ದಿಡೀರ್ ಎಂದು ಗಂಧದ ಗುಡಿ ಟಿಕೆಟ್ ದರ ಕಡಿಮೆ ಮಾಡಿದ ಅಶ್ವಿನಿ ಪುನೀತ್. ಕಾರಣವೇನು ಗೊತ್ತೇ? ಬೇರೆ ಆಯ್ಕೆ ಇಲ್ಲದೆ. ಹೀಗೆ ಮಾಡಿದ್ರ?

165

ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಚಿತ್ರ ಈಗಾಗಲೇ ತೆರೆದುಕೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದ ಪ್ರಾಕೃತಿಕ ಸಂಪತ್ತನ್ನು ಸೆರೆ ಹಿಡಿಯುವಲ್ಲಿ ಈ ಚಿತ್ರ ಯಶಸ್ವಿಯಾಗಿದೆ. ಇದೊಂದು ಬಗೆಯ ಡಾಕ್ಯುಮೆಂಟರಿ ಚಿತ್ರವಾಗಿದ್ದು ಕರ್ನಾಟಕದ ವಿವಿಧ ಸ್ಥಳಗಳಿಗೆ ಸ್ವತಃ ಪುನೀತ್ ಅವರೇ ಪ್ರವಾಸ ಕೈಗೊಂಡು ಅಲ್ಲಿನ ದೃಶ್ಯ ವೈಭವವನ್ನು ನಮ್ಮ ಮುಂದೆ ತಂದಿರಿಸಿದ್ದಾರೆ. ಹೀಗೆ ಭರ್ಜರಿ ಪ್ರದರ್ಶನ ಕಾಣುತ್ತಾ ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವ ಗಂಧದಗುಡಿ ಚಿತ್ರದ ಕುರಿತಾಗಿ ಇದೀಗ ಪುನೀತ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಒಂದು ಅಚ್ಚರಿಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಅಚ್ಚರಿಯ ನಿರ್ಧಾರದ ಬಗ್ಗೆ ಅವರು ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಪಡಿಸಿದ್ದಾರೆ.

ಗಂಧದಗುಡಿ ಸಿನಿಮಾ ಪುನೀತ್ ಅವರ ಒಂದು ರೀತಿಯ ಡ್ರೀಮ್ ಪ್ರಾಜೆಕ್ಟ್ ಅಂತಾನೆ ಹೇಳಬಹುದು. ಈ ಚಿತ್ರಕ್ಕಾಗಿ ಅವರು ಬಹಳಷ್ಟು ಶ್ರಮವಹಿಸಿದ್ದರು ಮತ್ತು ಅತ್ಯಂತ ಪ್ರೀತಿಯಿಂದ ಈ ಚಿತ್ರವನ್ನು ತಯಾರಿಸಿದ್ದರು. ಈಗಾಗಲೇ ಗಂಧದಗುಡಿ ಹೆಸರಿನಲ್ಲಿ ಡಾಕ್ಟರ್ ರಾಜಕುಮಾರ್ ಮತ್ತು ಅದರ ಎರಡನೆಯ ಭಾಗದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದರು. ಇದು ಆ ಚಿತ್ರಗಳ ಮುಂದುವರಿದ ಭಾಗ ಅಲ್ಲವಾದರೂ ಇಡೀ ಕರ್ನಾಟಕದ ವನ್ಯ ಸಂಪತ್ತು, ಪ್ರಾಣಿ ಸಂಪತ್ತು, ಪ್ರವಾಸಿ ಸ್ಥಳಗಳನ್ನು ಇಡೀ ಪ್ರಕೃತಿ ಸಂಪತ್ತನ್ನು ಸೇರೆಹಿಡಿಯುವುದು ಈ ಚಿತ್ರದ ಉದ್ದೇಶವಾಗಿದೆ. ಆ ಮೂಲಕ ಅದೆಲ್ಲವನ್ನು ಕನ್ನಡಿಗರಿಗೆ ಪರಿಚಯಿಸುವ ಆಶಯವನ್ನು ಹೊಂದಿದೆ ಗಂಧದ ಗುಡಿ ಚಿತ್ರ. ಇದೀಗ ಅಶ್ವಿನಿ ಅವರು ಗಂಧದಗುಡಿ ಚಿತ್ರದ ಪ್ರದರ್ಶನದ ವಿಷಯವಾಗಿ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಚಿತ್ರ ಪ್ರದರ್ಶನದ ವಿಷಯವಾಗಿ ಅತ್ಯಂತ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ಅವರು ಇದರ ಕುರಿತು ಟ್ವಿಟರ್, ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರ ಕುರಿತಾಗಿ ಬಹಿರಂಗ ಪತ್ರ ಬರೆದಿರುವ ಅವರು – “ಪುನೀತ್ ಅವರಿಗೆ ವನ್ಯಜೀವಿ ಸಂಪತ್ತು, ಪ್ರಾಣಿ ಸಂಪತ್ತು ಎಂದರೆ ಅಪಾರ ಪ್ರೀತಿ. ಹಾಗಾಗಿ ಗಂಧದಗುಡಿ ಚಿತ್ರದಲ್ಲಿ ಭಾಗಿಯಾದರು. ಈ ಚಿತ್ರವನ್ನು ಇಡೀ ಕರ್ನಾಟಕದ ಪ್ರತಿಯೊಬ್ಬರು ನೋಡಬೇಕು ಎಂಬುದು ಅವರ ಕನಸಾಗಿತ್ತು. ಮಕ್ಕಳು ಸಹ ಈ ಚಿತ್ರವನ್ನು ನೋಡಿ ಕರ್ನಾಟಕವನ್ನು ಕಣ್ತುಂಬಿಕೊಳ್ಳಬೇಕು ಎಂದು ಬಯಸಿದ್ದರು. ಇದೇ ಕಾರಣಕ್ಕಾಗಿ ಇಡೀ ಕುಟುಂಬ, ಮನೆ ಮಂದಿ ಮತ್ತು ಮಕ್ಕಳೆಲ್ಲರೂ ಈ ಚಿತ್ರವನ್ನು ನೋಡಲಿ ಎನ್ನುವ ಕಾರಣಕ್ಕಾಗಿ ಅಕ್ಟೋಬರ್ 7 ರಿಂದ 10ರವರೆಗೆ (October 7 – 10) ಒಟ್ಟು ನಾಲ್ಕು ದಿನಗಳ ಕಾಲ ಬಾರಿ ರಿಯಾಯಿತಿಯಲ್ಲಿ ಕಡಿಮೆ ಬೆಲೆಯಲ್ಲಿ ಚಿತ್ರದ ಟಿಕೆಟ್ ನೀಡಲಾಗುತ್ತದೆ” ಎಂದು ಅವರು ಘೋಷಿಸಿದ್ದಾರೆ. ಅದರಂತೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ 56 ರೂಪಾಯಿ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ 112 ರೂಪಾಯಿಗಳಿಗೆ ಈ ನಾಲ್ಕು ದಿನಗಳಲ್ಲಿ ಚಿತ್ರ ವೀಕ್ಷಸಬಹುದಾಗಿದೆ. ಇಂತಹದೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಶ್ವಿನಿ ರವರು ಮತ್ತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.