ಒಂದಲ್ಲ ಎರಡಲ್ಲ 10 ವರ್ಷ ನಂತರ ಚಂದ್ರಗ್ರಹಣದಲ್ಲಿ 5 ಗ್ರಹ ಸ್ಥಾನ ಪಲ್ಲಟ. ಈ 3 ರಾಶಿಗೆ ಸಾಕು ಸಾಕು ಎನ್ನುವಷ್ಟು ಅದೃಷ್ಟ. ಯಾರಿಗೆ ಗೊತ್ತೇ??

148

ಇಂದು ಚಂದ್ರ ಗ್ರಹಣ ಸಂಭವಿಸಲಿದ್ದು, ದೇಶದ ವಿವಿಧ ಭಾಗಗಳಲ್ಲಿ ಗ್ರಹಣ ಕಂಡು ಬರಲಿದೆ. ಅಲ್ಲದೆ ಈ ಗ್ರಹಣವು ಈ ವರ್ಷದ ಕೊನೆಯ ಗ್ರಹಣವಾಗಿದ್ದು ಗ್ರಹಣದ ಸೂತಕವೂ ಸಹ ಮಾನ್ಯಗೊಂಡಿದೆ. ಈ ಗ್ರಹಣದ ನಂತರ 5 ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸುತ್ತಿದ್ದು, ದಶಕದ ನಂತರ ಇಂತಹ ದೊಡ್ಡ ಬದಲಾವಣೆ ಸಂಭವಿಸುತ್ತಿದೆ. ಈ ರೀತಿಯ ಎಲ್ಲ ಗ್ರಹಗಳ ಸಂಕ್ರಮಣವು ಮತ್ತು ವಿಶಿಷ್ಟ ಸಂಯೋಜನೆಯ ಪರಿಣಾಮ ಎಲ್ಲಾ 12 ರಾಶಿ ಚಕ್ರದ ಜನರ ಮೇಲೆ ನೇರ ಪ್ರಭಾವವನ್ನು ಬೀರುತ್ತದೆ. ಇಂದಿನ ಚಂದ್ರ ಗ್ರಹಣದ ನಂತರ ನವೆಂಬರ್ 11ರಂದು ಸಂಪತ್ತು ಮತ್ತು ಹಣದ ದೇವತೆಯೆಂದು ಪರಿಗಣಿತವಾದ ಶುಕ್ರ ಗ್ರಹವು ತನ್ನ ರಾಶಿ ಚಕ್ರ ಬದಲಾಯಿಸಲಿದೆ. ಈ ರೀತಿಯ ಶುಕ್ರನ ರಾಶಿ ಸಂಚಾರದಿಂದಾಗಿ ಜನರ ಮೇಲೆ ಸುಖ, ವಿವಾಹ, ಉದ್ಯೋಗ, ಸಂಪತ್ತು ಹೀಗೆ ಅನೇಕ ಅಂಶಗಳ ಮೇಲೆ ಪರಿಣಾಮ ಬೀರಲಿದೆ.

ನವೆಂಬರ್ 13ರಂದು ಮಂಗಳ ಮತ್ತು ಬುಧ ಗ್ರಹಗಳು ಸಹ ತಮ್ಮ ಸ್ಥಾನವನ್ನು ಬದಲಿಸಿಕೊಳ್ಳಲಿವೆ. ಈ ವೇಳೆ ಮಂಗಳ ಗ್ರಹವು ಇಮ್ಮುಖ ಚಲನೆಯಲ್ಲಿ ಸಾಗಲಿದ್ದು, ವೃಷಭ ರಾಶಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗಲಿದೆ. ಇನ್ನು ಬುಧ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತದೆ. ನವೆಂಬರ್ 16ರಂದು ಸೂರ್ಯನೂ ತನ್ನ ರಾಶಿ ಬದಲಾಯಿಸಲಿದ್ದು, ಗ್ರಹಗಳ ರಾಜನೆಂದೇ ಪರಿಗಣಿತನಾದ ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಸಂಚರಿಸಲಿದ್ದಾನೆ. ಚಂದ್ರ ಗ್ರಹಣದ ನಂತರ ಆಗುತ್ತಿರುವ ಸೂರ್ಯನ ಈ ರಾಶಿ ಸಂಚಾರದಿಂದಾಗಿ ಒಳ್ಳೆಯ ಫಲಗಳೇ ಲಭಿಸಲಿವೆ. ಕೆಲಸದಲ್ಲಿ ಒಳ್ಳೆಯ ಲಾಭ, ಹೆಸರು, ಪ್ರಗತಿ ಸಿಗಲಿದೆ. ನವೆಂಬರ್ 23ರಂದು ಗುರು ಗ್ರಹವು ನೇರ ನಡೆ ಆರಂಭಿಸಲಿದೆ. ಗುರು ಗ್ರಹದ ಈ ನೇರ ನಡೆಯ ಪ್ರಭಾವದಿಂದಾಗಿ ಅನೇಕ ರಾಶಿಗಳು ಒಳ್ಳೆಯ ಅದೃಷ್ಟ ಫಲಗಳನ್ನು ಪಡೆಯಲಿವೆ.

ಜ್ಯೋತಿಷ್ಯ ಶಾಸ್ತ್ರವೇ ಹೇಳುವಂತೆ ಚಂದ್ರಗ್ರಹಣ ಮತ್ತು ನಂತರದ ಕೆಲವು ಗ್ರಹಗಳ ಸಂಕ್ರಮಣದಿಂದಾಗಿ ಹಲವು ರಾಶಿ ಚಕ್ರಗಳ ಜನರ ಮೇಲೆ ಒಳ್ಳೆಯ ಪರಿಣಾಮ ಬೀರುವುದಲ್ಲದೆ, ಅವರು ಅದೃಷ್ಟದ ಬಲಗಳನ್ನು ಅನುಭವಿಸಲಿದ್ದಾರೆ. ಆದರೆ ಇದೇ ವೇಳೆ ಈ ಬದಲಾವಣೆಗಳು ಕೆಲವು ರಾಶಿಯವರ ಮೇಲೆ ಅಶುಭ ಫಲಗಳನ್ನು ನೀಡಲಿದೆ. ಚಂದ್ರಗ್ರಹಣ ಮತ್ತು ನಂತರದ ಗ್ರಹಗಳ ಚಲನೆಯು ಮಿಥುನ, ವೃಶ್ಚಿಕ, ಕುಂಭ ರಾಶಿಯವರಿಗೆ ಶುಭ ಫಲಗಳನ್ನು ಹೊತ್ತು ತರಲಿದೆ. ಆದರೆ ಉಳಿದ ರಾಶಿಯವರು ಈ ಅವಧಿಯಲ್ಲಿ ಅತ್ಯಂತ ಜಾಗರೂಕರಾಗಿರುವುದು ಒಳ್ಳೆಯದು ಎನ್ನುತ್ತದೆ ಜ್ಯೋತಿಷ್ಯ.