Cricket News: ಸೆಮಿ ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತಕ್ಕೆ ಎಚ್ಚರಿಕೆ ಕೊಟ್ಟ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್. ಹೇಳಿದ್ದೇನು ಗೊತ್ತೇ?? ಕೊಹ್ಲಿ, ಸೂರ್ಯ ಗೆ ಏನು ಹೇಳಿದ್ದಾರೆ ಗೊತ್ತೇ??

23

Cricket News: ಟಿ ಟ್ವೆಂಟಿ ವಿಶ್ವಕಪ್ (T20 World Cup) ಸೆಮಿ ಫೈನಲ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮ (Rohit Sharma) ನಾಯಕತ್ವದ ಭಾರತ ತಂಡವು ಜೋಸ್ ಬಟ್ಲರ್ (Jos Butler) ನಾಯಕತ್ವದ ಇಂಗ್ಲೆಂಡ್ ತಂಡವನ್ನು ಎದುರುಗೊಳ್ಳಲಿದೆ. ಈ ಪಂದ್ಯಕ್ಕೂ ಮೊದಲು ಮಾಧ್ಯಮ ಸಂದರ್ಶನ ಒಂದರಲ್ಲಿ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಅವರು ಭಾರತದ ಆಟಗಾರರ ಬಗ್ಗೆ ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಮತ್ತು ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಬಗ್ಗೆ ಅವರು ಆಶ್ಚರ್ಯಕರ ಮಾತುಗಳನ್ನು ಹೇಳಿದ್ದಾರೆ. ಟಿ ಟ್ವೆಂಟಿ ವಿಶ್ವಕಪ್ 2022 ಕೊನೆಯ ಹಂತಕ್ಕೆ ಬಂದು ತಲುಪಿದೆ. ಸೂಪರ್ 12 ಎಲ್ಲಾ ಪಂದ್ಯಗಳು ಈಗಾಗಲೇ ಮುಗಿದಿದ್ದು ಗ್ರೂಪ್ ಒಂದು ಮತ್ತು ಎರಡರಲ್ಲಿ ಟಾಪ್ 2 ಸ್ಥಾನ ಪಡೆದುಕೊಂಡ ತಂಡಗಳು ಸೆಮಿ ಫೈನಲ್ ನಲ್ಲಿ ಸೆಣೆಸಲಿದೆ. ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಗುಂಪು ಒಂದರಿಂದ ಹಾಗೂ ಭಾರತ ಮತ್ತು ಪಾಕಿಸ್ತಾನ ಗುಂಪು ಎರಡರಿಂದ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿವೆ. ನವೆಂಬರ್ 9ರಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿ ಫೈನಲ್ ನಲ್ಲಿ ಎದುರಾಗಲಿವೆ. ನವೆಂಬರ್ 10ರಂದು ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಭಾರತ ತಂಡವು ಗೆಲುವಿಗಾಗಿ ಆಡಲಿವೆ.

ಸೆಮಿ ಫೈನಲ್ ಪಂದ್ಯಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಸೂರ್ಯ ಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿಯ ಆಟದ ಕುರಿತಾಗಿ ಕೆಲವು ಮಾತುಗಳನ್ನು ಸಂದರ್ಶಕರೊಂದಿಗೆ ಹಂಚಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಮಾತನಾಡುತ್ತಾ – “ಅವರ ಬ್ಯಾಟಿಂಗ್ ನಿಜಕ್ಕೂ ಅದ್ಭುತ, ಅವರ ಬ್ಯಾಟಿಂಗ್ ಅನ್ನು ಹೋಲಿಸಲು ಸಾಧ್ಯವೇ ಇಲ್ಲ. ನೋಡುಗರನ್ನು ತಲೆ ಕೆಡಿಸುವಂತೆ ಅವರು ಬ್ಯಾಟಿಂಗ್ ಪ್ರದರ್ಶನ ತೋರುತ್ತಾರೆ. ಅವರು ಯಾವಾಗಲೂ ಉತ್ತಮ ಫಾರ್ಮ್ನಲ್ಲಿಯೇ ಇದ್ದಾರೆ. ಆದರೆ ಅಷ್ಟೇ ಆಶಾದಾಯಕವಾಗಿ, ಉತ್ತಮ ಪ್ರದರ್ಶನದ ಮೂಲಕ ಅವರನ್ನು ಕಟ್ಟಿ ಹಾಕಲು ನಾವು ಪ್ರಯತ್ನಿಸುತ್ತೇವೆ” ಎಂದು ಬೆನ್ ಸ್ಟೋಕ್ಸ್ ಮಾಧ್ಯಮದ ಸುದ್ದಿಗಾರರೊಂದಿಗೆ ಹೇಳಿದ್ದಾರೆ. ಇನ್ನು ವಿರಾಟ್ ಕೊಹ್ಲಿಯ ಬಗ್ಗೆ ಹೇಳುತ್ತಾ – “ಅವರ ಅಂಕಿಗಳೆ, ಸಂಖ್ಯೆಗಳೇ ಅವರ ಸಾಧನೆಯ ಬಗ್ಗೆ ಹೇಳುತ್ತವೆ. ಅವರು ಎಲ್ಲ ಮೂರು ಸ್ವರೂಪದ ಇನ್ನಿಂಗ್ಸ್ ಗಳಲ್ಲಿಯೂ ಅದ್ಭುತ ಪ್ಲೇಯರ್. ನಾವು ಅವರ ವಿರುದ್ಧ ಹೆಚ್ಚು ಆಡುವ ತಂಡದವರಾಗಿದ್ದೇವೆ. ಹಾಗಾಗಿ ಅವರನ್ನು ಸಹ ಕಟ್ಟಿಹಾಕಲು ನಾವು ಸಾಕಷ್ಟು ಯೋಜನೆಗಳನ್ನು, ತಂತ್ರಗಳನ್ನು ರೂಪಿಸಿಕೊಂಡಿದ್ದೇವೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ.. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಪ್ಪು ಮಗಳು ಧೃತಿ ! ಈ ಬಗ್ಗೆ ತಾಯಿ ಅಶ್ವಿನಿ ಹೇಳಿದ್ದೇನು ? ಶಾಕಿಂಗ್

ನಾವು ಇದುವರೆಗೂ ಕೂಡ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸದೆ ಸೆಮಿಫೈನಲ್ ವರೆಗೂ ಬಂದಿದ್ದೇವೆ. ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಸೆಮಿಫೈನಲ್ ಆಗಿರುವುದಿಲ್ಲ, ನಮ್ಮ ತಂಡದ ನಿಜವಾದ ಸಾಮರ್ಥ್ಯ ಏನು ಎನ್ನುವುದನ್ನು ನಾವು ಆಡಿ ತೋರಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಯಾವ ತಂಡದವರು ಕೂಡ ಅತ್ಯಂತ ಬಲಿಷ್ಠ ವಾಗಿರುವ ಭಾರತ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ನಾವು ಸಹ ಜವಾಬ್ದಾರಿಯುತವಾಗಿ ಭಾರತದಂತಹ ಬಲಿಷ್ಠ ತಂಡವನ್ನು ಸೋಲಿಸುವುದಕ್ಕೆ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ನಾವು ಅದರ ಕಡೆಗೆ ಗಮನಹರಿಸುತ್ತೇವೆ. ಈ ಪಂದ್ಯವನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಬೆನ್ ಸ್ಟೋಕ್ಸ್ ಹೇಳಿದ್ದಾರೆ. ಇದನ್ನು ಓದಿ.. ಒಂದಲ್ಲ ಎರಡಲ್ಲ 10 ವರ್ಷ ನಂತರ ಚಂದ್ರಗ್ರಹಣದಲ್ಲಿ 5 ಗ್ರಹ ಸ್ಥಾನ ಪಲ್ಲಟ. ಈ 3 ರಾಶಿಗೆ ಸಾಕು ಸಾಕು ಎನ್ನುವಷ್ಟು ಅದೃಷ್ಟ. ಯಾರಿಗೆ ಗೊತ್ತೇ??