಗಿ ಶ್ರೀ ಕೃಷ್ಣನನ್ನು (Lord Krishna) ಪೂಜಿಸಲಾಗುತ್ತದೆ. ನವೆಂಬರ್ ನಲ್ಲಿ ಶ್ರೀ ಕೃಷ್ಣನ ಆರಾಧನೆ ಮಾಡುವುದರಿಂದ ಎಷ್ಟು ಕಷ್ಟ ಕಾರ್ಪಣ್ಯಗಳು ಕಳೆದು ಶುಭ ಫಲಗಳು ಲಭಿಸುತ್ತದೆ ಎಂದು ಶಾಸ್ತ್ರ ಹೇಳಿದೆ. ನವೆಂಬರ್ ತಿಂಗಳನ್ನು ಮಾರ್ಗಶಿರ ಮಾಸ ಎಂದು ಹೇಳಲಾಗುತ್ತದೆ. ಈ ತಿಂಗಳಲ್ಲಿ ಕೃಷ್ಣ ಮಾತ್ರವಲ್ಲದೆ ಶಿವ ಮತ್ತು ರಾಮನನ್ನು (Lord Rama) ಕೂಡ ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಈ ತಿಂಗಳಿನ ದೈವ ಆರಾಧನೆಯಿಂದಾಗಿ ಶ್ರೀ ಕೃಷ್ಣನ ಪೂಜೆ ಪುನಸ್ಕಾರದಿಂದಾಗಿ ಜನರಿಗೆ ದೊರೆಯುವ ಲಾಭ, ಶುಭ ಫಲಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಮಾರ್ಗಶಿರ ಮಾಸವು ನವೆಂಬರ್ ತಿಂಗಳಿನಲ್ಲಿ ಶುರುವಾಗುತ್ತದೆ. ಈ ತಿಂಗಳ ಒಂಬತ್ತನೇ ತಾರೀಖಿನಿಂದ ಮಾರ್ಗಶಿರ ಮಾಸವು ಆರಂಭವಾಗುತ್ತದೆ. ಈ ಶುಭ ವೇಳೆಯಲ್ಲಿ ಶ್ರೀ ಕೃಷ್ಣನ ಆರಾಧನೆಯಿಂದಾಗಿ ಸಾಕಷ್ಟು ಒಳ್ಳೆಯ ಅದೃಷ್ಟ ಫಲಗಳು ದೊರೆಯಲಿವೆ. ಅದರಲ್ಲೂ ಪ್ರಮುಖವಾಗಿ ಈ ಕೆಳಗಿನ ಮೂರು ಕೆಲಸಗಳನ್ನು ಮಾಡುವುದರಿಂದ ಶ್ರೀ ಕೃಷ್ಣ ಕೃಪೆಗೆ ಪಾತ್ರವಾಗಬಹುದು. ಹಾಗಿದ್ದರೆ ಆ ಮೂರು ಕೆಲಸಗಳು ಯಾವ್ಯಾವ ಎನ್ನುವುದನ್ನು ಇಲ್ಲಿ ಹೇಳಲಾಗಿದೆ. ಮಾರ್ಗಶಿರ ಮಾಸವನ್ನು ತನ್ನ ನೆಚ್ಚಿನ ಮಾಸವೆಂದು ಶ್ರೀ ಕೃಷ್ಣ ಪುರಾಣದಲ್ಲಿ ಹೇಳಿದ್ದಾನೆ. ಈ ಸಮಯದಲ್ಲಿ ಶ್ರೀ ಕೃಷ್ಣನ ಪೂಜೆ ಪುನಸ್ಕಾರ ಒಳ್ಳೆಯ ಲಾಭಗಳನ್ನು ತಂದು ಕೊಡಲಿದೆ. ಈ ವೇಳೆ ಪವಿತ್ರ ಜಲದಿಂದ ಸ್ನಾನ ಮಾಡುವುದು, ವಿಶೇಷವಾಗಿ ಪವಿತ್ರ ನದಿಯ ಸ್ನಾನ ಮಾಡುವುದರಿಂದ ಪಾಪ ಕರ್ಮಗಳು ಕಳೆಯಲಿವೆ. ನದಿಯ ಸ್ನಾನ ಸಾಧ್ಯವಾಗದೇ ಹೋದಾಗ ಗಂಗಾ ಜಲದಿಂದ ಸ್ನಾನ ಮಾಡುವುದು ಒಳ್ಳೆಯದು. ಇದನ್ನು ಓದಿ.. ರಾಹುಲ್, ರೋಹಿತ್ ಬ್ಯಾಟಿಂಗ್ ಅಂತೂ ಅಲ್ಲವೇ ಅಲ್ಲ ಭಾರತ ಸೋಲಿಗೆ ಮೂರು ಕಾರಣಗಳು ಏನೇನು ಗೊತ್ತೇ?? ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಏನು ಗೊತ್ತೇ??

ಮಹಾಭಾರತದಲ್ಲಿ ಈ ಸಮಯದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಬಹಳ ವಿಸ್ತಾರವಾಗಿ ಹೇಳಲಾಗಿದೆ. ಈ ವೇಳೆ ಬಡವರಿಗೆ, ಹಸಿದವರಿಗೆ ಅನ್ನ ನೀಡುವುದರಿಂದಾಗಿ ಸಾಕಷ್ಟು ಒಳ್ಳೆಯ ಫಲಗಳು ಲಭಿಸಲಿದೆ. ಈ ಕಾಲದಲ್ಲಿ ಉಪವಾಸ ಕೈಗೊಳ್ಳುವುದು ಒಳ್ಳೆಯ ಕೆಲಸ. ಇದರಿಂದ ಆರೋಗ್ಯ ಸಮಸ್ಯೆಗಳ ನಿವಾರಣೆ ಆಗುವುದರ ಜೊತೆಗೆ ಪಾಪಕರ್ಮಗಳು ಕಳಿಯಲಿವೆ. ಈ ಕಾಲದಲ್ಲಿ ಬೆಳ್ಳಿಯ ದಾನ ಮಾಡುವುದು ಶ್ರೇಯಸ್ತರವಾಗಿದೆ. ಅಲ್ಲದೆ ಸಿಹಿಯ ದಾನ ಕೂಡ ಅತ್ಯುತ್ತಮವಾದದ್ದು. ಮಹಿಳೆಯರು ಈ ವೇಳೆ ಶ್ರೀಕೃಷ್ಣನ ಪೂಜೆಯಿಂದಾಗಿ ತಾವು ಬಯಸಿದ್ದನ್ನು ಪಡೆಯಬಹುದಾಗಿದೆ. ತಾವು ಅಂದುಕೊಂಡಿದ್ದು ಈಡೇರುವುದಕ್ಕಾಗಿ ಇಷ್ಟಾರ್ಥ ಸಿದ್ದಿಗಾಗಿ ಅನ್ನದಾನ ಪುಣ್ಯ ಕಾರ್ಯವನ್ನು ಮಾಡುವುದರಿಂದ ಒಳ್ಳೆಯ ಲಾಭಗಳು ಲಭಿಸುತ್ತದೆ. ಇದನ್ನು ಓದಿ.. ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಡಿ ಬಾಸ್ ದರ್ಶನ್ ! ಉಡುಗೊರೆ ನೋಡಿ ಅಮೂಲ್ಯ ಶಾಕ್. ಏನು ಕೊಟ್ಟಿದ್ದಾರೆ ಗೊತ್ತೇ?