ಯಾವುದೇ ಅಂಜಿಕೆಯಲ್ಲಿ ನೋವನ್ನು ಹೇಳಿಕೊಂಡ ರಶ್ಮಿಕಾ ಮಂದಣ್ಣ: ಚೆಲುವೆಗೆ ನೋವು ಕೊಟ್ಟವರು ಉದ್ದಾರ ಆಗುತ್ತಾರಾ??

12

ರಶ್ಮಿಕ ಮಂದಣ್ಣ ಕನ್ನಡ ಚಿತ್ರದಿಂದ ಪರಿಚಿತರಾಗಿ ಇದೀಗ ಪರಭಾಷೆಗಳಲ್ಲಿ ಮಿಂಚುತ್ತಿರುವ ಬಹು ಬೇಡಿಕೆಯ ನಟಿಯಾಗಿದ್ದಾರೆ. ಆದರೆ ಅವರ ವೈಯಕ್ತಿಕ ಜೀವನದಲ್ಲಾದ ಕೆಲವು ಬಿರುಕುಗಳು ಮತ್ತು ಕನ್ನಡ ಚಿತ್ರರಂಗ ಮತ್ತು ಕನ್ನಡ ಭಾಷೆಯ ಕುರಿತಾಗಿ ಅವರ ನಿಲುವಿನಿಂದಾಗಿ ಅವರು ಸಾಕಷ್ಟು ವರ್ಷಗಳಿಂದ ಟ್ರೋಲ್, ನಿಂದನೆಗಳನ್ನು, ಅಪಹಾಸ್ಯಗಳನ್ನು ಎದುರಿಸುತ್ತ ಬಂದಿದ್ದಾರೆ. ಇದೀಗ ಅವರು ಇದೆಲ್ಲದರ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಾವು ಸಾಕಷ್ಟು ವರ್ಷಗಳಿಂದ ಎದುರಿಸುತ್ತಿರುವ ಈ ರೀತಿಯ ಟ್ರೋಲ್, ನಿಂದನೆಗಳ ಕುರಿತು ಅವರು ಸುಧೀರ್ಘವಾಗಿ ಬರೆದುಕೊಂಡಿದ್ದಾರೆ. ನಾನು ಸಾಕಷ್ಟು ವರ್ಷಗಳಿಂದ ಈ ರೀತಿಯ ಅಪಮಾನವನ್ನು ಎದುರಿಸುತ್ತಿದ್ದೇನೆ. ನಾನು ಇದರ ಬಗ್ಗೆ ಮೊದಲೇ ಮಾತನಾಡಬೇಕಿತ್ತು, ಆದರೆ ಈಗಲಾದರೂ ಮಾತನಾಡಲೇಬೇಕೆಂದು ನಿರ್ಧರಿಸಿ ಹೇಳುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ವಿರುದ್ಧ ಸಾಕಷ್ಟು ಇಲ್ಲಸಲ್ಲದ ಆರೋಪಗಳು, ಟ್ರೋಲ್ ಗಳು ನಡೆಯುತ್ತಲೇ ಇರುತ್ತವೆ. ರಕ್ಷಿತ್ ಶೆಟ್ಟಿ ಅವರ ಜೊತೆಗೆ ಸಂಬಂಧ ಮುರಿದು ಬಿದ್ದ ನಂತರ ಅವರ ಬಗ್ಗೆ ಸಾಕಷ್ಟು ಟ್ರೋಲ್ ಗಳು ಆಗುತ್ತದೆ. ಇದಲ್ಲದೆ ಕರ್ನಾಟಕ, ಕನ್ನಡದ ವಿಷಯದ ಕುರಿತಾಗಿಯೂ ಕೂಡ ರಶ್ಮಿಕ ಮಂದಣ್ಣ ಅವರನ್ನು ಕಂಡರೆ ಕನ್ನಡಿಗರು ಬಹುತೇಕ ಕೆಂಡ ಕಾಡುತ್ತಾರೆ. ಅಲ್ಲದೆ ಸಾಕಷ್ಟು ಅಪಹಾಸ್ಯ ಅಪಮಾನಗಳನ್ನು ಅವರು ಎದುರಿಸುತ್ತಲೇ ಬಂದಿರುವುದಾಗಿ ಹೇಳಿಕೊಂಡಿದ್ದು, ನನ್ನದಲ್ಲದ ತಪ್ಪಿಗಾಗಿ ನನ್ನನ್ನು ಹೀಗೆ ನಿಂದಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿ ಬಹಳ ದೀರ್ಘವಾಗಿ ಇನ್ಸ್ಟಾಗ್ರಾಮ್ ಪೋಸ್ಟ್ ಒಂದರಲ್ಲಿ ಬರೆದಿದ್ದಾರೆ. ಈ ಮೂಲಕ ಅವರು ಸಾಕಷ್ಟು ವರ್ಷಗಳಿಂದ ಹೇಳಬೇಕು ಎಂದುಕೊಂಡಿದ್ದ ತಮ್ಮ ಅಪಮಾನದ ವಿಷಯವನ್ನು ಹೇಳಿದ್ದು, ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಾವು ಎದುರಿಸಿದ ಅಪಮಾನವನ್ನು ಮೊದಲ ಬಾರಿಗೆ ಅವರು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

ಹೀಗೆ ಸಾಕಷ್ಟು ಅಂಶಗಳು ರಶ್ಮಿಕ ಅವರನ್ನು ಹಲವಾರು ವರ್ಷಗಳಿಂದ ಬಾಧಿಸುತ್ತಿದೆಯಂತೆ. ಸಿನಿಮಾ ಕ್ಷೇತ್ರಕ್ಕೆ ಬಂದಾಗಿನಿಂದಲೂ ನನ್ನನ್ನು ಗೇಲಿ ಮಾಡುತ್ತಲೇ ಬರುತ್ತಿದ್ದಾರೆ. ನಾನು ಸುಮ್ಮನಿದ್ದೇನೆ ಎಂದರೆ ಅದರ ಅರ್ಥ ನೀವು ಏನು ಬೇಕಾದರೂ ಹೇಳಬಹುದು ಎಂದಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಸಂದರ್ಶನ ಒಂದರ ಕುರಿತಾಗಿ ಮಾತನಾಡಿರುವ ಅವರು ನನ್ನ ಸಂದರ್ಶನದ ಮಾತುಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ದ್ವೇಷದಿಂದ ಏನು ಸಿಗುವುದಿಲ್ಲ, ಒಳ್ಳೆಯದನ್ನು ನಾನು ಯಾವಾಗಲೂ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ. ನಾನು ಇದುವರೆಗೂ ಯಾರನ್ನೂ ದ್ವೇಷಿಸಿಲ್ಲ, ನನ್ನೊಂದಿಗೆ ಕೆಲಸ ಮಾಡುವವರನ್ನು ಬಹಳ ಗೌರವದಿಂದ ಕಂಡಿದ್ದೇನೆ. ಅವರ ಪ್ರತಿಭೆಯನ್ನು ಪ್ರಶಂಶಿಸಿದ್ದೇನೆ. ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಸತತ ಪರಿಶ್ರಮ ಪಡುತ್ತಿದ್ದೇನೆ. ಇಷ್ಟೆಲ್ಲ ಇದ್ದರೂ ಕಾರಣವಿಲ್ಲದೆ ನನ್ನ ಬಗ್ಗೆ ನೆಗೆಟಿವ್ ಕಮೆಂಟ್ ಹರಡುತ್ತಲೇ ಇದ್ದಾರೆ. ಇದರಿಂದ ಯಾವ ಲಾಭವೂ ಇಲ್ಲ. ಇದರಿಂದ ಯಾರಿಗೂ ಸಂತೋಷವೂ ಸಿಗುವುದಿಲ್ಲ. ನಾನು ಬಹಳ ನೊಂದುಕೊಂಡಿದ್ದೇನೆ ಎಂದು ಬಹಳ ದೀರ್ಘವಾಗಿ ಅವರು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದು ತಮ್ಮ ನೋವನ್ನು ಹೊರ ಹಾಕಿದ್ದಾರೆ.