ಉಪೇಂದ್ರ ಹಾಗೂ ಸುದೀಪ್ ಕಬ್ಜ ನೋಡಿ ಗಡಗಡ ನಡುಗುತ್ತಿರುವ ಬಾಲಿವುಡ್ ಸ್ಟಾರ್ ಗಳು, ಏನಾಯ್ತು ಗೊತ್ತೇ??

61

ಒಂದು ಕಾಲದಲ್ಲಿ ಇಡೀ ಚಿತ್ರರಂಗವನ್ನೇ ಆಳಿದ ಬಾಲಿವುಡ್ ಇದೀಗ ಕನ್ನಡ ಚಿತ್ರಗಳಿಗೆ ಹೆದರಿ ಮೂಲೆಗುಂಪಾಗಿದೆ. ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಬೆದರಿ ಹೋಗಿದೆ. ಒಂದಾದ ಮೇಲೊಂದು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡ ಸಿನಿಮಾ ರಂಗ ನೀಡುತ್ತಿದೆ. ಬಾಲಿವುಡ್ ನಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾ ಕೂಡ ಸೋಲುತ್ತಿವೆ. ಕನ್ನಡದ ಸಿನಿಮಾಗಳು ಮಾಡುತ್ತಿರುವ ಅಬ್ಬರದ ಕಲೆಕ್ಷನ್ ನೋಡಿ ಬಾಲಿವುಡ್ ನ ದೊಡ್ಡ ದೊಡ್ಡ ಹೀರೋಗಳು ಭಯಭೀತರಾಗಿದ್ದಾರೆ. ಕನ್ನಡ ಚಿತ್ರರಂಗ ಎಂದೆಂದೂ ಕಾಣದ ಶ್ರೀಮಂತಿಕೆ ಮೆರೆಯುತ್ತಿರುವುದು ಇದೀಗ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಹೀರೋಗಳಿಗೆ ಆತಂಕ ಹುಟ್ಟಿಸಿದೆ. ಈಗಾಗಲೇ ಕನ್ನಡ ಚಿತ್ರರಂಗ ನಿರಂತರವಾಗಿ ಪ್ಯಾನ್ ಇಂಡಿಯಾ ಮಟ್ಟದ ಯಶಸ್ವಿ ಚಿತ್ರಗಳನ್ನು ನೀಡುತ್ತಿದೆ. ಉಪೇಂದ್ರ ನಟನೆಯ ಕಬ್ಜಾ ಸಿನಿಮಾ ಬಾಲಿವುಡ್ ನ ಸಿನಿಮಾಗಳನ್ನು ಮೀರಿಸಲಿದೆ ಎನ್ನುವ ಕಾರಣಕ್ಕೆ ಬಾಲಿವುಡ್ ನ ಹೀರೋಗಳು ಇದೀಗ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಕೆಜಿಎಫ್ ಸಿನಿಮಾದ ಮೂಲಕ ಶುರುವಾದ ಕನ್ನಡ ಚಿತ್ರರಂಗದ ಅಬ್ಬರದ ಗಳಿಕೆಯ ದಾಖಲೆಗಳು ಇನ್ನು ಮುಂದುವರೆಯುತ್ತಿದೆ. ಬಾಲಿವುಡ್ ನ ದಾಖಲೆಗಳನ್ನು ಧೂಳಿಪಟ ಮಾಡಿದ್ದ ಕೆಜಿಎಫ್ ಸಿನಿಮಾ ಹೊಸ ಚರಿತ್ರೆ ಸೃಷ್ಟಿಸಿತ್ತು. ಕೆಜಿಎಫ್ 2 ಕೂಡ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿತ್ತು. ಬಾಲಿವುಡ್ ನ ಹೀರೋಗಳು ಯಶ್ ಸಿನಿಮಾ ಗೆ ನಾಚಿಕೊಂಡಿದ್ದರು. ಇದೀಗ ಯಾರೂ ಊಹಿಸದ ಮಟ್ಟಿಗೆ ಕಾಂತಾರ ಇಡೀ ಭಾರತೀಯ ಚಿತ್ರರಂಗವನ್ನೇ ನಡುಗಿಸುತ್ತಿದೆ. ಹಳೆಯ ದಾಖಲೆಗಳನ್ನು ಧೂಳಿಪಟ ಮಾಡಿ ಇಂದಿಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇನ್ನು ಉಪೇಂದ್ರ ಅವರ ನಟನೆಯ ಕಬ್ಜಾ ಸಿನಿಮಾ ಇದೇ ದಾರಿಯಲ್ಲಿ ಬರಲಿದೆ. ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾದ ಈ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದೀಗ ಈ ಸಿನಿಮಾ ಬಾಲಿವುಡ್ ನ ದೊಡ್ಡ ದೊಡ್ಡ ಹೀರೋಗಳಿಗೆ ಭಯ ಹುಟ್ಟಿಸುತ್ತಿದೆ.

ಬಾಲಿವುಡ್ ನ ಖ್ಯಾತ ಸಿನಿಮಾ ವಿಮರ್ಶಕರು ಈ ಚಿತ್ರ ಯಾವಾಗ ಬಿಡುಗಡೆಗೊಳ್ಳುತ್ತದೆ ಎಂದು ಕೇಳಿದ್ದಾರೆ. ಕಬ್ಜಾ ಸಿನಿಮಾ ಬಿಡುಗಡೆಯಾಗುವ ದಿನಾಂಕ ಗೊತ್ತಾದರೆ ಬಾಲಿವುಡ್ ಚಿತ್ರಗಳ ದಿನಾಂಕವನ್ನು ನಿಗದಿ ಮಾಡಿಕೊಳ್ಳಲು ಅವರಿಗೆ ಅನುಕೂಲವಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ. ದೊಡ್ಡ ದೊಡ್ಡ ಹೀರೋಗಳು ಕೂಡ ಈಗ ಕನ್ನಡ ಇಂಡಸ್ಟ್ರಿ ಹೆಸರು ಕೇಳಿದರೆ ಹೆದರಿ ನಡುಗುವಂತಾಗಿದೆ. ಅವರ ಕೈಲಂತೂ ಇದೀಗ ಒಳ್ಳೆಯ ಸಿನಿಮಾಗಳನ್ನು ನಿರ್ಮಿಸಲಾಗುತ್ತಿಲ್ಲ. ಎಂತಹ ಸ್ಟಾರ್ ನಟರೇ ಇರಲಿ, ಎಷ್ಟು ಸಾವಿರ ಕೋಟಿ ಬಜೆಟ್ಟಿರಲಿ ಸಿನಿಮಾ ನೆಲಕಚ್ಚುತ್ತಿವೆ. ಆದರೆ ಕನ್ನಡದ ಸಿನಿಮಾಗಳು ಭಾರತದಾದ್ಯಂತ ಕೋಟಿ ಕೋಟಿ ಬಾಚುತ್ತಿದೆ. ಈ ಕಾರಣಕ್ಕಾಗಿ ಕಬ್ಜಾ ಸಿನಿಮಾ ಯಾವಾಗ ತೆರೆ ಕಾಣಲಿದೆ ಎನ್ನುವ ಆತಂಕ ಬಾಲಿವುಡ್ ಗೆ ಎದುರಾಗಿದೆ. ತಮ್ಮ ಚಿತ್ರವನ್ನು ಅದಕ್ಕಿಂತಲೂ ಮೊದಲೇ ಬಿಡುಗಡೆ ಅಥವಾ ಆ ಚಿತ್ರದ ಬಿಡುಗಡೆಗಿಂತಲೂ ಸಾಕಷ್ಟು ದಿನಗಳ ನಂತರ ಬಿಡುಗಡೆ ಮಾಡುವ ಲೆಕ್ಕಚಾರ ಬಾಲಿವುಡ್ನದು. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಎಂದೆಂದೂ ಕಾಣದ ಶ್ರೀಮಂತ ಚರಿತ್ರೆಯನ್ನು ಸೃಷ್ಟಿಸುತ್ತಿದೆ.