Cricket News: ವಿಶ್ವಕಪ್ ಸೋಲಿಗೆ ನೇರ ಕಾರಣವಾದ ದ್ರಾವಿಡ್ ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ: ತೆಗೆದುಕೊಂಡ ಗಟ್ಟಿ ನಿರ್ಧಾರವೇನು ಗೊತ್ತೆ??
Cricket News: ರಾಹುಲ್ ದ್ರಾವಿಡ್ (Rahul Dravid) ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಕೋಚ್ ಆದ ನಂತರ ಎರಡು ಐಸಿಸಿ ಪಂದ್ಯಗಳದ್ದು ಆಡಿದೆ. ಆದರೆ ಅವರ ಮಾರ್ಗದರ್ಶನದಲ್ಲಿ ಆಡಿದ ಈ ಎರಡು ಟೂರ್ನಿಗಳಲ್ಲಿ ಭಾರತ ತಂಡವು ಸೋಲು ಕಂಡಿದೆ. ಇದಕ್ಕಾಗಿ ರಾಹುಲ್ ದ್ರಾವಿಡ್ ರವರನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ. ಇದೀಗ ಮುಂಬರುವ ಪಂದ್ಯಗಳಲ್ಲಿ ಬಿಸಿಸಿಐ (BCCI) ಅತ್ಯಂತ ಮಹತ್ವದ ತೀರ್ಮಾನ ಒಂದನ್ನು ತೆಗೆದುಕೊಂಡಿದೆ. ಇದು ನೇರ ರಾಹುಲ್ ದ್ರಾವಿಡ್ ರವರಿಗೆ ಶಾಕಿಂಗ್ ಸಂಗತಿಯಾಗಿದೆ. ಮುಂಬರುವ ಪಂದ್ಯಗಳಿಂದ ಕೋಚ್ ಆಗಿ ರಾಹುಲ್ ದ್ರಾವಿಡ್ ರವರನ್ನು ಬಿಸಿಸಿಐ ಹೊರಗೆ ಇಟ್ಟಿದೆ. ಅವರ ಜಾಗಕ್ಕೆ ಇದೀಗ ಮತ್ತೊಬ್ಬರನ್ನು ತಂದು ಕೂರಿಸಲಾಗಿದೆ.
ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (VVS Lakshman) ಮುಂದಿನ ನ್ಯೂಜಿಲೆಂಡ್ ಪ್ರವಾಸದ ಟೂರ್ನಿಗಳಲ್ಲಿ ಹಂಗಾಮಿ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಸೋಲನ್ನು ಕಂಡಿದೆ. ಇದರ ಬೆನ್ನಲ್ಲೇ ರಾಹುಲ್ ದ್ರಾವಿಡ್ ಅವರ ತಂಡದ ಎಲ್ಲಾ ಕೋಚ್ ಸಿಬ್ಬಂದಿಗಳನ್ನು ತಂಡದಿಂದ ವಿಶ್ರಾಂತಿ ನೀಡಲಾಗಿದ್ದು ಅವರ ಜಾಗಕ್ಕೆ ಹೊಸ ಕೋಚ್ ಗಳನ್ನು ನೇಮಿಸಿಕೊಳ್ಳಲಾಗಿದೆ. ಇನ್ನು ರಾಹುಲ್ ದ್ರಾವಿಡ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು ಅವರ ಬದಲಿಗೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮುಂದಿನ ನ್ಯೂಜಿಲೆಂಡ್ ಪ್ರವಾಸದ ಟೂರ್ನಿಗಳಲ್ಲಿ ಹಂಗಾಮಿ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲು ನೇಮಿಸಲಾಗಿದೆ. ಇದನ್ನು ಓದಿ.. Cricket News: ಕೊಹ್ಲಿ ತೆಗೆದುಹಾಕಿ, ರೋಹಿತ್ ಅನ್ನು ಅಟ್ಟಕ್ಕೆ ಏರಿಸಿ, ಏಷ್ಯಾ ಕಪ್ ವಿಶ್ವಕಪ್ ಸೋತ ದ್ರಾವಿಡ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

ಟೀಮ್ ಇಂಡಿಯಾವು (Team India) ನ್ಯೂಜಿಲೆಂಡ್ ಪ್ರವಾಸದಲ್ಲಿ ಆರು ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಆಡಲಿದೆ. ಆರು ಪಂದ್ಯಗಳಲ್ಲಿ ಮೂರು ಏಕದಿನ ಪಂದ್ಯಗಳಾಗಿದ್ದು ಮೂರು ಟಿ ಟ್ವೆಂಟಿ ಪಂದ್ಯಗಳಾಗಿವೆ. ಈ ಸೀಸನ್ ಪಂದ್ಯಗಳು ನವೆಂಬರ್ 18ರಿಂದ ವೆಲ್ಲಿಂಗ್ಟನ್ ನಲ್ಲಿ ಜರುಗಲಿವೆ. ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma), ರವಿಚಂದ್ರನ್ ಅಶ್ವಿನ್ (Ravichandran Ashwin), ಕೆ ಎಲ್ ರಾಹುಲ್ (K L Rahul) ರವರಿಗೆ ಈ ಸದರಿ ಪಂದ್ಯಗಳಿಂದ ವಿಶ್ರಾಂತಿ ಘೋಷಿಸಲಾಗಿದ್ದು ಅವರು ಈ ಪಂದ್ಯಗಳಿಗಾಗಿ ಪ್ರವಾಸ ಕೈಗೊಳ್ಳುವುದಿಲ್ಲ. ಜೊತೆಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳಲ್ಲಿ ಭಾಗವಹಿಸಿದ್ದ ಎಲ್ಲ ಸಂಪೂರ್ಣ ಕೋಚ್ ಸಿಬ್ಬಂದಿಗಳಿಗೂ ಕೂಡ ವಿಶ್ರಾಂತಿ ನೀಡಲಾಗಿದೆ. ಇದನ್ನು ಓದಿ.. ರಾಹುಲ್, ರೋಹಿತ್ ಬ್ಯಾಟಿಂಗ್ ಅಂತೂ ಅಲ್ಲವೇ ಅಲ್ಲ ಭಾರತ ಸೋಲಿಗೆ ಮೂರು ಕಾರಣಗಳು ಏನೇನು ಗೊತ್ತೇ?? ಕ್ರಿಕೆಟ್ ಪಂಡಿತರ ಲೆಕ್ಕಾಚಾರ ಏನು ಗೊತ್ತೇ??