Bigg Boss Kannada: ಸುದೀಪ್ ಮುಂದೇನೆ, ಮಂಡಿಯೂರಿ ಕ್ಷಮಿಸಿ ಎಂದ ರೂಪೇಶ್ ರಾಜಣ್ಣ. ಇಡೀ ರಾಜ್ಯದ ಹಾಗೂ ಮನೆಯವರಿಗೆ ಕ್ಷಮೆ ಕೇಳಿದ್ದು ಯಾಕೆ ಗೊತ್ತೇ??

61

Bigg Boss Kannada: ನಿನ್ನೆ ನಡೆದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ರೂಪೇಶ್ ರಾಜಣ್ಣ (Roopesh Rajanna) ಅವರು ಕರ್ನಾಟಕದ ಮುಂದೆ ಕ್ಷಮೆ ಕೋರಿದ್ದಾರೆ. ನೆಲಕ್ಕೆ ತಲೆಬಾಗಿ ಕ್ಷಮೆ ಕೋರಿರುವ ಅವರು ಸುದೀಪ್ (Sudeep) ಮುಂದೆ, ಅನುಪಮ (Anupama Gowda) ಮತ್ತು ಪ್ರಶಾಂತ್ ಸಾಂಬರಗಿ (Prashanth Sambargi) ಅವರಿಗೂ ಕ್ಷಮೆ ಕೇಳಿದ್ದಾರೆ. ಹಾಗಿದ್ದರೆ ಕ್ಷಮಿಸುವಂಥದ್ದೇನಾಗಿತ್ತು ಎನ್ನುವುದರ ವಿವರ ಇಲ್ಲಿದೆ. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಯಶಸ್ವಿಯಾಗಿ 9ನೇ ಸೀಸನ್ ಪ್ರಸಾರವಾಗುತ್ತಿದೆ. ಈ ಸಲ ಈಗಾಗಲೇ ಕಳೆದ ಸೀಸನ್ಗಳಲ್ಲಿ ಇದ್ದ ಒಂಬತ್ತು ಸ್ಪರ್ದಿಗಳನ್ನು ಮತ್ತು ಬಿಗ್ ಬಾಸ್ ಮನೆ ಹೊಸತು ಎನ್ನುವ ಹೊಸ 9 ಸ್ಪರ್ಧಿಗಳ ನಡುವೆ ಪ್ರವೀಣರು ನವೀನರು ಎಂಬ ರೀತಿ ಕಾರ್ಯಕ್ರಮ ನಡೆಯುತ್ತಿದೆ. ಆರನೇ ವಾರಕ್ಕೆ ಕಾರ್ಯಕ್ರಮ ಕಾಲಿಟ್ಟಿದೆ. ಕಳೆದ ವಾರ ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ಒಂದನ್ನು ನೀಡಿತ್ತು.

ಅದರಂತೆ ಮನೆಯ ಗಾರ್ಡನ್ ಏರಿಯಾದಲ್ಲಿ ಒಂದು ಬಜರ್ ಇರಿಸಲಾಗಿತ್ತು. ಬಿಗ್ ಬಾಸ್ ತನಗೆ ಬೇಕಾದ ಸಮಯಕ್ಕೆ ಬಜರ್ ಸೌಂಡ್ ಮಾಡುತ್ತಿತ್ತು. ಆ ಸಮಯಕ್ಕೆ ಯಾವ ಸ್ಪರ್ದಿಗಳು ಮೊದಲು ಬಂದು ಬಜರ್ ಒತ್ತುತರೋ ಅವರಿಗೆ ಆಡುವ ಅವಕಾಶ ನೀಡಲಾಗುತ್ತಿತ್ತು. ಹೀಗೆ ಅತಿ ಹೆಚ್ಚು ಬಾರಿ ಬಜಾರ್ ಒತ್ತಿದ ಸ್ಪರ್ಧಿಗಳ ನಡುವೆ ಒಂದು ಟಾಸ್ಕ್ ನೀಡಿ ಅವರಲ್ಲಿ ಒಬ್ಬರನ್ನು ವಾರದ ಕ್ಯಾಪ್ಟನ್ ಮಾಡುವುದಾಗಿ ಬಿಗ್ ಬಾಸ್ ಘೋಷಿಸಿತ್ತು. ಆಡುವಾಗ ಬಿಗ್ ಬಾಸ್ ಸೂಚನೆಯ ಮೇರೆಗೆ ಕೆಲಸ ಸ್ಪರ್ಧಿಗಳು ಬಝರ್ ಹೊತ್ತಲು ತಾ ಮುಂದು ನಾ ಮುಂದು ಎಂದು ಓಡಿ ಬಂದರು. ಈ ನಡುವೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ ಸಂಬರಗಿ ತಾನು ಮೊದಲು ಒತ್ತಿದೆ ಎಂದು ಇಬ್ಬರು ವಾದ ಮಾಡ ತೊಡಗಿದರು. ಆದರೆ ಆ ವಾರದ ಕ್ಯಾಪ್ಟನ್ ಆಗಿದ್ದ ಅನುಪಮಾ ಗೌಡ ಪ್ರಶಾಂತ್ ಮೊದಲು ಒತ್ತಿದರು ಎಂದು ಘೋಷಿಸಿದರು. ಇದನ್ನು ಓದಿ.. Gandhadagudi: ಗಂಧದ ಗುಡಿ ಸಿನಿಮಾ ಕಲೆಕ್ಷನ್ ಮಾಡಿದ ಹಣವನ್ನು ಏನು ಮಾಡುತ್ತಾರಂತೆ ಗೊತ್ತೇ?? ಗಟ್ಟಿ ನಿರ್ಧಾರ ತೆಗೆದುಕೊಂಡ ಅಶ್ವಿನಿ.

ಇದನ್ನು ಒಪ್ಪದ ರೂಪೇಶ್ ರಾಜಣ್ಣ ಅಪಿಲ್ಗೆ ಹೋಗಬೇಕಾಗಿ ಕೇಳಿಕೊಂಡರು. ಆದರೂ ಅನುಪಮಾ ಅದಕ್ಕೆ ಒಪ್ಪಲಿಲ್ಲ. ಹೀಗೆ ಸಾಕಷ್ಟು ವಾದ ನಡೆಯಿತು. ತಮ್ಮ ಲಗೇಜ್ ತೆಗೆದುಕೊಂಡು ರಾಜಣ್ಣ ಮನೆಯಿಂದ ಹೊರ ಹೋಗಲು ಕೂಡ ಪ್ರಯತ್ನಿಸಿದರು. ಇದೇ ವೇಳೆ ಒಂದು ವೇಳೆ ನನ್ನ ಮಾತು ಸುಳ್ಳಾಗಿದ್ದರೆ ನಾನು ನಿಮ್ಮೆಲ್ಲರ ಮುಂದೆ ಮತ್ತು ಕರ್ನಾಟಕದ ಜನತೆ ಎದುರು ಕ್ಷಮೆ ಕೇಳಲು ಸಿದ್ಧನಿದ್ದೇನೆ ಎಂದು ಕೂಡ ಅವರು ಘೋಷಿಸಿ ಬಿಟ್ಟರು. ಕಿಚ್ಚನ ಪಂಚಾಯಿತಿಯ ವೇಳೆ ಸುದೀಪ್ ಇದನ್ನು ಸ್ಪಷ್ಟಪಡಿಸಿದರು. ಪ್ರಶಾಂತ್ ಸಾಂಬರಗಿ ಮೊದಲು ಬಜಾರ್ ಒತ್ತಿದ್ದರು ಎಂದು ಅವರು ಸ್ಪಷ್ಟಪಡಿಸಿದರು. ಆನಂತರ ರೂಪೇಶ್ ರಾಜಣ್ಣ ಕೊಟ್ಟ ಮಾತಿನಂತೆ ಅನುಪಮಾ ಮತ್ತು ಪ್ರಶಾಂತ್ ಗೆ ಅವರು ಕ್ಷಮೆ ಕೇಳಿದ್ದಾರೆ. ಜೊತೆಗೆ ಇಡೀ ಕರ್ನಾಟಕದ ಜನತೆಯ ಮುಂದೆ ಅವರು ಕ್ಷಮೆ ಯಾಚಿಸಿದ್ದಾರೆ.