ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ಯಾರು ಮಾಡಿರದ ದಾಖಲೆ ಮಾಡಿ ಹೊರಬಂದ ಸಾನಿಯಾ. ಏನು ಗೊತ್ತೇ??

296

ಬಿಗ್ ಬಾಸ್ ನಲ್ಲಿ ಈ ವಾರ ಸಾನ್ಯಾ ಅಯ್ಯರ್ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರ ಸಾಕಷ್ಟು ಟಫ್ ಕಂಟೆಸ್ಟೆಂಟ್ಗಳು ನಾಮಿನೇಟ್ ಆಗಿದ್ದರು. ಅವರ ಪೈಕಿ ಮನೆಯಿಂದ ಸಾನ್ಯಾ ಔಟ್ ಆಗಿದ್ದಾರೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸಾನಿಯಾ ಅಯ್ಯರ್ ಮನೆಯಿಂದ ಹೊರ ಬಿದ್ದಿದ್ದಾರೆ. ಮನೆಯಿಂದ ಹೊರ ಹೋಗುವ ಮೊದಲು ಅವರಿಗೆ ಬಿಗ್ ಬಾಸ್ ಒಂದು ವಿಶೇಷ ಆಫರ್ ನೀಡಿದೆ. ಇದುವರೆಗೆ ಬಿಗ್ ಬಾಸ್ನ ಎಲ್ಲ ಸೀಸನ್ಗಳ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಇಂತಹದೊಂದು ಅವಕಾಶವನ್ನು ಸಾನಿಯಾ ಅವರಿಗೆ ನೀಡಲಾಗಿದೆ. ಒಂದು ಹೊಸ ದಾಖಲೆಗೆ ಸಾನಿಯಾ ಕಾರಣರಾಗಿದ್ದಾರೆ. ಸಾನಿಯಾ ಕಿರುತೆರೆಗೆ ಬಾಲಕಲಾವಿದೆಯಾಗಿ ಪ್ರವೇಶಿಸಿದರು. ಅತ್ಯಂತ ಜನಪ್ರಿಯ ಧಾರವಾಹಿ ಆದ ಪುಟ್ಟಗೌರಿ ಮದುವೆಯಲ್ಲಿ ಪುಟ್ಟಗೌರಿಯಾಗಿ ಅವರು ಕಾಣಿಸಿಕೊಂಡಿದ್ದರು. ಆ ದಾರವಾಹಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು.

ಆನಂತರ ಕೊಂಚ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದ ಅವರು ಕಲರ್ಸ್ ಕನ್ನಡದಲ್ಲಿ ಇತ್ತೀಚಿಗೆ ಪ್ರಸಾರವಾದ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದರು. ನಟನೆಯ ಮೂಲಕ ಹೆಸರಾಗಿದ್ದ ಅವರು ತಮ್ಮ ಡ್ಯಾನ್ಸ್ ಮೂಲಕ ಜನರಿಗೆ ಇಷ್ಟವಾದರು. ಆನಂತರ ಅವರು ಬಿಗ್ ಬಾಸ್ ಓಟಿಟಿ ಸೀಸನ್ಗೆ ಕಾಲಿಟ್ಟರು. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಒಟ್ಟಿಟಿ ಅನ್ನು ಪ್ರಸಾರ ಮಾಡಲಾಗಿತ್ತು. ಈ ಸೀಸನ್ ನಲ್ಲಿ ಟಾಪ್ ಫೋರ್ ಸ್ಪರ್ಧಿಯಾಗಿದ್ದ ಸಾನಿಯಾ ನಂತರ ಬಿಗ್ ಬಾಸ್ ಟಿವಿ ಸೀಸನ್ಗೆ ಆಯ್ಕೆಯಾದರು. ಇಷ್ಟು ದಿನಗಳ ಕಾಲ ಟಿ ವಿ ಸೀಸನ್ನಲ್ಲೂ ಅವರು ಮಿಂಚುತ್ತಿದ್ದರು. ಈ ನಡುವೆ ಅವರು ರೂಪೇಶ್ ಶೆಟ್ಟಿ ಅವರ ಜೊತೆಗೆ ಗುರುತಿಸಿಕೊಂಡಿದ್ದರು. ಇದೀಗ ಸಾನಿಯಾ ಮನೆಯಿಂದ ಹೊರ ಬಂದಿದ್ದಾರೆ. ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ಸಾನಿಯಾ ಅವರನ್ನು ಔಟ್ ಮಾಡಿದೆ.

ಬಿಗ್ ಬಾಸ್ ಅವರಿಗೆ ಒಂದು ವಿಶೇಷ ಅವಕಾಶ ನೀಡಿತ್ತು ಎಂದು ಹೇಳಲಾಗುತ್ತಿದೆ. ಅದರಂತೆ ಸಾನಿಯಾ ಅವರು ಇಬ್ಬರೂ ಕಂಟೆಸ್ಟೆಂಟ್ಗಳನ್ನು ನೇರವಾಗಿ ನಾಮಿನೇಟ್ ಮಾಡುವ ಆಫರ್ ನೀಡಲಾಗಿದೆ. ಇದುವರೆಗೆ ಎಲ್ಲಾ ಸೀಸನ್ ನಲ್ಲಿ ಎಲಿಮಿನೇಟ್ ಆಗುವ ಸ್ಪರ್ಧಿಗೆ ಯಾರಾದ್ರೂ ಒಬ್ಬ ಸ್ಪರ್ಧಿಯನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವನ್ನು ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಸಾನಿಯಾ ಅವರಿಗೆ ಇಬ್ಬರು ಕಂಟೆಸ್ಟೆಂಟ್ಗಳನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶ ನೀಡಲಾಗಿದೆಯಂತೆ. ಇದರಂತೆ ಅವರು ಆರ್ಯವರ್ಧನ್ ಗುರೂಜಿಯವರನ್ನು ನಾಮಿನೇಟ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದರ ಜೊತೆಗೆ ಪ್ರಶಾಂತ್ ಸಂಬರಗಿ ಈ ವಾರದ ಕ್ಯಾಪ್ಟನ್ ಆಗಿದ್ದಾರೆ, ಅವರನ್ನು ನಾಮಿನೇಟ್ ಮಾಡುವ ಹಾಗಿಲ್ಲ. ಜೊತೆಗೆ ವಿನೋದ್ ಗೊಬ್ಬರಗಾಲ ಅವರಿಗೆ ಸಿಕ್ಕ ವಿಶೇಷ ಆಫರ್ ನಿಂದಾಗಿ ಅವರು ಕಾವ್ಯಶ್ರೀ ಅವರನ್ನು ನಾಮಿನೇಟ್ ನಿಂದ ಉಳಿಸಿದ್ದಾರೆ. ಹಾಗಾಗಿ ಅವರನ್ನು ನೇರವಾಗಿ ನಾಮಿನೇಟ್ ಮಾಡಲಾಗುವುದಿಲ್ಲ. ಇಬ್ಬರು ಸ್ಪರ್ಧಿಗಳನ್ನು ಬಿಟ್ಟು ದೀಪಿಕಾ, ಅಮೂಲ್ಯ ಅವರನ್ನು ಕೂಡ ನೇರ ನಾಮಿನೇಟ್ ಮಾಡುವ ಸಾಧ್ಯತೆ ಹೆಚ್ಚಾಗಿದೆ.