ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಪ್ಪು ಮಗಳು ಧೃತಿ ! ಈ ಬಗ್ಗೆ ತಾಯಿ ಅಶ್ವಿನಿ ಹೇಳಿದ್ದೇನು ? ಶಾಕಿಂಗ್

172

ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ಧೃತಿ. ಎಲ್ಲರಿಗೂ ಗೊತ್ತಿರುವ ಹಾಗೆ ಅವರು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದರ ಬಗ್ಗೆ ಮಾತನಾಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿದೆ. ಪುನೀತ್ ರಾಜಕುಮಾರ್ ನಮ್ಮನೆಲ್ಲ ಆಗಲಿ ಈಗಾಗಲೇ ಒಂದು ವರ್ಷಕ್ಕೂ ಹೆಚ್ಚಾಗಿದೆ. ಹೀಗಿದ್ದರೂ ಕೇವಲ ಸಿನಿಮಾ ಮಾತ್ರವಲ್ಲದೆ ಅವರ ಸರಳ ವ್ಯಕ್ತಿತ್ವ, ಸಮಾಜಸೇವೆಯಿಂದ ಅವರು ಇಂದಿಗೂ ಎಲ್ಲರ ನೆನಪಿನಲ್ಲಿದ್ದಾರೆ. ಅವರೆಂದರೆ ಎಲ್ಲರಿಗೂ ಅಪಾರವಾದ ಗೌರವ, ಪ್ರೀತಿಯ ಭಾವನೆ. ಪುನೀತ್ ಮತ್ತು ಅಶ್ವಿನಿ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳು ಧೃತಿ ಮತ್ತು ಕಿರಿಯ ಪುತ್ರಿ ವಂದಿತ. ಧೃತಿ ವಿದೇಶದಲ್ಲಿ ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವುದರ ಬಗ್ಗೆ ಅಚ್ಚರಿಯ ಮಾತುಗಳನ್ನು ಹೇಳಿದ್ದಾರೆ.

ದೃತಿಯವರು ವಿದೇಶದಲ್ಲಿ ಉನ್ನತ ವ್ಯಾಸಂಗದಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ಪರೀಕ್ಷೆಯೊಂದನ್ನು ಬರೆದು ಅದರಲ್ಲಿ ಉತ್ತೀರ್ಣರಾಗಿ, ಸ್ಕಾಲರ್ಶಿಪ್ ಪಡೆಯುತ್ತಾ ಅವರು ವಿದೇಶದಲ್ಲಿ ಓದುತ್ತಿದ್ದಾರೆ. ಮನೆಯವರಿಂದ ಓದಿಗಾಗಿ ಒಂದು ರೂ ಹಣವನ್ನು ಪಡೆಯದೆ ಅವರು ತಮ್ಮ ಸ್ವಂತ ಪರಿಶ್ರಮ ಮತ್ತು ಪ್ರತಿಭೆಯಿಂದಾಗಿ ಸ್ಕಾಲರ್ಶಿಪ್ ಹಣದಲ್ಲಿ ತಮ್ಮ ವ್ಯಾಸಂಗ ನಡೆಸುತ್ತಿದ್ದಾರೆ. ಪುನೀತ್ ಅವರು ತೀರಿಕೊಂಡಾಗಲೂ ಅವರು ವಿದೇಶದಲ್ಲಿಯೇ ಇದ್ದರು. ಈ ಆಘಾತದ ಸುದ್ದಿ ಕೇಳಿ ಅವರು ಅಲ್ಲಿಂದ ಕರ್ನಾಟಕಕ್ಕೆ ಬಂದಿದ್ದರು. ತಂದೆಯ ಕಾರ್ಯ ಮುಗಿಸಿ ಮತ್ತೆ ಅವರು ವಿದೇಶಕ್ಕೆ ಮರಳಿದ್ದರು. ಇನ್ನು ಒಂದು ವರ್ಷದಲ್ಲಿ ಅವರ ಓದು ಮುಗಿಯಲಿದ್ದು ನಂತರ ಭಾರತಕ್ಕೆ ಮರಳಲಿದ್ದಾರೆ. ಈ ಕಾರಣಕ್ಕಾಗಿ ಅವರು ಚಿತ್ರರಂಗಕ್ಕೆ ಪ್ರವೇಶಿಸುವುದಕ್ಕೆ ಸಂಬಂಧಪಟ್ಟಂತೆ ಅವರ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ಇನ್ನು ಒಂದು ವರ್ಷಕ್ಕೆ ಧೃತಿ ಅವರ ವ್ಯಾಸಂಗ ಮುಗಿಯಲಿದೆ. ಮುಂದಿನ ವರ್ಷ ಅವರು ತಮ್ಮ ಓದನ್ನು ಮುಗಿಸಿ ಭಾರತಕ್ಕೆ ಮರಳಲ್ಲಿದ್ದಾರೆ. ನಂತರ ಅವರು ಏನು ಮಾಡಲಿದ್ದಾರೆ ಎನ್ನುವ ಪ್ರಶ್ನೆಗೆ ಸ್ವತಹ ಅವರೇ ಉತ್ತರಿಸಿದ್ದಾರೆ. ನನಗೆ ಚಿತ್ರದ ನಿರ್ಮಾಣ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಇದೆ. ಅಜ್ಜಿಯ ಹಾಗೆ ತಂದೆಯ ಹಾಗೆ ನನಗೆ ನಿರ್ಮಾಪಕಿಯಾಗುವ ಕನಸು ಇದೆ. ತಂದೆಯವರ ದೊಡ್ಡ ಕನಸಾದ ಪಿ ಆರ್ ಕೆ ಪ್ರೊಡಕ್ಷನ್ ಅಲ್ಲಿ ಕೆಲಸ ಮಾಡಲು ನನಗೆ ಇಷ್ಟವಿದೆ. ಹಾಗಾಗಿ ವ್ಯಾಸಂಗ ಮುಗಿಸಿದ ನಂತರ ನಾನು ಚಿತ್ರ ನಿರ್ಮಾಣ ಕಾರ್ಯದಲ್ಲಿ ಪಿ ಆರ್ ಕೆ ಪ್ರೊಡಕ್ಷನ್ ಗೆ ಸಹಕಾರಿಯಾಗುವ ಬಯಕೆ ಇದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಕುರಿತಾಗಿ ಅಶ್ವಿನಿ ಪುನೀತ್ ಅವರು ಏನು ಹೇಳುತ್ತಾರೋ ಕಾದು ನೋಡಬೇಕಿದೆ. ಮಗಳನ್ನು ಅವರು ಚಿತ್ರರಂಗಕ್ಕೆ ಕರೆದು ತರುವರೊ ಅಥವಾ ಅವರು ಶೈಕ್ಷಣಿಕವಾಗಿ ಮುಂದುವರೆಯಲು ಇಚ್ಚಿಸುವರೋ ಕಾದು ನೋಡಬೇಕಿದೆ.