ಬಿಗ್ ನ್ಯೂಸ್: ಕೊನೆಗೂ ಸೆಮಿಫೈನಲ್ ಪಂದ್ಯಕ್ಕೂ ಮುನ್ನವೇ ಸಿಹಿ ಸುದ್ದಿ ಕೊಟ್ಟ ರೋಹಿತ್ ಶರ್ಮ. ಏನು ಗೊತ್ತೇ??

38

ಟಿ ಟ್ವೆಂಟಿ ವಿಶ್ವಕಪ್ 2022ರ ಸೆಮಿ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿರುವ ಭಾರತ ತಂಡ ಈಗಾಗಲೇ ಅಡಿಲೇಡ್ ಗೆ ಬಂದು ಇಳಿದಿದೆ. ಇದರ ಬೆನ್ನಲ್ಲೇ ತಂಡವು ಅಭ್ಯಾಸ ಪದ್ಯದಲ್ಲಿ ನಿರತವಾಗಿದೆ. ಈ ವೇಳೆ ಹಿಟ್ಮ್ಯಾನ್ ರೋಹಿತ್ ಶರ್ಮಾ ನೆಟ್ಟಿನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡುವಾಗ ಗಾಯ ಮಾಡಿಕೊಂಡಿದ್ದರು. ಬಲ ಮುಂಗೈಗೆ ಅವರು ಪೆಟ್ಟು ಮಾಡಿಕೊಂಡು ಸಾಕಷ್ಟು ನೋವು ತಿಂದಿದ್ದಾರೆ. ಅವರಿಗೆ ಪೆಟ್ಟಾದ ತಕ್ಷಣವೇ ವೈದ್ಯರು ಅವರಿಗೆ ಚಿಕಿತ್ಸೆ ನೀಡಿದರು. ಆದರೆ ನೋವನ್ನು ತಡೆಯಲು ಸಾಧ್ಯವಾಗದ ಕಾರಣ ಅವರು ಅಭ್ಯಾಸ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಗಿತ್ತು. ರೋಹಿತ್ ಶರ್ಮಾ ಪೆಟ್ಟು ಮಾಡಿಕೊಂಡ ತಕ್ಷಣವೇ ಕ್ರಿಕೆಟ್ನ ವೈದ್ಯಕೀಯ ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಇದು ಭಾರತ ತಂಡಕ್ಕೆ ಮುಂದೇನು ಎನ್ನುವ ಚಿಂತೆಯನ್ನು ಸೃಷ್ಟಿಸಿತ್ತು.

ಆದರೆ ಕೆಲವೇ ಹೊತ್ತಿನಲ್ಲಿ ಅವರು ತಂಡಕ್ಕೆ ಮರಳಿದ್ದಾರೆ, ಶೀಘ್ರವೇ ಚೇತರಿಕೆ ಕಂಡವರು ಮತ್ತೆ ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದು ಇದೀಗ ತಂಡದ ಆತಂಕ ದೂರವಾಗಿದೆ. ಟಿ-ಟ್ವೆಂಟಿ ವಿಶ್ವಕಪ್ 2022 ಕೊನೆಯ ಹಂತಕ್ಕೆ ಬಂದು ತಲುಪಿದೆ. ಸೂಪರ್ 12 ಎಲ್ಲಾ ಪಂದ್ಯಗಳು ಈಗಾಗಲೇ ಮುಗಿದಿದ್ದು ಗ್ರೂಪ್ ಒಂದು ಮತ್ತು ಎರಡರಲ್ಲಿ ಟಾಪ್ 2 ಸ್ಥಾನ ಪಡೆದುಕೊಂಡ ತಂಡಗಳು ಸೆಮಿ ಫೈನಲ್ ನಲ್ಲಿ ಸೆಣೆಸಲಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಗುಂಪು ಒಂದರಿಂದ ಹಾಗೂ ಭಾರತ ಮತ್ತು ಪಾಕಿಸ್ತಾನ ಗುಂಪು ಎರಡರಿಂದ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿವೆ. ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿ ಫೈನಲ್ ನಲ್ಲಿ ಎದುರಾಗಲಿವೆ. ನವೆಂಬರ್ 10ರಂದು (ನಾಳೆ) ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡವು ಆಡಲಿದ್ದು, ಪೆಟ್ಟು ಮಾಡಿಕೊಂಡು ಪಂದ್ಯದಿಂದ ಹೊರ ನಡೆದಿದ್ದರು.

ಆದರೆ ರೋಹಿತ್ ಶರ್ಮಾ ಕೆಲವೇ ಹೊತ್ತಿನಲ್ಲಿ ಮತ್ತೆ ಅಭ್ಯಾಸ ಪಂದ್ಯಕ್ಕೆ ಮರಳಿದ್ದಾರೆ. ಹೀಗಾಗಿ ಬಿಸಿಸಿಐ ಮತ್ತು ಭಾರತ ತಂಡಕ್ಕೆ ಇದ್ದ ಒಂದು ದೊಡ್ಡ ಆತಂಕ ಇದೀಗ ನಿವಾರಣೆಯಾಗಿದೆ. ಅಭ್ಯಾಸ ಪಂದ್ಯದಲ್ಲಿ ನಿರತರಾಗಿದ್ದ ತಂಡದ ನಾಯಕ ರೋಹಿತ್ ಶರ್ಮ ಅವರು ಬ್ಯಾಟಿಂಗ್ ವೇಳೆ ಪೆಟ್ಟು ಮಾಡಿಕೊಂಡಿದ್ದರು. ಬಲ ಮುಂಗೈಗೆ ಬಲವಾದ ಪೆಟ್ಟು ಬಿದ್ದು ಸಾಕಷ್ಟು ನೋವು ಅನುಭವಿಸಿದ್ದರು. ಭಾರತೀಯ ತಂಡದ ಆರೋಗ್ಯ ಸಿಬ್ಬಂದಿಗಳು ಅಲ್ಲಿಗೆ ಬಂದು ಅವರಿಗೆ ಹಾರೈಕೆ ನೀಡಿದರು. ಅವರು ಫಿಜಿಯೋಗಳೊಂದಿಗೆ ಚರ್ಚೆ ನಡೆಸಿದರು. ಕೈಗೆ ಐಸ್ ಪ್ಯಾಕ್ ಪಟ್ಟಿಯನ್ನು ಕಟ್ಟಲಾಗಿತ್ತು. ಸಂಕ್ಷಿಪ್ತ ಸಮಾಲೋಚನೆಯ ನಂತರ ಪ್ರಥಮ ಚಿಕಿತ್ಸೆಯನ್ನು ಪಡೆದಿದ್ದ ರೋಹಿತ್ ಶರ್ಮ ಮತ್ತೆ ಪಂದ್ಯವನ್ನು ಆರಂಭಿಸಿದರು.

ಆದರೆ ಎರಡನೇ ಚೆಂಡನ್ನು ಎದುರಿಸುವ ವೇಳೆಗೆ ಅವರ ಕೈ ನೋವು ಇನ್ನಷ್ಟು ಹೆಚ್ಚಾಗಿತ್ತು. ಹೀಗಾಗಿ ಪಂದ್ಯವನ್ನು ಅವರು ಅರ್ಧಕ್ಕೆ ಬಿಟ್ಟು ಹೊರ ನಡೆದಿದ್ದರು. ಕೆಲವು ಹೊತ್ತು ವಿಶ್ರಾಂತಿ ಪಡೆದ ರೋಹಿತ್ ಶರ್ಮ ಪೂರ್ತಿ ನೋವಿನಿಂದ ಗುಣಮುಖವಾಗಿ ಮತ್ತೆ ಅಭ್ಯಾಸ ಪಂದ್ಯಕ್ಕೆ ಮರಳಿದರು. ಟೀಮ್ ಇಂಡಿಯಾಗೆ ದೊಡ್ಡ ಆತಂಕ ಸೃಷ್ಟಿಸಿದ ಈ ಬೆಳವಣಿಗೆಯಿಂದ ತಂಡವು ಇದೀಗ ಆತಂಕದಿಂದ ದೂರವಾದಂತಾಗಿದೆ. ಮೊದಲಿನಂತೆ ಚುರುಕಾಗಿ ರೋಹಿತ್ ಶರ್ಮ ಅಭ್ಯಾಸ ಪಂದ್ಯದಲ್ಲಿ ನಿರತರಾದರು. ಈ ಮೂಲಕ ನಾಳಿನ ಸೆಮಿ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಭಾರತ ತಂಡವು ಭರ್ಜರಿ ಪ್ರದರ್ಶನ ನೀಡಲಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ.