ಅಪ್ಪು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದ ಝೈದ್ ಖಾನ್. ರೊಚ್ಚಿಗೆದ್ದ ಅಭಿಮಾನಿಗಳು. ಕೊಟ್ಟ ಶಾಕಿಂಗ್ ಹೇಳಿಕೆ ಏನು ಗೊತ್ತೇ??
ಜಮೀರ್ ಅಹ್ಮದ್ ಅವರ ಪುತ್ರನ ಮೊದಲ ಚಿತ್ರ ಬನಾರಸ್ ನೆನ್ನೆ ಬಿಡುಗಡೆಗೊಂಡಿದೆ. ಚಿತ್ರ ಬಿಡುಗಡೆಗೊಂಡ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಯೋಚಿಸದೆ ತರ್ಕವಿಲ್ಲದೆ ಏನೇನೋ ಮಾತನಾಡಿ ವಿವಾದ ಸೃಷ್ಟಿ ಸೃಷ್ಟಿಸಿಕೊಂಡಿದ್ದಾರೆ. ಕಾಂತಾರ, ಗಂಧದಗುಡಿ ಚಿತ್ರದ ಬಗ್ಗೆ ಅಧಿಕ ಪ್ರಸಂಗದ ಮಾತುಗಳನಾಡಿರುವ ಅವರು ಇದೀಗ ವಿವಾದ ಮೈಮೇಲೆ ಎಳಿದುಕೊಂಡಿದ್ದಾರೆ. ಸದ್ಯ ಸದ್ದು ಮಾಡುತ್ತಿರುವ ಕಾಂತಾರ ಮತ್ತು ಗಂಧದಗುಡಿ ಚಿತ್ರಗಳ ಬಗ್ಗೆ ಲಘುವಾಗಿ ಮಾತನಾಡಿರುವ ಅವರ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಇಷ್ಟಕ್ಕೂ ಏನು ವಿವಾದ? ಝೈದ್ ಕಾಂತಾರ ಮತ್ತು ಗಂಧದಗುಡಿ ಚಿತ್ರದ ಬಗ್ಗೆ ಹೇಳಿರುವ ಮಾತುಗಳಾದರು ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಬನಾರಸ್ ಅವರ ಮೊದಲ ಚಿತ್ರ, ಮೊದಲ ಚಿತ್ರದಲ್ಲಿ ಅವರಿಗೆ ಇಷ್ಟೆಲ್ಲ ಅಹಂಕಾರ ಒಳ್ಳೆಯದಲ್ಲ ಎಂದು ಜನರು ಟೀಕಿಸುತ್ತಿದ್ದಾರೆ. ನೆನ್ನೆ ಬನರಸ್ ಚಿತ್ರ ತೆರೆ ಕಂಡಿದೆ. ಚಿತ್ರದ ಮೊದಲ ಪ್ರದರ್ಶನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚಿತ್ರದ ಬಗ್ಗೆ ಜನರು ತೋರಿಸುತ್ತಿರುವ ಪ್ರತಿಕ್ರಿಯೆ ಬಗ್ಗೆ ಅವರು ವಿವರಿಸಿದ್ದರು. ಈ ನಡುವೆ ಅತಿಯಾದ ಉತ್ಸಾಹದಲ್ಲಿ ಅವರು ಕಾಂತಾರ ಮತ್ತು ಗಂಧದಗುಡಿ ಚಿತ್ರದ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ತಮ್ಮ ಚಿತ್ರವನ್ನು ಹೊಗಳಿಕೊಳ್ಳುವ ಭರದಲ್ಲಿ ಬೇರೆ ಚಿತ್ರಗಳ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಕಾಂತಾರಾ ಮತ್ತು ಗಂಧದಗುಡಿ ಸದ್ಯದ ಮಟ್ಟಿಗೆ ದೊಡ್ಡ ಸದ್ದು ಮಾಡುತ್ತಿರುವ ಚಿತ್ರಗಳಾಗಿವೆ. ಹೀಗಿದ್ದರೂ ಕೂಡ ಆ ಚಿತ್ರಗಳನ್ನು ಅತ್ಯಂತ ಲಘುವಾಗಿ ಮಾತನಾಡಿದ್ದಾರೆ.

ಮಾಧ್ಯಮದವರ ಜೊತೆಗೆ ಮಾತನಾಡುತ್ತಾ ಜೈದ್ ಖಾನ್ ಕಾಂತಾರ ಒಂದೆರಡು ವಾರ ಓಡುವುದು ಅನುಮಾನ ಎಂದುಕೊಂಡಿದ್ದೆ, ಹೀಗಿದ್ದರೂ ಕೂಡ ಕಾಂತಾರ ಚಿತ್ರ ಇಂದಿಗೂ ಪ್ರದರ್ಶನವಾಗುತ್ತಿದೆ. ದೊಡ್ಡಮಟ್ಟದ ಸದ್ದು ಮಾಡುತ್ತಿದೆ. ನಾನಂತೂ ಈ ಚಿತ್ರ ಇಷ್ಟರಮಟ್ಟಿಗೆ ಹೆಸರು ಮಾಡುತ್ತದೆ ಎಂದುಕೊಂಡೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಇದರ ಜೊತೆಜೊತೆಗೆ ಗಂಧದಗುಡಿ ಚಿತ್ರ ಯಾವ ದಿನಾಂಕದಂದು ಬಿಡುಗಡೆಯಾಗುತ್ತದೆ ಎಂದೇ ನನಗೆ ಗೊತ್ತಿರಲಿಲ್ಲ. ಅಂತಹ ಚಿತ್ರ ಈಗ ಒಳ್ಳೆಯ ಗಳಿಕೆ ಕಾಣುತ್ತಿದೆ. ಹೀಗಿರುವಾಗ ನಮ್ಮ ಚಿತ್ರವೂ ಕೂಡ ಜನರಿಂದ ಜನರಿಗೆ ಪರಿಚಯವಾಗಿ ದೊಡ್ಡಮಟ್ಟದ ಯಶಸ್ಸು ಕಾಣುತ್ತದೆ ಎಂದು ಹೇಳಿದ್ದಾರೆ. ತಮ್ಮ ಚಿತ್ರ ಒಳ್ಳೆಯ ಪ್ರದರ್ಶನ ಕಾಣುತ್ತದೆ ಎನ್ನುವ ನಿರೀಕ್ಷೆ ಇದೆ ಎನ್ನುವ ಅರ್ಥದಲ್ಲಿ ಮಾತನಾಡಲು ಹೋಗಿ ಕಾಂತಾರ ಮತ್ತು ಗಂಧದಗುಡಿ ಚಿತ್ರದ ಬಗ್ಗೆ ಜೈದ್ ಲಘುವಾಗಿ ಮಾತನಾಡಿದ್ದಾರೆ. ಇದನ್ನು ಕೇಳಿ ನೆಟ್ಟಿಗರು ಕೆಂಡಮಂಡಲರಾಗಿದ್ದಾರೆ. ಪುನೀತ್ ಅವರ ಚಿತ್ರದ ಬಗ್ಗೆ ಇಡೀ ದೇಶಕ್ಕೆ ಗೊತ್ತಿತ್ತು. ಹೀಗಿರುವಾಗ ಇವರಿಗೆ ಗಂಧದಗುಡಿ ಚಿತ್ರದ ಬಿಡುಗಡೆ ದಿನಾಂಕ ಗೊತ್ತಿರಲಿಲ್ಲವ, ಮೊದಲ ಚಿತ್ರಕ್ಕೆ ಇಷ್ಟು ದುರಹಂಕಾರ ಒಳ್ಳೆಯದಲ್ಲ. ಕಾಂತಾರ ಮತ್ತು ಗಂಧದಗುಡಿಯಂತಹ ಚಿತ್ರಗಳ ಬಗ್ಗೆ ಮಾತನಾಡುವ ಯೋಗ್ಯತೆ ಇವನಿಗಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.