Bigg Boss Kannada: ಭಾರಿ ಮಿಂಚುತ್ತಿರುವ ಅರುಣ್ ಸಾಗರ್ ಗೆ ಆಕೆ ಕಂಡರೆ ಇಷ್ಟ, ಆದರೆ ವಯಸ್ಸಿಗೆ ತಕ್ಕ ಹಾಗೆ ನಡುಕೊಳ್ಳುತ್ತಿಲ್ಲ ಎಂದ ನೇಹಾ ಗೌಡ. ಮಾತು ಕೇಳಿ ಎಲ್ಲರೂ ಶಾಕ್.
Bigg Boss Kannada: ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೇ ಐದು ವಾರಗಳು ಕಳೆದು ಆರನೇ ವಾರಕ್ಕೆ ಕಾಲಿಟ್ಟಿದೆ. ನಟಿ ನೇಹ ಗೌಡ ಕಳೆದ ವಾರ ಮನೆಯಿಂದ ಹೊರ ನಡೆದಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರವಾಹಿಯ ಮೂಲಕ ಖ್ಯಾತರಾಗಿದ್ದ ಅವರು ಈ ಹಿಂದೆ ರಿಯಾಲಿಟಿ ಶೋವೊಂದರ ವಿನ್ನರ್ ಕೂಡ ಆಗಿದ್ದವರು. ಇದೇ ಜನಪ್ರಿಯತೆ ಅವರನ್ನು ಬಿಗ್ ಬಾಸ್ ಮನೆಗೆ ಕರೆಸಿಕೊಂಡಿತ್ತು. ಮೊದಲ ಸೀಸನ್ ಇಂದಲೂ ನನಗೆ ಬಿಗ್ ಬಾಸ್ ಗೆ ಕರೆ ಬರುತ್ತಿತ್ತು. ಆದರೆ ನಾನೇ ಬರುವ ಮನಸ್ಸು ಮಾಡಿರಲಿಲ್ಲ ಎಂದು ಅವರು ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದರು. ಇದೀಗ ಮನೆಯಿಂದ ಹೊರ ನಡೆದಿರುವ ಅವರು ಸಾಕಷ್ಟು ಮಾಧ್ಯಮಗಳ ಜೊತೆಗೆ ಸಂದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಕಳೆದ ನೆನಪುಗಳು, ಬಿಗ್ ಬಾಸ್ ಆಟಗಳು ಇತ್ಯಾದಿ ವಿಷಯಗಳ ಬಗ್ಗೆ ಅವರು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ನಡುವೆ ಅವರು ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದಾರೆ. ಅರುಣ್ ಸಾಗರ್ ಕುರಿತಾಗಿ ಒಂದು ಅಚ್ಚರಿಯ ಹೇಳಿಕೆಯನ್ನು ನಟಿ ನೇಹಾ ಗೌಡ ಕೊಟ್ಟಿದ್ದಾರೆ.
ನಟಿ ನೇಹ ಗೌಡ ಅವರಿಗೆ ಲಕ್ಷ್ಮೀ ಬಾರಮ್ಮ ಧಾರವಾಹಿ ದೊಡ್ಡ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಗೊಂಬೆ ಪಾತ್ರದ ಮೂಲಕ ಹೆಸರಾದ ಅವರನ್ನು ಜನರು ಪ್ರೀತಿಯಿಂದ ಗೊಂಬೆ ಅಂತಲೇ ಇಂದಿಗೂ ಕರೆಯುತ್ತಾರೆ. ಆನಂತರ ಅವರು ತಮ್ಮ ಬಾಲ್ಯದ ಗೆಳೆಯ ಚಂದು ಅವರ ಜೊತೆಗೆ ಸಪ್ತಪದಿ ತುಳಿದರು. ಕಲರ್ಸ್ ಕನ್ನಡದ ರಾಜರಾಣಿ ಶೋನಲ್ಲಿ ಭಾಗವಹಿಸಿದ ಅವರು ತಮ್ಮ ಅದ್ಭುತ ವೈವಾಹಿಕ ಜೀವನ ಮತ್ತು ಪ್ರೀತಿ ಇತ್ಯಾದಿ ಅಂಶಗಳಿಂದ ಕಾರ್ಯಕ್ರಮವನ್ನು ಗೆದ್ದರು. ಆನಂತರ ನಟಿ ನೇಹ ಗೌಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ತಮ್ಮದೇ ರೀತಿ ಆಟದಿಂದ ಅವರು ಜನರ ಮೆಚ್ಚುಗೆಗೆ ಪಾತ್ರವಾದರು. ಈ ನಡುವೆ ಅರುಣ್ ಸಾಗರ್ ಮತ್ತು ನಟಿ ನೇಹ ಗೌಡ ನಡುವೆ ಸಾಕಷ್ಟು ವಿಷಯಗಳಿಗೆ ಕಿರಿಕ್ ಆಗಿತ್ತು, ಮನಸ್ತಾಪ ಉಂಟಾಗಿತ್ತು. ಇದೀಗ ಅರುಣ್ ಸಾಗರ್ ಕುರಿತಾಗಿ ಒಂದು ಶಾಕಿಂಗ್ ಹೇಳಿಕೆಯನ್ನು ಮಾಧ್ಯಮದ ಸಂದರ್ಶನ ಒಂದರಲ್ಲಿ ನಟಿ ನೇಹ ಗೌಡ ನೀಡಿದ್ದಾರೆ. ಇದನ್ನು ಓದಿ.. ತಾಳ್ಮೆ ಕಳೆದುಕೊಂಡ ಕನ್ನಡ ಪರ ಹೋರಾಟಗಾರರು, ಬಿಗ್ ಬಾಸ್ ಮನೆಗೆ ಒಳಗಡೆ ನುಗ್ಗಿ ಮಾಡಲು ಹೊರಟಿರುವುದು ಏನು ಗೊತ್ತೇ??

ಬಿಗ್ ಬಾಸ್ ಜರ್ನಿ ನನಗೆ ಯಾವತ್ತಿಗೂ ಮರೆಯುವಂತದ್ದಲ್ಲ. ನಾನು ಅಷ್ಟು ದಿನ ಕಳೆದುದ್ದನ್ನು ಒಂದು ನಿಮಿಷದ ವೀಟಿಯಲ್ಲಿ ತೋರಿಸಿದ್ದು ನನಗೆ ನಿಜಕ್ಕೂ ತುಂಬಾ ಖುಷಿಯಾಯಿತು. ನಾನು ಇನ್ನಷ್ಟು ದಿನ ಇರಬೇಕಿತ್ತು ಅನಿಸಿದ್ದು ಸುಳ್ಳಲ್ಲ ಎಂದು ಅವರು ಹೇಳಿದ್ದಾರೆ. ಇದರ ಜೊತೆ ಜೊತೆಗೆ “ನಾನು ಬೇಕಾದರೆ ಅರುಣ್ ಸಾಗರ್ ಅವರ ಮನೆಯವರ ಬಳಿ ಕ್ಷಮೆ ಕೇಳುತ್ತೇನೆ. ಆದರೆ ನಾನು ಹೇಳಿದ್ದು ಸುಳ್ಳಲ್ಲ, ನನ್ನ ಮಾತಿನಲ್ಲಿ ನನಗೆ ತಪ್ಪು ಕಾಣುವುದಿಲ್ಲ. ಅವರ ನಡುವೆ ನನಗೆ ಸಾಕಷ್ಟು ಬಾರಿ ಮನಸ್ತಾಪ ಉಂಟಾಗಿದೆ. ಅವರು ಹೇಳಿದಂತೆ ನಡೆದುಕೊಳ್ಳುವುದಿಲ್ಲ” ಎಂದು ಹೇಳಿದ್ದು ಮಾತ್ರವಲ್ಲದೆ “ಅರುಣ್ ಸಾಗರ್ ಅವರು ವಯಸ್ಸಿಗೆ ತಕ್ಕ ಹಾಗೆ ನಡೆದುಕೊಳ್ಳುವುದಿಲ್ಲ. ಅವರು ಹೇಗೇಗೋ ಆಡುತ್ತಾರೆ. ಅವರಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ. ಬೇಕೆಂದೇ ಜಗಳ ತರುತ್ತಿದ್ದರು. ಆದರೆ ಅವರಿಗೆ ಕಾವ್ಯಶ್ರೀ ಕಂಡರೆ ತುಂಬಾ ಇಷ್ಟ ಇತ್ತು. ಅವರೊಂದಿಗೆ ಮಾತ್ರ ಚೆನ್ನಾಗಿ ಇರುತ್ತಿದ್ದರು” ಎಂದು ನಟಿ ನೇಹಾ ಗೌಡ ಹೇಳಿದ್ದಾರೆ. ಇದನ್ನು ಓದಿ.. ಮಗನನ್ನ ಶಾಲೆ ಬಿಡಿಸಲು ಮುಂದಾದ ಡಿ ಬಾಸ್ ದರ್ಶನ್ ಪತ್ನಿ ಶಾಕ್ ! ಏನಾಗಿದೆ ತಂದೆ ಮಗನ ನಡುವೆ ? ಡಿ ಬಾಸ್ ಹೇಳಿದ್ದೇನು ?