ನಟಿ ಅಮೂಲ್ಯ ಮಕ್ಕಳ ನಾಮಕರಣಕ್ಕೆ ಬಂದ ಡಿ ಬಾಸ್ ದರ್ಶನ್ ! ಉಡುಗೊರೆ ನೋಡಿ ಅಮೂಲ್ಯ ಶಾಕ್. ಏನು ಕೊಟ್ಟಿದ್ದಾರೆ ಗೊತ್ತೇ?
ಕೆಲವು ತಿಂಗಳ ಹಿಂದೆ ಅಮೂಲ್ಯ ಅವರು ಅವಳಿ ಮಕ್ಕಳಿಗೆ ತಾಯಿಯಾಗಿದ್ದರು. ಇದೀಗ ಅವರು ತಮ್ಮ ಅವಳಿ ಮಕ್ಕಳ ನಾಮಕರಣ ಸಮಾರಂಭವನ್ನು ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಹ ಪಾಲ್ಗೊಂಡಿದ್ದರು. ಅಮೂಲ್ಯ ಅವರಿಗೆ ದರ್ಶನ್ ಕಂಡರೆ ಅಪಾರವಾದ ಪ್ರೀತಿ ಗೌರವ. ದರ್ಶನ್ ರವರಿಗೂ ಕೂಡ ಅಮೂಲ್ಯ ಅವರನ್ನು ಕಂಡರೆ ಅಷ್ಟೇ ಪ್ರೀತಿ, ಅಕ್ಕರೆ. ಹೀಗಾಗಿ ಅವರು ಅಮೂಲ್ಯ ಅವರ ಅವಳಿ ಮಕ್ಕಳ ನಾಮಕರಣ ಸಮಾರಂಭಕ್ಕೆ ಬಂದಿದ್ದು, ಅತ್ಯಂತ ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಅವರು ತಾವು ಗರ್ಭಿಣಿಯದಾಗಿನಿಂದ ಇಲ್ಲಿಯವರೆಗೂ ತಮ್ಮ ತಾಯ್ತನ ಹಾಗೂ ಮಕ್ಕಳ ಬಗ್ಗೆ ಸಾಕಷ್ಟು ಪೋಸ್ಟ್ ಹಾಕುತ್ತಲೇ ಇರುತ್ತಾರೆ.
ಇದೀಗ ಅಮೂಲ್ಯ ಅವರು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಕ್ಕಳಿಗೆ ತುಂಬಾ ಅರ್ಥಗರ್ಭಿತ ಸುಂದರ ಹೆಸರುಗಳನ್ನು ಇರಿಸಲಾಗಿದ್ದು, ಇತ್ತೀಚೆಗೆ ಈ ಅವಳಿ ಮಕ್ಕಳಿಗೆ ನಾಮಕರಣ ಸಮಾರಂಭ ನಡೆಯಿತು. ಇತ್ತೀಚೆಗೆ ಅಮೂಲ್ಯ ಜಗದೀಶ್ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭ ಅದ್ದೂರಿಯಾಗಿ ಜರುಗಿತು, ಈ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ, ಜಗದೀಶ್ ಅದ್ದೂರಿಯಾಗಿ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿ ಅಮೂಲ್ಯ ಅವರ ಕುಟುಂಬ, ಜಗದೀಶ್ ಅವರ ಕುಟುಂಬ ಹಾಗೂ ಇತರೆ ಸ್ನೇಹಿತರು ಪಾಲ್ಗೊಂಡಿದ್ದರು. ಚಿತ್ರರಂಗದ ಕೆಲವರು ಈ ನಾಮಕರಣ ಸಮಾರಂಭಕ್ಕೆ ಬಂದಿದ್ದರು. ಅತ್ಯಂತ ಅರ್ಥಗರ್ಭಿತವಾಗಿ ಈ ಕಾರ್ಯಕ್ರಮವನ್ನು ಮಾಡಲಾಗಿತ್ತು.

ನಾಮಕರಣ ಸಮಾರಂಭದಲ್ಲಿ ಎಲ್ಲರೂ ಖುಷಿಯಿಂದ ಸಂಭ್ರಮಿಸಿರುವ ವಿಡಿಯೋ ಇದೀಗ ಹರಿದಾಡುತ್ತಿದೆ. ಇನ್ನೂ ಮಕ್ಕಳಿಗೆ ಹಿರಿಯರು ಮತ್ತು ಜ್ಯೋತಿಷ್ಯವನ್ನು ಕೇಳಿ ಹೆಸರಿಸಲಾಗಿದ್ದು ತುಂಬಾ ಸೊಗಸಾಗಿದೆ. ನಾಮಕರಣಕ್ಕೂ ಮೊದಲು ಜ್ಯೋತಿಷಿಗಳನ್ನು ಭೇಟಿ ಮಾಡಿದ್ದ ಅಮೂಲ್ಯ ದಂಪತಿ ಯಾವ ಹೆಸರನ್ನು ಇರಿಸಬೇಕೆಂದು ಚರ್ಚಿಸಿತ್ತು. ಗ್ರಹಗತಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಅನುಸಾರವೇ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಮಾಡಲಾಗಿದೆ. ಇನ್ನು ನಾಮಕರಣ ಸಮಾರಂಭ ಅದ್ದೂರಿಯಾಗಿ ನೆರವೇರಿದೆ. ಇಡೀ ಕುಟುಂಬ ಈ ಸಮಾರಂಭದಲ್ಲಿ ಪಾಲ್ಗೊಂಡು ಸಂಭ್ರಮಿಸಿದೆ. ಇನ್ನು ತಮ್ಮ ಮಕ್ಕಳಿಗೆ ನಟಿ ಅಮೂಲ್ಯ ಅವರು ಅಥರ್ವ ಮತ್ತು ಆಧವ್ ಎಂದು ಹೆಸರಿಸಿದ್ದಾರೆ.
ಅಮೂಲ್ಯ ಮತ್ತು ದರ್ಶನ್ ರವರು ಪರಸ್ಪರ ಒಬ್ಬರಿಗೊಬ್ಬರು ಅತ್ಯಂತ ಆಪ್ತರಾಗಿದ್ದು ಇಬ್ಬರಿಗೂ ಸಾಕಷ್ಟು ಆತ್ಮೀಯತೆ ಇದೆ. ಹೀಗಾಗಿ ದರ್ಶನ್ ರವರು ಅಮೂಲ್ಯ ಅವರ ಆಮಂತ್ರಣವನ್ನು ಸ್ವೀಕರಿಸಿ ಮಕ್ಕಳ ನಾಮಕರಣ ಸಮಾರಂಭಕ್ಕೆ ಬಂದಿದ್ದರು. ತಮ್ಮ ಪ್ರೀತಿಪಾತ್ರರಿಗೆ ಏನು ಬೇಕಾದರೂ ಮಾಡುವ ಗುಣ ಹೊಂದಿರುವ ದರ್ಶನ್ ರವರು ಅತ್ಯಂತ ದುಬಾರಿ ಬೆಲೆ ಬಾಳುವ ಉಡುಗೊರೆಯನ್ನು ನೀಡಿದ್ದಾರೆ. ಮಕ್ಕಳನ್ನು ಕಣ್ತುಂಬಿಕೊಂಡಿರುವ ದರ್ಶನ್ ರವರು, ಕುಟುಂಬದವರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ ನಂತರ ಇಬ್ಬರೂ ಅವಳಿ ಮಕ್ಕಳಿಗೆ ಚಿನ್ನದ ಬಳೆಗಳನ್ನು ತೊಡಿಸಿದ್ದಾರೆ. ದರ್ಶನ್ ರವರು ಮಕ್ಕಳಿಗೆ ಅತ್ಯಂತ ಬೆಳೆಬಾಳುವ ಆಕರ್ಷಕ ಬಂಗಾರದ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.