ಸಿನಿಮಾದಲ್ಲಿ ನಟಿಯಾಗಿದ್ದ ಚೈತ್ರ ರವರನ್ನು ಮತ್ತೆ ಧಾರಾವಾಹಿಗೆ ಕರೆದು ತರಲು ಜೊತೆ ಜೊತೆಯಲಿ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತೇ??

70

ಜೊತೆ ಜೊತೆಯಲಿ ಧಾರವಾಹಿಯಲ್ಲಿ ಈಗ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಧಾರವಾಹಿಯಲ್ಲಿ ಇತ್ತೀಚೆಗೆ ಅನಿರುದ್ಧ ಅವರ ಪಾತ್ರ ಬದಲಾಗಿ, ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರಕ್ಕೆ ಬಂದಿದ್ದಾರೆ. ಆದರೆ ಆರ್ಯವರ್ಧನ್ ಗೆ ಈಗ ಹಳೆಯ ನೆನಪುಗಳಿಲ್ಲ, ಆರ್ಯನನ್ನು ಎಲ್ಲರೂ ಸಂಜು ಸಂಜು ಎಂದು ಕರೆಯುತ್ತಿದ್ದಾರೆ. ನೆನಪುಗಳು ಇಲ್ಲದೆ ಹೋದರು ಕೂಡ, ಅನು ಬಗ್ಗೆ ವಿಶೇಷ ಭಾವನೆ ಇದೆ. ಅನು ಬರ್ತ್ ಡೇ ಅನ್ನು ಸೆಲೆಬ್ರೇಟ್ ಮಾಡಬೇಕು ಎಂದುಕೊಂಡಿದ್ದಾರೆ.

ಅನು ಬಂದಾಗ, ಬಹಳ ಸಂತೋಷವಾಗಿ ಅನು ಕಡೆ ನೋಡುತ್ತಾರೆ ಸಂಜು, ಆಗ ನಗುತ್ತಾ ಬರುವ ಅನು, ನಿಮಗೆ ಒಂದು ಸರ್ಪ್ರೈಸ್ ಇದೆ ಎಂದು ಹೇಳುತ್ತಾರೆ. ಅಲ್ಲಿ ನೋಡಿದರೆ, ಅನು ವಿಶ್ವಾಸ್ ನ ಹೆಂಡತಿ ಆರಾಧನಾಳನ್ನು ಕರೆತಂದಿದ್ದಾಳೆ. ವಿಶ್ವಾಸ್ ಮತ್ತು ಆರಾಧನಾ ನಡುವೆ ಏನೋ ತೊಂದರೆ ಇದೆ, ಅದನ್ನು ಸರಿ ಮಾಡಬೇಕು ಎಂದುಕೊಂಡಿದ್ದಾಳೆ ಅನು. ಇತ್ತ ವಿಶ್ವಾಸ್ ಗೆ ಬೇರೆ ರೀತಿ ಅನುಭವವಾಗುತ್ತಿದೆ. ಈಗ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರಾಧನಾ ಪಾತ್ರಕ್ಕಾಗಿ ಹೊಸದಾಗಿ ಬಂದಿರುವುದು ನಟಿ ಚೈತ್ರಾ ರಾವ್.

ಈ ಮೊದಲು ಜೋಡಿಹಕ್ಕಿ ಧಾರವಾಹಿ ಮತ್ತು ಟಾಮ್ ಅಂಡ್ ಜೆರ್ರಿ ಸಿನಿಮಾ ಮೂಲಕ ಗುರುತಿಸಿಕೊಂಡಿದ್ದ ಚೈತ್ರಾ ರಾವ್ ಅವರು ಈಗ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕೆಲ ಸಮಯದ ಬಳಿಕ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಅನಿರುದ್ಧ್ ಅವರು ಧಾರವಾಹಿಯಿಂದ ಹೊರಬಂದ ನಂತರ, ಧಾರವಾಹಿ ಹೆಚ್ಚು ಜನಪ್ರಿಯತೆ ಗಳಿಸಲಿ ಎಂದು ಹೊಸ ಪಾತ್ರವಾಗಿ ಚೈತ್ರಾ ರಾವ್ ಅವರನ್ನು ಕರೆತರಲಾಗಿದೆ, ಇದೀಗ ಚೈತ್ರಾ ಅವರಿಗೆ ಈ ಪಾತ್ರಕ್ಕೆ ಸಿಗುತ್ತಿರುವ ಸಂಭಾವನೆ ಎಷ್ಟು ಎಂದು ಚರ್ಚೆ ಶುರುವಾಗಿದ್ದು, ಚೈತ್ರಾ ರಾವ್ ಅವರಿಗೆ ಒಂದು ಎಪಿಸೋಡ್ ಗೆ 25 ಸಾವಿರ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ.