ತಾಳ್ಮೆ ಕಳೆದುಕೊಂಡ ಕನ್ನಡ ಪರ ಹೋರಾಟಗಾರರು, ಬಿಗ್ ಬಾಸ್ ಮನೆಗೆ ಒಳಗಡೆ ನುಗ್ಗಿ ಮಾಡಲು ಹೊರಟಿರುವುದು ಏನು ಗೊತ್ತೇ??

219

ಬಿಗ್ ಬಾಸ್ ನಲ್ಲಿ ಬಾಯಿಗೆ ಬಂದಂತೆ ಏನೇನೋ ಮಾತನಾಡುವ ಮೂಲಕ ಪ್ರಶಾಂತ್ ಸಂಬರಗಿ ಮತ್ತೊಂದು ವಿವಾದವನ್ನು ಮೈಮೇಲೆ ಎಳಿದುಕೊಂಡಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ ಒಂಬತ್ತು ಭರ್ಜರಿಯಾಗಿ ನಡೆಯುತ್ತಿದೆ. ಈ ಸಲ ಪ್ರವೀಣರು ನವೀನರು ಎಂಬ ರೀತಿ ಕಾರ್ಯಕ್ರಮ ನಡೆಯುತ್ತಿದ್ದು ಪ್ರವೀಣರ ವಿಭಾಗದಲ್ಲಿ ಕಳೆದ ಸೀಸನ್ ನಲ್ಲಿ ಪಾಲ್ಗೊಂಡಿದ್ದ ಪ್ರಶಾಂತ್ ಸಾಂಬರಗಿ ಮತ್ತೆ ಎಂಟ್ರಿ ಕೊಟ್ಟಿದ್ದರು. ತಮ್ಮ ಆಟ, ಮಾತು, ಜಗಳ ಕಿತ್ತಾಟದಿಂದಲೇ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರು ಒಂದು ವಿವಾದಾತ್ಮಕ ಮಾತು ಹೇಳುವ ಮೂಲಕ ಮತ್ತೆ ವಿವಾದ ಮೈಮೇಲೆ ಇಳಿದುಕೊಂಡಿದ್ದಾರೆ. ಪ್ರಶಾಂತ್, ರೂಪೇಶ್ ರಾಜಣ್ಣ ಅವರ ನಡುವೆ ಕ್ಯಾಪ್ಟನ್ ವಿಷಯಗಳಿಗೆ ಇಬ್ಬರ ನಡುವೆ ಮನಸ್ತಾಪ ಏರ್ಪಟ್ಟಿತ್ತು. ಇದೀಗ ಕನ್ನಡ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡಿ ದೊಡ್ಡ ವಿವಾದ ಒಂದನ್ನು ಅವರು ಎದುರಿಸುತ್ತಿದ್ದಾರೆ.

ಕ್ಯಾಪ್ಟನ್ಸಿ ಟಾಸ್ ಗಾಗಿ ಬಿಗ್ ಬಾಸ್ ಆಟಗಾರರಿಗೆ ಒಂದು ಟಾಸ್ ನೀಡಿದೆ. ಅದರಂತೆ ಬಿಗ್ ಬಾಸ್ ಸೂಚನೆ ಬಂದಾಗ ಯಾರು ಮೊದಲಿಗೆ ಬಜರ್ ಒತ್ತುತ್ತಾರೋ ಅವರಿಗೆ ಆಟ ಆಡುವ ಅವಕಾಶ ನೀಡಲಾಗುತ್ತದೆ. ಗೆದ್ದರೆ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ. ಹೆಚ್ಚು ಗೆಲುವು ದಾಖಲಿಸಿದವರು ಕ್ಯಾಪ್ಟನ್ ಆಗಬಹುದು. ಈ ಚಟುವಟಿಕೆಯನ್ನು ಬಿಗ್ ಬಾಸ್ ನೀಡಿದೆ. ತಾನು ಮೊದಲು ಬಜರ್ ಒತ್ತಿದ್ದೇನೆ ಎಂದು ರೂಪೇಶ್ ರಾಜಣ್ಣ ಮತ್ತು ಪ್ರಶಾಂತ ಇಬ್ಬರ ನಡುವೆಯೂ ದೊಡ್ಡ ಜಗಳ ಏರ್ಪಟ್ಟಿತ್ತು. ತಕ್ಕಮಟ್ಟಿಗೆ ಕ್ಯಾಪ್ಟನ್ ಅನುಪಮಾ ಗೌಡ ಇದನ್ನು ನಿವಾರಿಸಲು ಪ್ರಯತ್ನಿಸಿದರು ಕೂಡ ಅವರಿಬ್ಬರ ನಡುವಿನ ಗುದ್ದಾಟ ನಿಲ್ಲಲೇ ಇಲ್ಲ. ಪ್ರಶಾಂತ್ ಬಾಯಿಗೆ ಬಂದ ಹಾಗೆ ಏನೇನೋ ಮಾತನಾಡಿದರು. ಆದರೂ ರೂಪೇಶ್ ಮಿತಿಮೀರದೆ ಅವರಿಗೆ ತಕ್ಕಮಟ್ಟಿಗೆ ಉತ್ತರ ನೀಡಿದರು.

ಈ ವಿವಾದದ ನಂತರವೂ ಕೂಡ ಪ್ರಶಾಂತ್ ತಮ್ಮ ಉದ್ಧಟತನದಿಂದ ಏನೇನು ಮಾತನಾಡುವ ಮೂಲಕ ವಿವಾದವನ್ನು ಎಳೆದುಕೊಂಡಿದ್ದಾರೆ. ತಾನು ಗೆದ್ದೆ ತಾನು ಹೇಳಿದ ಮಾತೇ ನಡೆಯಿತು ಎಂಬ ಅಹಂಕಾರದಿಂದ ಪ್ರಶಾಂತ್ ಕನ್ನಡಿಗರಿಗೆ ಸರಿಯಾಗಿ ಬುದ್ಧಿ ಕಲಿಸಿದೇ, ಪಾಠ ಮುಟ್ಟಿಸಿದೆ ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಇದರ ಜೊತೆ ಜೊತೆಗೆ ಕೆಲವು ಕೆಟ್ಟ ಪದಗಳನ್ನು ಅವರು ಬಳಸಿದ್ದು ಬಿಗ್ ಬಾಸ್ ಅದನ್ನು ನೀವು ಮ್ಯೂಟ್ ಮಾಡಿ ಪ್ರಸಾರ ಮಾಡಿದೆ. ಇದರಿಂದ ಕನ್ನಡಪರ ಹೋರಾಟಗಾರರು ಕೆಂಡಮಂಡಲರಾಗಿದ್ದಾರೆ. ಅನಗತ್ಯವಾಗಿ ಬೇಕೆಂದೇ ಕನ್ನಡಪರ ಹೋರಾಟಗಾರರ ಕುರಿತು ಅವಹೇಳನ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಕನ್ನಡಪರ ಹೋರಾಟಗಾರರು ಧರಣಿ ಕುಳಿತಿದ್ದಾರೆ. ಅದು ಕೂಡ ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿ ಮುಂಭಾಗದಲ್ಲಿ.

ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಸ್ಥಳದಲ್ಲಿಯೇ ಕನ್ನಡ ಪರ ಹೋರಾಟಗಾರರು ಪ್ರತಿಭಟನಾ ನಿರತರಾಗಿದ್ದಾರೆ. ಪ್ರಶಾಂತ್ ರವರನ್ನು ಬಿಗ್ ಬಾಸ್ ಶೋ ಇಂದ ಹೊರಗೆ ಹಾಕಬೇಕು ಅವರು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬಿಗ್ ಬಾಸ್ ತಂಡ ಎಷ್ಟೇ ಪ್ರಯತ್ನ ಪಟ್ಟರು ಅವರನ್ನು ಮನವೊಲಿಸಲಾಗಿಲ್ಲ. ನಿರಂತರವಾಗಿ ಹೋರಾಟ ಮಾಡುತ್ತಿದ್ದು ಪ್ರಶಾಂತ್ ರವರು ಬೇಕೆಂದೇ ಇಷ್ಟೆಲ್ಲ ಮಾಡಿದ್ದು ನಮಗೆ ಅಪಮಾನ ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ. ಇನ್ನು ಈ ಪ್ರತಿಭಟನೆ ಎಲ್ಲಿಯವರೆಗೆ ಸಾಗುತ್ತದೆ ಗೊತ್ತಿಲ್ಲ. ಪ್ರಶಾಂತ್ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವರೋ ಅಥವಾ ಕ್ಷಮೆ ಯಾಚಿಸುವರು ಕಾದು ನೋಡಬೇಕಿದೆ.