Gandhadagudi: ಗಂಧದ ಗುಡಿ ಸಿನಿಮಾ ಕಲೆಕ್ಷನ್ ಮಾಡಿದ ಹಣವನ್ನು ಏನು ಮಾಡುತ್ತಾರಂತೆ ಗೊತ್ತೇ?? ಗಟ್ಟಿ ನಿರ್ಧಾರ ತೆಗೆದುಕೊಂಡ ಅಶ್ವಿನಿ.

74

Gandhadagudi: ಪುನೀತ್ ರಾಜಕುಮಾರ್ (Puneeth Rajkumar) ಅವರ ಗಂಧದಗುಡಿ ಚಿತ್ರ ಇತ್ತೀಚಿಗೆ ತೆರೆ ಕಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಈ ಚಿತ್ರವು ಒಂದು ಬಗೆಯ ಡಾಕ್ಯುಮೆಂಟರಿ ಆಗಿದ್ದು ಕರ್ನಾಟಕದ ಪ್ರಾಕೃತಿಕ ವೈಭವವನ್ನು ತೆರೆಯ ಮೇಲೆ ತೋರಿಸಲಾಗಿದೆ. ವನ್ಯಜೀವಿ ಸಂಪತ್ತು, ಪ್ರಾಣಿ ಸಂಪತ್ತು, ಪ್ರಾಣಿ, ಪಕ್ಷಿ ಪ್ರಕೃತಿ ಹೀಗೆ ಸಾಕಷ್ಟು ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರ ಈಗಾಗಲೇ ಭರ್ಜರಿ ಗಳಿಕೆ ಕಂಡಿದೆ. ದೊಡ್ಡ ಮಟ್ಟದ ಕಲೆಕ್ಷನ್ ಮಾಡಿರುವ ಗಂಧದಗುಡಿ ಚಿತ್ರದ ಕಲೆಕ್ಷನ್ ಕುರಿತು ಮೊದಲ ಬಾರಿಗೆ ಅಶ್ವಿನಿ ಪುನೀತ್ (Ashwini Puneeth Rajkumar) ಮಾತನಾಡಿದ್ದಾರೆ. ಅಷ್ಟು ಹಣವನ್ನು ಹೇಗೆ ಖರ್ಚು ಮಾಡುವರು ಎನ್ನುವುದರ ಕುರಿತು ಅವರು ಆಶ್ಚರ್ಯ ಹೇಳಿಕೆಯನ್ನು ನೀಡಿದ್ದಾರೆ.

ಕರ್ನಾಟಕದ ವಿವಿಧ ಪ್ರಾಕೃತಿಕ ಪರಂಪರೆಯ ಸ್ಥಳಗಳಿಗೆ ಭೇಟಿ ನೀಡಿರುವ ಪುನೀತ್ ಮತ್ತು ಚಿತ್ರತಂಡ ಅಲ್ಲಿನ ದೃಶ್ಯಗಳನ್ನು ಸೆರೆಹಿಡಿದು ನಮ್ಮ ಮುಂದೆ ತಂದಿಟ್ಟಿದ್ದಾರೆ. ಪುನೀತ್ ಅವರ ಕಣ್ಣಿನ ಮೂಲಕ ಇಡೀ ಕರ್ನಾಟಕ ಗಂಧದಗುಡಿಯ ವೈಭವ ಪ್ರೇಕ್ಷಕರಿಗೆ ಕಾಣುತ್ತದೆ. ಬಿಡುಗಡೆಯಾದ ದಿನದಿಂದಲೂ ಕೂಡ ಗಂಧದಗುಡಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತದೆ. ನಮ್ಮ ರಾಜ್ಯದ ಮಟ್ಟಿಗೆ ಈ ರೀತಿಯ ಡಾಕ್ಯುಮೆಂಟರಿ ಚಿತ್ರ ಇದೇ ಮೊದಲು ಎನ್ನಬಹುದು. ಅಲ್ಲದೆ ಪುನೀತ್ ರಾಜಕುಮಾರ್ ರವರ ವ್ಯಕ್ತಿತ್ವ ಇಡೀ ರಾಜ್ಯವೇ ಮೆಚ್ಚಿಕೊಂಡಿದೆ. ಅವರ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಎಲ್ಲರೂ ಗಂಧದಗುಡಿ ಚಿತ್ರವನ್ನು ಪ್ರೀತಿಯಿಂದ ಸ್ವಾಗತಿಸಿಕೊಂಡಿದ್ದಾರೆ. ಕಲೆಕ್ಷನ್ ವಿಚಾರದಲ್ಲೂ ಈಗಾಗಲೇ ಗಂಧದಗುಡಿ ಭರ್ಜರಿ ಭೇಟೆ ಮಾಡಿದೆ. ಗಂಧದಗುಡಿ ಚಿತ್ರವು ಈಗಾಗಲೇ 23 ಕೋಟಿಗೂ ಅಧಿಕ ಗಳಿಕೆ ಕಂಡಿದೆ. ಇದೀಗ ಅಶ್ವಿನಿ ಪುನೀತ್ ಅವರು ಗಂಧದಗುಡಿ ಚಿತ್ರದಿಂದ ಬಂದ ಅಷ್ಟು ಹಣವನ್ನು ಯಾವುದಕ್ಕಾಗಿ ವಿನಯೋಗಿಸುತ್ತೇನೆ ಎನ್ನುವ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ಇದನ್ನು ಓದಿ.. ಅಪ್ಪು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದ ಝೈದ್ ಖಾನ್. ರೊಚ್ಚಿಗೆದ್ದ ಅಭಿಮಾನಿಗಳು. ಕೊಟ್ಟ ಶಾಕಿಂಗ್ ಹೇಳಿಕೆ ಏನು ಗೊತ್ತೇ??

ಪುನೀತ್ ರಾಜಕುಮಾರ್ ಅವರು ಸಾಕಷ್ಟು ಟ್ರಸ್ಟ್ ಗಳಿಗೆ ಶಾಲೆ, ಅನಾಥಾಶ್ರಮ ಹೀಗೆ ಸಾಕಷ್ಟು ಸಾಮಾಜಿಕ ಸೇವೆಗಾಗಿ ಹಣ ಖರ್ಚು ಮಾಡಿದ್ದಾರೆ. ಈ ರೀತಿ ನಿಷ್ಕಲ್ಮಶವಾಗಿ ಸಮಾಜ ಸೇವೆಗಾಗಿಯೇ ಅವರನ್ನು ಇಡೀ ದೇಶವೇ ಮೆಚ್ಚಿಕೊಂಡಿದೆ. ತಾವು ಮಾಡುತ್ತಿರುವ ಈ ಸೇವೆ ನಿಲ್ಲಬಾರದು, ಎಂತಹ ಸಂದರ್ಭದಲ್ಲೂ ಇದಕ್ಕೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ಅವರು ಮೊದಲೇ ಸಾಕಷ್ಟು ಹಣವನ್ನು ಎಫ್ ಡಿ ಮಾಡಿ ಇಟ್ಟಿದ್ದರು. ಇದೀಗ ಆ ಹಣಕ್ಕೆ ಇನ್ನಷ್ಟು ಹಣವನ್ನು ಸೇರಿಸಿ ಇಡುವುದಕ್ಕೆ ಅಶ್ವಿನಿ ಪುನೀತ್ ನಿರ್ಧರಿಸಿದ್ದಾರೆ. ಗಂಧದ ಗುಡಿಯಿಂದ ಬರುವ ಅಷ್ಟು ಲಾಭದ ಹಣವನ್ನು ಇದೇ ಎಫ್ ಡಿ ಗೆ ಸೇರಿಸಿ ಇಡಲು ಅವರು ನಿರ್ಧರಿಸಿದ್ದಾರೆ. ಹೀಗಾಗಿ ಪುನೀತ್ ಅವರ ಸಮಾಜ ಸೇವೆ ನಿಲ್ಲಬಾರದು, ಅದಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಪತಿಯ ಸಮಾಜ ಸೇವೆಯನ್ನು ಈ ರೀತಿಯಾಗಿ ಅಶ್ವಿನಿ ಪುನೀತ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಇದನ್ನು ಓದಿ.. Bigg Boss Kannada: ಭಾರಿ ಮಿಂಚುತ್ತಿರುವ ಅರುಣ್ ಸಾಗರ್ ಗೆ ಆಕೆ ಕಂಡರೆ ಇಷ್ಟ, ಆದರೆ ವಯಸ್ಸಿಗೆ ತಕ್ಕ ಹಾಗೆ ನಡುಕೊಳ್ಳುತ್ತಿಲ್ಲ ಎಂದ ನೇಹಾ ಗೌಡ. ಮಾತು ಕೇಳಿ ಎಲ್ಲರೂ ಶಾಕ್.